ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕೈಯಲ್ಲಿ ಮೊಬೈಲು, ಇನ್ನೊಂದು ಕೈಯಲ್ಲಿ ಕಾಫಿ ಕಪ್..

ಶಿವಪ್ರಕಾಶ್ ಎಚ್ ಎಮ್


ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು… !!!
 
ಒಂದು ಕೈಯಲ್ಲಿ ಮೊಬೈಲು,
ಇನ್ನೊಂದು ಕೈಯಲ್ಲಿ ಕಾಫಿ ಕಪ್,
ಯಾವುದು ಬಾಯಿಗೋ, ಯಾವುದು ಕಿವಿಗೋ,
ಅರಿಯದ ಹೊತ್ತು….
ನಮಗಿನ್ನೂ ಕೇವಲ ಮೂವತ್ತು… !!!
 
ಲಿಫ್ಟಿನ ಮುಂದೆ ಆಕ್ಸೆಸ್ ಕಾರ್ಡ್ ಹಿಡಿದು ನಿಲ್ಲುವ,
ವಾಶ್ ಬೆಸಿನ್ನಿನಲಿ ಸೂಸು ಮಾಡುವ,
ಇಂದು ನಾ ನಡೆದಿದ್ದೆಸ್ಟು..?? ಎಂದು App ಲಿ ನೋಡುವ…
ನಮಗಿನ್ನೂ, ಕೇವಲ ಮೂವತ್ತು… !!!
 
ರಸ್ತೆ ಮಧ್ಯದಿ ನಿಂತು, ನಾನೆತ್ತ ಹೋಗುತಿರುವೆನೆಂದು ಯೋಚಿಸುವ,
ನ್ಯೂಸ್ ಪೇಪರ್ ಕೈಯಲಿ ಹಿಡಿದು, ಜೂಮ್ ಮಾಡ ಹೊರಟಿರುವ,
ಪ್ರಜ್ಞೆ ಇಲ್ಲದ ಹೊತ್ತು…
ನಮಗಿನ್ನೂ, ಕೇವಲ ಮೂವತ್ತು… !!!
 
ಹ್ಯಾಂಗ್-ಔಟ್ ಅನ್ನೂ ಕಂಪ್ಯೂಟರ್ನಲ್ಲೆ ಮಾಡಿ,
ಟು ಪ್ಲಸ್ ತ್ರೀ ಗೂ ಮೊಬೈಲ್ನ ಕ್ಯಾಲ್ಸಿ ತೆಗೆವ,
ಇದ್ದಲ್ಲೇ ಎಲ್ಲ ಬೇಕೆನುವ…
ನಮಗಿನ್ನೂ, ಕೇವಲ ಮೂವತ್ತು… !!!
 
ಅರವತ್ತಕ್ಕೆ ಅರುವು-ಮರುವು,
ಆದರೆ, ನಮಗಿನ್ನೂ ಕೇವಲ ಮೂವತ್ತು… !!!
 

‍ಲೇಖಕರು G

13 June, 2015

4 Comments

  1. ಲಲಿತಾ ಸಿದ್ಧಬಸವಯ್ಯ

    ವಹ್ ವಾಹ್ ವಾಹ್ ಆದಾಬ್ ಎಂಥ ಸತ್ಯದರ್ಶನ ! ಕಣ್ತೆರಸುವ ಕಾವ್ಯ ಕಣ್ರೀ ಇದು.

  2. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ; ಪದ್ಯ.

  3. Bhalle

    ಮನೆ ಬಾಗಿಲಿಗೆ ಕೀಲಿ ಬದಲು ಕಾರಿನ ರಿಮೋಟ್ ಒತ್ತುವ
    ಹತ್ತಿದ ಸಿಗರೇಟನ್ನು ಕಿವಿಗೆ ತುರುಕಿ ತಿರುಗಿಸುವ ಸುಟ್ಟುಕೊಳ್ವ
    ಗೂಳಿಗಳು ಮರೆಗೂಳಿಗಳು
    ನಮಗಿನ್ನೂ, ಕೇವಲ ಮೂವತ್ತು
    ನಮ್ಮ ಹುಟ್ಟುಹಬ್ಬ ನೆನಪಿಸಿಕೊಳ್ಳಲು ಫೇಸ್ಬುಕ್’ಗೆ ಆತುಕೊಳ್ಳುವ
    ಮದುವೆಯ ಆನಿವರ್ಸರಿ ನೆನಪಿಸಿಕೊಳ್ಳಲು ರಿಮೈಂಡರ್ ಇಟ್ಟುಕೊಳ್ಳುವ
    ಆಧುನಿಕ ಸಲಕರಣೆಗಳ ಗುಲಾಮರು
    ನಮಗಿನ್ನೂ, ಕೇವಲ ಮೂವತ್ತು
    ಒಳಗೇ ಕೂತು ಹೊರಗಿನ ತಾಪಮಾನ ನೋಡಲು ಆಪ್ ಬಳಸುವ
    ಕಛೇರಿಯಲ್ಲಿದ್ದು ಮನೆಯನ್ನು ನೋಡಿಕೊಳ್ಳಲು ಆಪ್ ಬಳಸುವ
    ಇದ್ದೆಡೆ ಇರದೆ ಬೇರೆಡೆಯೇ ಇರುವ
    ನಮಗಿನ್ನೂ, ಕೇವಲ ಮೂವತ್ತು

  4. shivaprakash hm

    ಲಲಿತಾ ಸಿದ್ಧಬಸವಯ್ಯ, ಅಕ್ಕಿಮಂಗಲ ಮಂಜುನಾಥ, Bhalle,
    ಸಾಲುಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..
    ಥ್ಯಾಂಕ್ಸ್ ಟು ಅವಧಿ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading