ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಅಪೂರ್ಣ ಪ್ರೊಫೈಲ್ ಸುತ್ತ!

ಒಂದು ಅಪೂರ್ಣ ಪ್ರೋಫಾಯಿಲನ ಸುತ್ತ!

 ಅಶ್ಫಾಕ್ ಪೀರಜಾದೆ

ನನ್ನದಷ್ಟೆಯಲ್ಲ ಇನ್ನಾರದೊ

ಫೇಸ್ಬುಕ್ ಕವಿತೆಗೆ ಚೆಂದದ

ಮನಮೋಹಕ ಕಮೆಂಟಾಗುವ

ನೀನು ಹೆಣ್ಣೋ ಗಂಡೋ ಗೊತ್ತಿಲ್ಲ

ಮಾತಿನ ಮೃದುತ್ವ ನಿರೂಪಣೆಯ

ಕೋಮಲತೆ ಕಂಡರೆ

ಖಂಡಿತವಾಗಿಯೂ ನೀನು

ಹೆಣ್ಣೇ ಆಗಿರಬೇಕು ಅನಿಸುತ್ತೆ

 

ಕುತೂಹ ತಡೆಯದೆ ನಿನ್ನ

ಸ್ಟೇಟಸ್ ತಡಕಾಡುತ್ತೇನೆ,

ಜಾನೋ ಜಾನಮೋ…

ನಿನ್ನ ಅಪೂರ್ಣ ಪ್ರೊಫೈಲ್ ನಲ್ಲಿ

ಲಿಂಗಸೂಚಕವಲ್ಲದ

ಹೆಸರು ಬಿಟ್ಟು ಏನೂ ವಿವರ ಇಲ್ಲ.

 

ಹೆಸರು ಕೂಡ ದ್ವಂದ್ವದಿಂದ ಕೂಡಿದ್ದು

ನೀನು ಯಾರು ಏನು ಯಾವುದೇ

ರಹಸ್ಯ ಬಯಲಾಗುದಿಲ್ಲ

ನಾನು ಅಸಮಾಧಾನಗೊಂಡು

ಕುದಿಯುವ ನೀರಾಗುತ್ತೇನೆ..

ನೀನು ಬರೆಯುವ ಬರಹ

ಕಾವ್ಯಕೂಡ ಅಮೋಘ!

ಓದಿ ಪ್ರತಿಕ್ರಿಯಿಸುತ್ತೇನೆ,

ಮೇಡಂ ಅಂತಲೋ

ಸರ್ ಅಂತಲೋ ನೀನು ಮಾತ್ರ

ಯಾವುದಕ್ಕೂ ಉತ್ತರಿಸುವದಿಲ್ಲ

ಧನ್ಯವಾದ ಅನ್ನುವುದನ್ನು ಬಿಟ್ಟು..

 

 

ನೀನು ಚಲ್ವೆಯೋ

ಕುರೂಪಿಯೋ ಗೊತ್ತಿಲ್ಲ

ಗಂಡೋ ಹೆಣ್ಣೋ ಅಂತ

ಖಾತ್ರಿಪಡಿಸಿಕೊಳ್ಳಲು ನನ್ನ ಹತ್ರಾ

ಇನ್ನಾವುದೇ ಸಾಧನ

ಸಂಪರ್ಕ ಸಂಖ್ಯೆಯೂ ಇಲ್ಲ

ನಿನ್ನ ಸಂಪರ್ಕಿಸಲು

 

ನಿನ್ನ ಗುರುತು ಇಷ್ಟೊಂದು

ಗೌಪ್ಯವಾಗಿ ಇರಿಸಿರುವೆ ಎಂದಾಗ

ನೀನು ಬಹುಶಃ ಹೆಣ್ಣೇ ಆಗಿರಬೇಕು

ಇರಲಿ …..!

ನೀನೊಂದು ಹೆಣ್ಣೇ ಅಂದುಕೊಳ್ಳೋಣ

ಅಂದರೆ ನಿನಗೆ ಮದುವೆಯಾಗಿದೆಯಾ

ಇಲ್ಲವಾ ತಿಳಿಯದು ಅಷ್ಟೇಯೇಕೆ

ನೀನು ಹದಿ ಹರೆಯದ ಹುಡುಗಿಯೋ

ಮುಪ್ಪಾನ ಮುದಕಿಯೋ ಎಂಬುದು

ಬಗೆ ಹರಿಯದ ಯಕ್ಷ ಪ್ರಶ್ನೆ!

 

ನೀನು ನನ್ನ ಪಾಲಿಗೆ ಎಂದಿಗೂ

ಪ್ರಶ್ನೆಯಾಗಿಯೇ ಉಳಿದು ಬಿಡುವ

ಒಂದು  ಕೌತುಕ! ಹಾಗೇ ಉಳಿದು ಬಿಡು

ನಿನ್ನ ಹುಡುಕುತ್ತಲೇ ನಾನು

ಬದುಕಿ ಬಿಡುತ್ತೇನೆ‌ ಹೀಗೇ

ಅಕಾರಣ ನಿಸ್ವಾರ್ಥದಿಂದ ಪ್ರೀತಿಸುತ್ತಲೇ

ಇದ್ದು ಬಿಡುತ್ತೇನೆ….!

‍ಲೇಖಕರು nalike

28 July, 2020

2 Comments

  1. Prajna Mattihalli

    Good Peerjade well written

  2. ashfaq peerzade

    Thank you madam.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading