ಮಣ್ಣ ಹಣತೆ
– ಎಂ ಎಂ ಶೇಖ್ ಯಾದಗಿರಿ

ಈ ಭುವಿಯ ಗಂಡಂದಿರನ್ನು
ಒಲೆಯಲಿಕ್ಕು ಎಂದ್ಹೇಳಿ
ಎದ್ದು ನಡೆದೆ …
ಆದರೆ ಈ ಭುವಿಯಲಿ
ಒಲೆಗಳೆಲ್ಲಾ ಬಂಡಾಯ ಎದ್ದಿವೆ
ದಹಿಸಲು ಕೊಡದೆ ಬೆಂಕಿ .
ನಮ್ಮನ್ನು ಉರಿಸಲಷ್ಟೇ
ತಾಕತ್ತು ಈ ಬೆಂಕಿಗೆ..
ನೀನೋ ಕರ್ಪೂರವಾಗಿ
ಕದಳಿಯಲಿ ಉರಿದು
ಕೊನೆಗೆ ಸೇರಿದ್ದು ಅವನನ್ನೇ !!
ಅವನೋ ಭೂಮಿಗೆ
ಇಳಿದು ನೋಡದ ಭಂಡ ..!!!!
ಎರಡಾಗಿ ಒಂದಾಗಿ ಮೂರಾಗಿ
ಮೊಳ ಮೂರಕ್ಕೆನೇ ಜೀಕಬೇಕು
ಜೀತಕ್ಕೆಂದೇ ಉರಿದು
ಬಂದ ಉಲ್ಕೆಗಳಿಗೆ
ಹಾಗೂ ಬರೆಯಲೇನುಂಟು ?!
ಭೂಮಿಗೊಂದು
ಕಥೆ ಬರೆದವರುಂಟೇ …
ಆಗಸಕ್ಕೊಂದು
ಕಾವ್ಯ ಬರೆದವರುಂಟೇ ….
ಅಷ್ಟಕ್ಕೂ ನೀನಾಳದ
ಬದುಕು ಬಾಳಿದವರು ನಾವು .
ಮೂರು ಹಿಡಿ ಮಣ್ಣಿಗೇನೇ
ಹಿಡಿಹಿಡಿಯಾಗಿ ಉದುರಬೇಕು
ಒರಗಿಸಿಕೊಳ್ಳುವ ಮಣ್ಣು
ಮಾಡಬಾರದಲ್ಲವೇ ಪ್ರಶ್ನೆ ..?!!!!






Arthapoorna olleya kavite. Thumbane hidisithu. Abhinandanegalu
Nice poem..
ಕವನ ಮೆಚ್ಚುಗೆಯಾಯಿತು, … ಮನುವಿನ ಮೇಲೆ ಸಾತ್ವಿಕ ಮುನಿಸು
ತುಂಬ ಅರ್ಥಪೂರ್ಣ ಕವಿತೆ.
ಮೆಚ್ಚುಗೆಯಾಯಿತು.
ಸಶಕ್ತ ಕವಿತೆ…
ಏನಿದರ ಮರ್ಮ
ಹಣತೆ,ಗಂಡ,ಮಣ್ಣು, ಒಲೆ,ಬೆಂಕಿ
ನೀನಾಳದ ಬದುಕ ಬಾಳಿದವರು ನಾವು – ಒಳ್ಳೆಯ ಸಾಲು ಶೇಖ್, ನಿಜ ಅಕ್ಕನೇನೊ ಕೊಡವಿಕೊಂಡೆದ್ದು ಧನ್ಯಳಾಗಿಬಿಟ್ಟಳು. ಆದರೆ ಅವಳಷ್ಟೆ ತಂತಮ್ಮ ಸಂಸಾರಗಳೊಡನೆ ತಕರಾರಿರುವ ಅನೇಕ ಅಕ್ಕಂದಿರು ಅವಳು ಆಳದೆ ಹೋದ ಸಂಸಾರ ಭವಸಾಗರವನ್ನು ” ಆಳಿ” ಗೆದ್ದರು. ಅಕ್ಕನದು ಪಲಾಯನ ಅಂದು ತಳ್ಳಿಬಿಡುವ ಜೀವಯಾನವೇನಲ್ಲ , ನಿಜ. ಆದರೆ ಅಂಥದ್ದೆ ವಿಷಮ ದಾಂಪತ್ಯದಲ್ಲಿ ಮಕ್ಕಳನ್ನೂ ಪಡೆದು ಮೂಗುಬ್ಬಸದ ಕಾವು ಅವಕ್ಕೆ ತಟ್ಟದಂತೆ ಸಂಸಾರ ಸಾಗಿಸಿ ಹೆಸರಿರಲಿ ಒಂದೊಳ್ಳೆಯ ಮಾತನ್ನೂ ತನ್ನ ಸಮುದಾಯದಿಂದ ಪಡೆಯದೆ ಮೌನವಾಗಿ ಮಣ್ಣು ಸೇರಿದ ಅದೆಷ್ಟು ಅಕ್ಕಂದಿರು ಆಗಿಹೋಗಿಬಿಟ್ಟರು, ಆಗುತ್ತಲೆ ಇದ್ದಾರೆ, ಆಗಲೂಬಹುದು! ಇಂಥಹ ಅನೇಕ ಹೆಣ್ಣುಮಕ್ಕಳೊಡನೆ ಅನೇಕ ವರ್ಷ ಅವರ ನೆರೆಯವಳಾಗಿಯೊ, ಸಹೋದ್ಯೋಗಿಯಾಗಿಯೊ, ಗೆಳತಿಯೋ ಆಗಿ ಸಹಚರಿಸಿರುವ ನನಗೆ ಆ ಅಕ್ಕನಿಗಿಂತ ಇವರೆ ಗ್ರೇಟ್ ಅಂತ ಅನ್ನಿಸಿದ್ದು ನಿಜ.
NIce poem by Yadgir very good
ಜಗದುದ್ದ,ಮುಗಿಲುದ್ದ, ಮಾತನಾಡಿದರೂ ಪುರುಷ ಪಕ್ಷಪಾತವಾದ ತೀರ್ಪು ಎಲ್ಲೆಲ್ಲೂ .
ಪದ್ಯ ತುಂಬಾ ಇಷ್ಟವಾಯ್ತು, ಅಭಿನಂದನೆಗಳು, ಮೇಡಂ.
Good one liked it
-Aanil
spandisida ellariguu dhanyavaadagaLu.