ಮಾಧವಿಲತಾ
ಬದಲಾಯಿಸಿ ನೋಡುವಷ್ಟರಲ್ಲಿ
ಅವನಾಗಲೇ ಎದ್ದು ಹೋಗಿಯಾಗಿತ್ತು!
ಪಡೆಯುವ ಪ್ರತಿ ಗಳಿಗೆಯೂ ತನ್ನದೆಂದು
ಬಾಚಿಕೊಂಡ ಅವನ ಬಾಹುಗಳು
ನೀಡುವಾಗ ಮಾತ್ರ ಅವಸರತೋರಲೇ ಇಲ್ಲ!

ದೂರದ ಬೆಟ್ಟ ಮಾತ್ರ ನುಣ್ಣಗಿರುವುದಿಲ್ಲ
ಕೆಲವೊಮ್ಮೆ ಹತ್ತಿರದ ಬೆಟ್ಟಕೂಡ
ಬೇರ್ಪಟ್ಟ ಮೇಲೆಯೇ ಬೆವರ ನಾತ ಅರಿವಿಗೆ ಬಂದಿದ್ದು ಅವನ ಬಾಹುಗಳಿಂದ
ಹೊತ್ತಿ ಉರಿಸಿದ ಸುಖದ ಅಗ್ಗಿಷ್ಠಿಕೆಗೆ ಉರುವಲಾದ
ಬಯಕೆಗಳು ಬೂದಿಯಾದ ಮೇಲೂ
ಉರಿಯಬೇಕೆಂದರೆ ನಾನು ನಿತ್ಯ ಹರಿದ್ವರ್ಣದ ಕಾಡಾಗಬೇಕಷ್ಟೆ!






0 Comments