ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೇ ಒಂದು ಜೊತೆ ಹೊಸ ಲಂಗ ಬ್ಲೌಸು, ಬಣ್ಣದ ಬಳೆಗಳು..

ವಿನತೆ ಶರ್ಮ


ದೀಪಗಳ ನಡುವಿನ ಸೇತುವಾದರೆ
ದೀಪಗಳ ಸಾಲು
ಸಾಂಬ್ರಾಣಿ ಹೊಗೆಸುತ್ತು
ಸಂಭ್ರಮದ ಓಡಾಟ
ಸಡಗರದ ಹಂಚಿಕೆ.
 
ಪುಟ್ಟಿಯ ಕನಸು-
ದೊಡ್ಡಮನೆಯ ರೇಷ್ಮೆಲಂಗದ ಹುಡುಗಿ
ತಾನಾಗುವುದು ಯಾವಾಗ?
 
ಬಗಲಲ್ಲಿ ತಮ್ಮನನ್ನು ಹೊತ್ತಿರುವ
ಪುಟ್ಟಿಯ ಆಸೆ
ಒಂದೇ ಒಂದು ಜೊತೆ
ಹೊಸ ಲಂಗ ಬ್ಲೌಸು, ಬಣ್ಣದ ಬಳೆಗಳು.
 
ದೀಪಗಳ ದ್ವೀಪಗಳು
ನಾವು ಕೆಲವರು.
ನಮ್ಮ ಮನೆಯ ಹರ್ಷ
ನಮ್ಮದಷ್ಟೇ.ಮನೆಯೊಳಗೇ.
ಮನ ಮನ ಮುಟ್ಟಿಲ್ಲ ಇನ್ನೂ.
 
ಬೀದಿ ಸಾಮಾನು ತುಂಬಿದ
ಪ್ಲಾಸ್ಟಿಕ್ಚೀಲ ಬೆನ್ನಿನ ಮೇಲೆ.
ಒಮ್ಮೆ ನಿಂತು
ದೊಡ್ಡ ಮನೆಯತ್ತ ದಿಟ್ಟಿಸುವ
ಅವನ ಆ ಚೀಲ
ಡಬ್ಬಡಬ್ಬಗಳ
ಸುರು ಸುರು ಬತ್ತಿ, ರಾಕೆಟ್, ಫ್ಲವರ್ಪಾಟ್, ಡಂಡಂಪಟಾಕಿ
ಹಬ್ಬದ ಸಿಹಿಗಳಿಂದ ತುಂಬಿದರೆ?!
 
ದೀಪಗಳು ತುಂಬಿರುವ
ದೀಪಗಳೇ ಇಲ್ಲದ,
ನಮ್ಮ ನಮ್ಮ ಈ ಎಷ್ಟೋ ದ್ವೀಪಗಳ ನಡುವಿನ
ಸೇತು ನಾವಾದರೆ?
 
ಅವನು ಹಚ್ಚುವ ಅವನದೇ,ಆ ಹೆಮ್ಮೆಯ
ಸುರು ಸುರು ಬತ್ತಿ
ನಮ್ಮ ಸಂಭ್ರಮ ಸಡಗರ.
 
ಪುಟ್ಟಿಯ ನಗು,ಕಂಗಳ ಕಾಂತಿ,
ಗರಿ ಗರಿ ಹೊಸಲಂಗ
ಘಲ್ಘಲ್ಬಳೆಗಳು
ನಮ್ಮ ಬಣ್ಣ ಬಣ್ಣದ ಹಣತೆಗಳು.
 
 
 

‍ಲೇಖಕರು G

23 October, 2014

3 Comments

  1. Anonymous

    ಕವಿತೆ ಚೆನ್ನಾಗಿದೆ.’ದೀಪಗಳ ದ್ವೀಪಗಳು……… ಮನ ಮನ ಮುಟ್ಟಿಲ್ಲ ಇನ್ನೂ’ ಇಷ್ಟವಾದ ಸಾಲಿದು.

  2. mmshaik

    nice..

  3. ಸಾವಿತ್ರಿ.ವೆಂ.ಹಟ್ಟಿ

    ಚೆಂದದ ಕವನರಿ. ಇಷ್ಟವಾಯಿತು ಬಹಳ.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading