ಏನ್ ‘ಸಮಾಚಾರ’??

****
ಜಿ ಎನ್ ಮೋಹನ್ 

ನಾನು ಕಂಡ ಇಬ್ಬರು ಒಳ್ಳೆಯ ಹುಡುಗರ ಪರವಾಗಿ ಈ ಮನವಿ.

ಅಥವಾ ಅವರ ಮನವಿಗೆ ಪೂರಕವಾಗಿ ಒಂದು ಮನವಿ.

ಪ್ರಶಾಂತ್ ಹುಲ್ಕೋಡು ನಾನು ಅನುವಾದಿಸಿದ ಪಿ ಸಾಯಿನಾಥ್ ಅವರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯನ್ನು ಮೊದಲು ಓದಿದ ಹುಡುಗ. ಆ ಮೂಲಕ ನನಗೆ ಆತನ ಲೋಕ ಪರಿಚಯವಾಗುತ್ತಾ ಹೋಯಿತು. ‘ವಿಜಯ ಕರ್ನಾಟಕ’ದಲ್ಲಿದ್ದು ನಂತರ ‘ಬಿಟಿವಿ’ಗೆ ಬಂದು ಕೆಲವೇ ದಿನಗಳಲ್ಲಿ 24×7 ಎಂಬ ಸುದ್ದಿ ಚಾನಲ್ ಗಳು ಏನು ಎಂದು ತಿಳಿದು ಹುಷಾರಾಗಿ ಬಿಟ್ಟ ಹುಡುಗ.

ಮಂಜುಳಾ ಮಾಸ್ತಿಕಟ್ಟೆ ನಾನು ‘ಸಮಯ’ ಚಾನಲ್ ನ ಪ್ರಧಾನ ಸಂಪಾದಕನಾಗಿದ್ದಾಗ ಸುದ್ದಿ ಓದುತ್ತಿದ್ದ ಹುಡುಗಿ. ಒಂದು ಖಡಕ್ ನಿಲುವು, ಅಳೆದರೂ ಮಿಕ್ಕುವ ಆತ್ಮ ವಿಶ್ವಾಸ. ಸುದ್ದಿ ಮನೆಯಲ್ಲಿ ಅಪರೂಪವೇ ಆಗಿಬಿಟ್ಟಿರುವ ಓದು ಎಲ್ಲವನ್ನೂ ಒಳಗೊಂಡಿದ್ದ ಹುಡುಗಿ. ಜೊತೆಗೆ ಆಕೆ ಮಾಡಿಕೊಳ್ಳುತ್ತಿದ್ದ ಹೋಮ್ ವರ್ಕ್, ಸ್ಟುಡಿಯೋದ ಟೆಲಿ ಪ್ರಾಂಪ್ಟರ್ ಆಚೆಗೂ ಲೋಕವಿದೆ ಎಂದು ಗೊತ್ತಿದ್ದ ಹುಡುಗಿ. ಹಾಗಾಗಿ ನಾವು ಸಮಾನ ಮನಸ್ಕರು.

ಈ ಇಬ್ಬರೂ ಮೊನ್ನೆ ಮೊನ್ನೆ ತಾನೇ ಮಂತ್ರ ಮಾಂಗಲ್ಯ ರೀತಿ ಕುಪ್ಪಳ್ಳಿಯಲ್ಲಿ ಜೋಡಿಯಾದವರು.

ಈ ಇಬ್ಬರ ಪ್ರಾಮಾಣಿಕತೆ, ಸಮಾಜ ಮುಖಿ ನೋಟ, ಎಲ್ಲರನ್ನೂ ಒಳಗೊಳ್ಳುವ ಮನಸ್ಸು, ಪ್ರತಿಯೊಂದನ್ನೂ ಕೇಳಿಸಿಕೊಳ್ಳುವ ಸಹನೆ ನನಗೆ ಗೊತ್ತಿದೆ.

ಈ ಇಬ್ಬರೂ ಸೇರಿ ಹುಟ್ಟು ಹಾಕಿದ ದೋಣಿಯೇ ‘ಸಮಾಚಾರ ಡಾಟ್ ಕಾಮ್ samachara.com

ಆ ದೋಣಿ ತೇಲುತ್ತದೋ ಇಲ್ಲಾ ಮುಳುಗುತ್ತದೋ ಎಂದೇ ಎಲ್ಲರೂ ನೋಡುತ್ತಿದ್ದಾಗ 10 ತಿಂಗಳು ಇಬ್ಬರೂ ಸಮರ್ಪಕವಾಗಿ ಹುಟ್ಟು ಹಾಕಿದ್ದಾರೆ. ಇಬ್ಬರೂ ಶರಾವತಿಯ ಒಡಲಿನಿಂದ ಬಂದವರು. ಹಾಗಾಗಿ ದೋಣಿ ನಡೆಸುವುದೂ ಗೊತ್ತು. ಈಜು ಹೊಡೆಯುವುದೂ ಗೊತ್ತು. ಸುಳಿಗಳು ಎಲ್ಲಿರುತ್ತವೆ ಎಂದೂ ಗೊತ್ತು. ಹಾಗಾಗಿಯೇ ಅಲೆಯ ವಿರುದ್ಧ ಈಜುವ ಹುಮ್ಮಸ್ಸು ಹೊಂದಿದ್ದಾರೆ.

ಈ ದೋಣಿ ಅವರೊಬ್ಬರದೇ ಅಲ್ಲ. ಅದು ನಮ್ಮ, ನಿಮ್ಮೆಲ್ಲರದ್ದೂ. ಸಮಾಜದಲ್ಲಿ ಒಂದು ಆರೋಗ್ಯ ಇರಬೇಕು ಎಂದರೆ ಈ ದೋಣಿಯ ಗತಿ ನಾವೂ ನಿರ್ಧರಿಸಬೇಕು. ಹುಟ್ಟು ಹಾಕುವ ಕೈಗಳು ಸೋತಾಗ ನಾವೂ ಹುಟ್ಟು ಹಾಕಲು ಮುಂದಾಗಬೇಕು. ‘ಏಕ್ ಏಕ್.. ಅನೇಕ್’ ಎನ್ನುವ ಹಾಗೆ ನಾವು ನೀವು ಎಲ್ಲರೂ ಸೇರಿಯೇ samachara.com ಸದಾ ಸಮಾಜವನ್ನು ಮುನ್ನೆಡೆಸಲು ಸಾಧ್ಯವಾಗುವ ಶಕ್ತಿ ನೀಡಬೇಕು

ಪ್ರಾಮಾಣಿಕ ಜೋಡಿ ತಮ್ಮ ತಂಡದೊಂದಿಗೆ ಹುಟ್ಟು ಹಾಕಿರುವ ಸಾಹಸಕ್ಕೆ ಈಗ ಆರ್ಥಿಕ ಶಕ್ತಿ ಬೇಕು. ಅದಕ್ಕೆ ನೀವೆಲ್ಲ ಕೈ ಜೋಡಿಸಿ ಎಂದಷ್ಟೇ ಕೇಳಿಕೊಳ್ಳುತ್ತಿದ್ದೇನೆ

8 ವರ್ಷಗಳಿಂದ ‘ಅವಧಿ’ avadhimag.online ನಡೆಸುತ್ತಾ ಬಂದಿರುವ ನನಗೆ ಒಂದು ವೆಬ್ ಸೈಟ್ ನ ಕಷ್ಟ ಸುಖಗಳು ಗೊತ್ತಿವೆ. ‘ಅವಧಿ’ ಒಂದು ಹವ್ಯಾಸ ಅಥವಾ ಎಲ್ಲರ ಮನಸ್ಸನ್ನು ಹೊಂದಿಸುವ ಒಂದು ಕೊಲಾಜ್ ಅಷ್ಟೇ. ಸಾಹಿತ್ಯ ಸಾಂಸ್ಕೃತಿಕ ನೋಟ ಅದರ ಒಳಗೆ ಸುಮ್ಮನೆ ಹರಿಯುವ ಒಂದು ಝರಿ.

‘ಸಮಾಚಾರ’ ಹಾಗಲ್ಲ, ಅದು ದಿನ ಪತ್ರಿಕೆ, ಅಲ್ಲ ಕ್ಷಣ ಕ್ಷಣದ ಪತ್ರಿಕೆ. ಕನ್ನಡ ಇಂಗ್ಲಿಷ್ ಎರಡನ್ನೂ ಒಳಗು ಮಾಡಿಕೊಂಡಿರುವ ಪತ್ರಿಕೆ
ಹಾಗಾಗಿ ಅದರ ಅಗತ್ಯಗಳು ಅನೇಕ.

ಈ ‘ಸಮಾಚಾರ’ಕ್ಕೆ ನಿಮ್ಮ ಕೈ ಜೋಡಿಸಿ

ಅವರು ಕೊಟ್ಟಿರುವ ವಿವರಗಳು ಇಲ್ಲಿದೆ

ಸಮಾಚಾರ’ಕ್ಕೆ ಧನಸಹಾಯ:

ಈ ಹಂತದಲ್ಲಿ ನೀವು ಸಮಾಚಾರದ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಧನ ಸಹಾಯ ಮಾಡಿ. ಇದಕ್ಕಾಗಿ ನೀವು ‘ಪೀಪಲ್ ಮೀಡಿಯಾ ಫೌಂಡೇಶನ್’ ಅಕೌಂಟಿಗೆ ಹಣ ಹಾಕಿದರೆ ಸಾಕು. ಮುಂದಿನ ದಿನಗಳಲ್ಲಿ ನಾವು ಧನ ಸಹಾಯ ಮಾಡಿದವರ ಸಂಪೂರ್ಣ ವಿವರ ಮತ್ತು ಆದ ಖರ್ಚು ವೆಚ್ಚಗಳನ್ನು ಪ್ರಕಟಿಸುತ್ತೇವೆ. ಹೀಗಾಗಿ, ನೀವು ನೀಡಿದ ಹಣಕ್ಕೆ ಲೆಕ್ಕವನ್ನೂ, ಮಾಧ್ಯಮ ಸಂಸ್ಥೆಯೊಂದರಿಂದ ಸಂಪೂರ್ಣ ಪಾರದರ್ಶಕತೆಯನ್ನೂ ನಮ್ಮಿಂದ ನಿರೀಕ್ಷಿಸಬಹುದು.

People Media Foudation

Account No.: 50200022368484

Bank Name: HDFC

Branch: Wilson Garden, Bengaluru

IFSC: HDFC0001748

 

‘ಸಮಾಚಾರ’ಕ್ಕೆ ಉಪಕರಣಗಳನ್ನು ನೀಡಿ:

ನಿಮ್ಮ ಈ ಪೋರ್ಟಲ್ ಹೊರಬರಬೇಕಾದರೆ ತಂತ್ರಜ್ಞಾನ ಸಲಕರಣೆಗಳ ಅಗತ್ಯವಿದೆ. ನೀವು ನಮಗೆ ಕಂಪ್ಯೂಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಿದರೂ, ಈ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ.
ವಿಳಾಸ ಇಲ್ಲಿದೆ:

People Media Foundation

No. 191, New No. 43/3

10th Cross, Wilson Garden

Bengaluru- 560027

 

‘ಸಮಾಚಾರ’ಕ್ಕೆ ಮಾಹಿತಿ ನೀಡಿ:

ಸ್ವತಂತ್ರ ಮಾಧ್ಯಮವೊಂದು ಸದಾ ಕಾಲ ಸದ್ದು ಮಾಡಲು ‘ಮಾನಿಟರಿ ಸಪೋರ್ಟ್’ ಜತೆಗೆ ಸುದ್ದಿಯ ಸರಕನ್ನೂ ಬೇಡುತ್ತದೆ. ನಿಮ್ಮ ಬಳಿ ಇರುವ ಸುದ್ದಿಯಾಗಲು ಯೋಗ್ಯ ಅಂತ ಅನ್ನಿಸುವ ಯಾವುದೇ ಮಾಹಿತಿ ಇದ್ದರೂ ನಮ್ಮ ಜತೆ ಹಂಚಿಕೊಳ್ಳಿ. ಈ ಮೂಲಕ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ಜನರಿಗೆ ತಲುಪಲು ನೆರವಾಗಿ. ಇದಕ್ಕಾಗಿ [email protected] ಅಥವಾ [email protected] ಇ- ಮೇಲ್ ವಿಳಾಸಗಳನ್ನು ಬಳಸಿಕೊಳ್ಳಬಹುದು.

ಈ ಕುರಿತು ಯಾವುದೇ ಸ್ಪಷ್ಟೀಕರಣ, ಮಾಹಿತಿ ಬೇಕಿದ್ದಲ್ಲಿ ಈ ನಂಬರಿಗೆ ಕರೆ ಮಾಡಿ: 080- 41205696 (ಬೆಳಗ್ಗೆ 10- 7ರವರೆಗೆ- ಭಾನುವಾರ ಹೊರತುಪಡಿಸಿ)
-ಸಮಾಚಾರ ಬಳಗ.

 

‍ಲೇಖಕರು admin

January 8, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: