ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಹನಿ ನೆತ್ತರು…

JohnSuntikopa

ಜಾನ್ ಸುಂಟಿಕೊಪ್ಪ

1
ಒಂದು ಹನಿ ನೆತ್ತರು
ಇಗೋ
ಮೈ ಚಾಚಿ ಮಲಗಿದೆ;

ಯಾವ ಕನಸುಗಳು ಕತ್ತ
ಕೊಯ್ದುಕೊಂಡವೋ ಕಾಣೆ.,
ಪಾಪ..
ಚಿಲ್ಲನೆ ಚಿಮ್ಮಿದೆ,
ಛೇ..
ನಾನು ನೋಡಬಾರದಿತ್ತು;
ನೆತ್ತರ ಕಳೆದುಕೊಂಡ ಆತ್ಮ
ಏದುಸಿರು ಬಿಡುತ್ತಿದೆ.,
ಬಹುಶಃ
ನೆತ್ತರ ಕೋಶ ಕೋಶದಲೂ
ಕೊಲೆಗಟುಕನ ನೆರಳಿರಬೇಕು;
ಕುಕ್ಕರುಗಾಲಲ್ಲಿ ಕುಳಿತ ನಾನು
ಬಗ್ಗಿ ಬಗ್ಗಿ ದಿಟ್ಟಿಸಿ ನೋಡುತ್ತೇನೆ,
ಇರುವೆಯೊಂದು
ದಿಕ್ಕಾಪಾಲಾಗಿ ಓಡುತ್ತಿದೆ,
ಕೋಣೆಯ ಗೋಡೆ ಗೋಡೆಯಲೂ ಪ್ರತಿಧ್ವನಿ-
“ಕಾಪಾಡಿ,,. ಕಾಪಾಡಿ,..”
ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್
ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ

‍ಲೇಖಕರು G

21 September, 2015

1 Comment

  1. Shanthi k Appanna

    Soulful …..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading