ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡಲ ತಟದಲಿ…

ಬೆರಳ ಸ್ಪರ್ಶ ಕೊರಳ ಸವಿದು…
ಅರ್ಚನಾ.ಎಚ್
ಕಡಲ ತಟದಿ ತಂಟೆಕೋರಿ
ಸಡಿಲಮನಸ ಕೊನರ ಕುವರಿ
ಸಾಕು ಮಾಡು ತಾಕಲಾಟ
ಮುರಿದು ನಿನ್ನ ಮೌನಲಹರಿ
ಹಂಪಲಂತೆ ಸೆಳೆವ ಸೂರ್ಯನೊಡಲ
ತುಂಬಾ ಉರಿಯಿದೆ
ಸಂಜೆಕಾಂತಿ ಕೆಂಪ ಸರಿಸೆ
ಕರಿಯ ಮುಗಿಲು ಹುದುಗಿದೆ
ಅಂತೆ ಕಂಡ ಚಂದ್ರಬಿಂಬ
ಕಡಲ ತೊಗಲನಿಣುಕಿದೆ
ಕಂತೆ ರಾಶಿ ಚುಕ್ಕಿ ಬಳಗ
ಬಿಂಬ ಕಾಣ ಹೊರಟಿದೆ
ಅಲೆಗಳೆದೆಯ ವೇಗೋತ್ಕರ್ಷ
ಮುಗಿಲ ಮಿಂಚ ಮೀರಿದೆ
ಸಂಚನರಿಯದಂತೆ ನೀರ ನಾದ
ನಿರುತ ನಿನ್ನ ಸ್ತುತಿಸಿದೆ..
ಅನಲನುಸಿರಲನುರಕ್ತವಾಗೆ,
ಅವನಿಯವನನಪ್ಪಿದೆ

ತಂಪು ಗಾಳಿ,ಇಂಪ ಗಾನ
ನಡುವೆ ಪ್ರೀತಿ ನವಿರಿದೆ
ನುಣುಪು ಕಲ್ಲು ಒನಪಿನಲ್ಲೆ
ನಲ್ಲನೆದೆಯನೊತ್ತಿದೆ
ಚಿಪ್ಪಿನೆದೆಯ ಸ್ವಾತಿಮುತ್ತು
ಗಪ್ಪನೆಂದು ಮಲಗಿದೆ
ಇರುಳ ಕರುಳ ಮರುಳು ಮಾಡಿ
ಮರಳ ತಟವ ತಲುಪಿದೆ
ಅದರ ತುಡಿತ ನಿನಗು ತಾಕಿ
ಅಧರ ನಡುಕಗೊಂಡಿದೆ
ಬೆರಳ ಸ್ಪರ್ಶ ಕೊರಳ ಸವಿದು
ನಾಭಿಯತ್ತ ಹೊರಳಿದೆ
ಎದೆಯ ರಾಗ ಉದಯ ಭಾನು
ಮೂಡದಂತೆ ಸ್ತುತಿಸಿದೆ
ಮಿಲನ ಸುಖವ ಸವಿದೆ ನಗುತ
ಕಡಲೊಡಲಗರ್ಭ ತಣಿದಿದೆ‌
ಸುರಿದ ಮಳೆಯಲ್ತೊಳೆದ ಇಳೆಯ
ಘಮಲು ಅಮಲು ತರಿಸಿದೆ

‍ಲೇಖಕರು avadhi

29 September, 2019

2 Comments

  1. VIJAY Kumar

    Kannada padagalanna yehst muddagi balake madkothiya madthiy

    • Archana H

      Thank u…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading