ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕ್ಷಣದ ಚಂಡಿ ಅವತಾರ

ಕೆಲ ದಿನಗಳ ಹಿಂದೆ ಚೀನಾದಿಂದ ವರದಿಯಾದ ಒಂದು ಘಟನೆ.

ಒಬ್ಬ ಟೀವಿಯಲ್ಲಿ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರವನ್ನು ನೋಡುತ್ತ ಕುಳಿತಿದ್ದನಂತೆ. ಆತನ ಹೆಂಡತಿ ಏನನ್ನೋ ಕೇಳಿದರೂ, ಅದರ ಬಗ್ಗೆ ಲಕ್ಷ್ಯವೇ ಇಲ್ಲದವನಂತೆ ಸುಂದರಿಯರತ್ತ ಅವನ ಕಣ್ಣು. ತನ್ನ ಮಾತನ್ನು ಕಿವಿಯ ಮೇಲೇ ಹಾಕಿಕೊಳ್ಳದ ಗಂಡನ ಈ ರೀತಿಯನ್ನು ಅದೆಷ್ಟೋ ಹೊತ್ತಿನಿಂದ ನೋಡಿ ರೋಸಿಹೋದ ಆಕೆ ಏನನ್ನೋ ಎತ್ತಿ ಟೀವಿಯತ್ತ ಎಸೆದೇ ಬಿಟ್ಟಳಂತೆ. ಟೀವಿ ಚೂರು ಚೂರು. ಆತ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದನಲ್ಲ, ಆ ಅರೆನಗ್ನ ಸುಂದರಿಯರೂ ಒಂದು ಕ್ಷಣ ಚೆಲ್ಲಾಡಿ ಹೋಗಿ, ಆಮೇಲೆ ನೋಡುವುದಕ್ಕೇನಿತ್ತು?

ತನ್ನ ಹೆಂಡತಿಯನ್ನು ಅಷ್ಟು ಹೊತ್ತೂ ಮರೆತು ಕೂತಿದ್ದವ ಹೆಂಡತಿಯ ಈ ಚಂಡಿ ಅವತಾರಕ್ಕೆ ಕಂಗಾಲಾದನೇ ಎಂಬುದರ ಬಗ್ಗೆ ವರದಿ ಏನನ್ನೂ ಹೇಳಿರಲಿಲ್ಲ. ಇಂಥ ಘಟನೆಗಳನ್ನು ನಾವೂ ತಮಾಷೆಯದ್ದೆಂಬಂತೆ ಮಾತ್ರ ನೋಡುತ್ತೇವೆ. ಆದರೆ ಹೆಣ್ಣೊಬ್ಬಳ ಹೋರಾಟದ ಋಜುತ್ವ ಮತ್ತು ಸಹಜತೆಯಿರುವುದು ಅವಳ ಇಂಥ ಸಣ್ಣಪುಟ್ಟ ಪ್ರತಿರೋಧಗಳಲ್ಲೇ ಎಂಬುದನ್ನು ಗಮನಿಸದೇ ಹೋಗುತ್ತೇವೆ.

‍ಲೇಖಕರು avadhi

25 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading