ಒಂದು ಚಪ್ಪಲಿ ಟಾಸ್ಕು ! 

pradeep hegde

ಫ್ಲೋರಿಡಾದಿಂದ ಪ್ರದೀಪ್ ಹೆಗ್ಡೆ 

ಚಪ್ಪಲಿ ಬಗೆಗೆ ಓದಿದಾಗ ಹಳೆಯಘಟನೆಯೊಂದು ನೆನಪಾಗುತ್ತಿದೆ, ನಿಮ್ಮೊಂದಿಗೆ ಹಂಚಿಕೊಳ್ಳುವೆ.

ನಾನಾಗ ೫ ನೇ ತರಗತಿ ನನ್ನ ಪಕ್ಕದ ಮನೆ ಸ್ನೇಹಿತ ಮಧುಕರ ೩ ನೇ ತರಗತಿ.. ನಮ್ಮ ದಿನಚರಿಯ ಬಹುತೇಕ ಬಾಗ – ಆಟ – ಸುತ್ತಾಟಗಳು ಒಟ್ಟಿಗೆ ಜರುಗುತ್ತಿದ್ದವು

ಮೊದಲೆರಡು ವರ್ಷ ಮನೆ ಹತ್ತಿರ ವಿದ್ದ ಶಾಲೆಗೆ ಹೋಗುತ್ತಿದ್ದ ಮಧುಕರ, ಮನೆ ಇಂದ ಒಂದು ಮೈಲಿ ದೂರ ನಾನು ಹೋಗುತ್ತಿದ್ದ ಪೇಟೆಯ ಶಾಲೆಗೆ ಸೇರಿಕೊಂಡಿದ್ದ. ಹೀಗಾಗಿ ಮನೆಯಲ್ಲಿ  ಅಲ್ಲದೆ ಶಾಲೆಗೆ ಹೋಗಿ ಬರುವಾಗಲೂ ಜೊತೆಗಾರ.

chappalsಪ್ರತಿವರ್ಷ ಮಳೆಗಾಲ – ಶಾಲೆ ಪ್ರಾರಂಭ ಸಮಯದಲ್ಲಿ ಊರ ಕಡೆ (ಸಿರಸಿ – ಸಿದ್ದಾಪುರ ) ಜೊತೆ ಪ್ಲಾಸ್ಟಿಕ್ ಚಪ್ಪಲಿಯನ್ನು  , ಯೂನಿಫಾರ್ಮ್ ಹೊಸ ಪುಸ್ತಕಗಳ ಜೊತೆ ಸೇರಿಸಿಯೇ ಕೊಳ್ಳುತ್ತಿದ್ದೆವು.

ಆ ವರ್ಷವೂ ಎಂದಿನಂತೆ ಎಲ್ಲ ಸಾಗುತ್ತಿರುವಾಗ ಒಂದು ಬಾನುವಾರ ಇಬ್ಬರು ಕಾಡು ಮಾವಿನನ ಹಣ್ಣು ಹೆಕ್ಕುವ ನೆಪ ಮಾಡಿ ಮನೆ ಇಂದ ಸ್ವಲ್ಪ ದೂರವಿರುವ ಹೊಳೆ ಹತ್ತಿರ ಸಾಗಿದೆವು, ಅದೇ ತಾನೇ ಮಳೆ ಬಿದ್ದು ನಿಂತದ್ದರಿಂದ ಎತ್ತರ ಪ್ರದೇಶದಲ್ಲಿರುವ ನೀರೆಲ್ಲ ಹರಿದು ಹೊಳೆ ಸ್ವಲ್ಪ ರಭಸಗೊಂಡಿತ್ತು. ಹತ್ತಿರ ಹೋದ ನನಗೆ ಅದನ್ನು ದಾಟಿ ಅದರ ಮುಂದಿರುವ ದಾರಿ ಎಲ್ಲಿಗೆ ಹೋಗಬಹುದೆಂಬ ಕುತೂಹಲವಾಯಿತು. ಹಾಗೆ ನಾನು ಹೇಳುವುದೆಲ್ಲವು ಒಳ್ಳೆಯದೇ ಎಂದು ಗಾಢವಾಗಿ ನಂಬಿರುವ ಮಧುಕರನನ್ನು ಒಪ್ಪಿಸಿ ಹೊಳೆ ದಾಟಲು ಶುರು ಮಾಡಿದೆವು, ಕಾಲಿನಲ್ಲಿರುವ ತಿಂಗಳು ಕೂಡಾ ಸವೆಯದ ಚಪ್ಪಲಿಯೊಂದಿಗೆ.

ಆರಂಭ ದಲ್ಲಿ ಸಲೀಸಾಗೆ ದಾಟುತ್ತಾ ಹೊಳೆ ಮಧ್ಯ ತಲುಪಿದಾಗ ರಭಸ ಜೋರಾದ್ದರಿಂದ ಇನ್ನು ಮುಂದೆ ಹೋಗುವುದು ಆಪಾಯ ಎಂದು ದೊಡ್ಡವನಾದ ನಾನು ನಿರ್ಧರಿಸಿ ವಾಪಸ್ ಆಗೋಣ ಎಂದೇ, ಹೂಂ ಎಂದು ತಿರುಗಿದ ಮದುಕರ, ಅಣ್ಣ  ಎಂದು ಜೋರಾಗಿ ಕಿರುಚಿದ! ಅಯ್ಯೋ ರಾಮ ಎಂದು ಹೆದರಿ ಏನಾಯಿತು ಎಂದು ಕೇಳಿದಾಗ, ಅವನ ಒಂದು ಚಪ್ಪಲಿ ಜಾರಿ ಕೊಚ್ಚಿಕೊಂಡು ಹೋಗಿಯಾಗಿತ್ತು, ಆ ಹೊಳೆಯಲ್ಲಿ ಹುಡುಕುವುದು ಸಾಧ್ಯವೇ ಇಲ್ಲ ಎಂಬುದು, ಚರ್ಚಿಸದೆ ಇಬ್ಬರು ಅರಿವಾಗಿತ್ತು. ತಕ್ಷಣ ನಾನು ಮಧುಗೆ ಇರುವ ಇನ್ನೊಂದನ್ನು ಕೈಲಿ ಹಿಡಿದು ಬಾ ಎಂದು, ಪಾಠ ಕಲಿತ ನಾನು ನನ್ನ ಎರಡು ಚಪ್ಪಲಿಯನ್ನು ಕೈಲಿ ಹಿಡಿದು ದಡ ಸೇರಿದೆವು.

ಮುಂದೇನು ? ಮನೆಯಲ್ಲಿ ಹೋಗಿ ಹೇಳಲು ಭಯ.. ಮತ್ತು ಸ್ವಲ್ಪ ಮನೆ ಪರಿಸ್ಥಿತಿಯ ವಾಸ್ತವ ಅರಿವು, ಸುಮ್ಮ ಸುಮ್ಮನೆ ಮನೆಯಲ್ಲಿ  ಹೊಡೆತ ತಿನ್ನುತ್ತಿದ್ದ ಇವನನ್ನು ನೋಡಿದ ನನಗೆ, ಹೀಗೆ ಇವನನ್ನು ಮನೆಗೆ ಕಳುಹಿಸಿದರೆ, ಇವನ ಅಮ್ಮ ಇವನನ್ನ ಎಳೆದುಕೊಂಡು ನಮ್ಮ ಮನೆ ಮುಂದೆ ಬಂದು ನನ್ನದೆ ತಪ್ಪು ಎಂದು ರಾದ್ದಂತ ಮಾಡುವುದು ಪಕ್ಕ ಎಂದು ಸ್ವಲ್ಪ ಯೋಚಿಸಿ ಒಂದು ಉಪಾಯ ಮಾಡಿದೆ, ಅದನ್ನು ಇವನಿಂದ ಮಾಡಿಸುವುದು ಹೇಗೆ  (ನಾನು ಹೇಳಿದ್ದಕ್ಕೆಲ್ಲ ಹೂಂ ಎನ್ನುವ ಇವನಿಗೆ ಸ್ವಲ್ಪ ಬುದ್ದಿ ಕಡಿಮೆ ಎಂದು ನಾನೇ ನಿರ್ದರಿಸಿದ್ದೆ ) , ಹಂತ ಹಂತವಾಗಿ ಅವನಿಗೆ ಹೇಳಿದ್ದು ಹೀಗಿತ್ತು.

ನಾನು : ನಿಮ್ ಕ್ಲಾಸ್ ಅಲ್ಲಿ ಬೇರೆ ಯಾರದ್ದಾದ್ರು ಸೇಮ್ ಚಪ್ಲಿ ಇದ್ದಾ ?

ಮಧು : ಹೂಂ

ನಾನು : ನಿಂದು ಈಗ ಎಡಕಾಲಿನದು ಚಪ್ಲಿ ಇಲ್ಲೇ, ಅವಂದು ಬ್ರೇಕ್ ಬಿಟ್ಟಾಗ ಎಡಕಾಲಿನದು ಚಪ್ಲಿ ಮಾತ್ರ ತಗಂಡು ಛತ್ರಿ ಒಳ್ಗೆ ಇಟ್ಕ , ಅವಂದು ಒಂದೇ ಚಪ್ಲಿ ಕಳೆದ್ರೆ ಯಾರಿಗೂ ಅನುಮಾನ ಬತ್ತಿಲ್ಲೆ , ಇಲ್ಲೇ ಒಂದೇ ಚಪ್ಲಿ ಕಳೆದಿದ್ದಕ್ಕೆ ಅವಂಗೂ ಯಾರ  ಮೇಲೂ ದೂರು ಕೊಡಲೆ ಬತ್ತಿಲ್ಲೆ, ಶಾಲೆ ಬಿಟ್ಟ ಮೇಲೆ ಸ್ವಲ್ಪ ಅಲ್ಲೇ ಹುಡುಕ್ತ ಇರ್ತಾ ಅಷ್ಟರಲ್ಲಿ ನೀನು ಮನೆಗೆ ಬಂದಿರ್ತೆ?

chappals kidsಇಷ್ಟು ಹೇಳಿದ್ದೆ , ಖುಷಿಯಾಗಿ ಮಧುನೇ ಮುಂದುವರಿಸಿದ.. ಇವತ್ತು ಮನೆಗೆ ಹೋಗಿ, ಚಪ್ಲಿ ಅಣ್ಣನ ಮನೇಲಿ ಮರತು ಹೋತು, ಅದಕ್ಕೆ ಬರಿ ಕಾಲಲ್ಲಿ ಬಂದಿ ಹೇಳ್ತಿ , ನಾಳೆ ಶಾಲೆ ಇಂದ ತಂದ  ಚಪ್ಲಿ ಜೊತೆಗೆ ಇದನ್ನ ಹಾಕ್ಯಂಡು ಹೋಗ್ತಿ.

ಅವನಿಗೆ ಇಷ್ಟು ಬೇಗ ಅರ್ಥ ಆಗಿದ್ದು ಕಂಡು, ನನಗೂ ಸಮಾಧಾನವಾಯಿತು.

ಮರುದಿನ ದಾರಿಯಲ್ಲಿ , ಎರಡೆರಡು ಬಾರಿ ಎಡಗಾಲಿಂದು ಸರಿ ನೋಡಿ ತಗೊಂಡು ಬಾ, ತಪ್ಪಿ ಬಲಗಾಲಿನದು ತಂದ್ರೆ ಉಪಯೋಗ ಇಲ್ಲ, ನಿನ್ ಹತ್ರ ಆಗ್ಲೇ ಬಲಗಾಲಿನದು ಇದೆ ಎಂದು ಒತ್ತಿ ಹೇಳಿದೆ.

ಸಂಜೆ ಶಾಲೆ ಬಿಟ್ಟಾಗ ಮಧು ಛತ್ರಿಯಲ್ಲಿ ಒಂದು ಚಪ್ಪಲ್ಲಿ ಇಟ್ಟಿದ್ದನ್ನ ತೋರಿಸಿದ, ನಾನು ಅದು ಎಡಗಾಲಿನದು ಎಂದು ಅಂತ  confirm ಮಾಡಿ ಆಯಿತು. ಅಂತೂ ನಮ್ಮ ಮನೆಗೆ ಬಂದು ಮಧು ಎರಡು ಚಪ್ಪಲಿ ಹಾಕಿ ಅವರ ಮನೆಗೆ ಹೋದ.

ಇಬ್ಬರಿಗೂ ಮಾಡಿದ ಕೆಲ್ಸಕ್ಕೆ ಬೆರಸ ಇದ್ರು, ಒಂದೇ ಚಪ್ಪಲಿ ಕಳೆದು ಹೋಗಿರೋ ವಿಲ್ಸನ್ ಗೆ ಮನೇಲಿ ಖಂಡಿತ ಬೈಯೋಲ್ಲ, ಸೋ ಏನು ತೊಂದ್ರೆ ಇಲ್ಲ  ಅಂತ ಸಮಾಧಾನ ಮಾಡಿಕೊಂಡ್ವಿ .

ಈಗ ನೀವು ಹೇಳಿ ಈ ಪ್ಲಾನ್ ಅಲ್ಲಿ ಎಲ್ಲಾದ್ರೂ ಸಿಕ್ಕಿ ಬೀಳೋ ಚಾನ್ಸ್ ಇತ್ತಾ?

‍ಲೇಖಕರು Admin

June 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: