ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿಸಿ ಚುಂಬಿಸಿಕೊಳ್ಳುವ ಪತ್ರ…

ನೋಟ

download

ದತ್ತು ಕುಲಕರ್ಣಿ

ಆಸ್ಟ್ರೇಲಿಯ

lips

 

ಸುಟ್ಟುಕೊಂಡು ನೀಗಿಕೊಳ್ಳುವ ಬತ್ತಿ

ಬೆಳಗಿ ನಮಿಸಿಸಿಕೊಳ್ಳುವ ದೀಪ

ಬರೆದು ಮರೆಯಾಗುವ ಪೆನ್ನು

ಓದಿಸಿ ಚುಂಬಿಸಿಕೊಳ್ಳುವ ಪತ್ರ

lips

ಕುಗ್ಗಿ-ಹಿಗ್ಗಿ ಬಳಲುವ ಸ್ನಾಯುಗಳು

ನಕ್ಕು ಸುಖಿಸುವ ತುಟಿಗಳು

ಬಿಸಿಯುರಿಗೆ ತಳ ಕರಕಲಾದ ಪಾತ್ರೆ

ಘಮ-ಘಮಿಸಿ ಚಪ್ಪರಿಸಿಸಿಕೊಳ್ಳುವ ಅಡಿಗೆ

ತೊಳೆದು ಕೊಳೆಯುವ ನೀರು

ಥಳ-ಥಳಿಸುವ ಮೈ-ಮನೆ-ಕಾರು

ಕಾಪಾಡಿ ತಿರಸ್ಕಲ್ಪಡುವ ಗಡಸು ಮುಳ್ಳು

ಉಳಿದು ಸ್ವೀಕರಿಸಲ್ಪಡುವ ನವಿರು ಹೂವು

ತನಗ ಹೆಂಗ ಬೇಕೊ ಹಂಗ ಇರೋದ ಜಗತ್ತು…

ನೋಡಿದಂಗ  ನೋಟ ಅನ್ನೊದು  ಅದರ ಕರಾಮತ್ತು

lips

 

‍ಲೇಖಕರು admin

18 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading