ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಬಿ ಕೆ ಸುಮತಿ


ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ ‘ಮಾತಲ್ಲ ಗೀತೆ’. 

ಕರೋನ ಸೋಂಕು ವಿಶ್ವದ ವಿವಿಧ ಕಡೆಗಳಲ್ಲಿ ಭೀತಿ ಹುಟ್ಟಿಸುತ್ತಿದೆ.

ಭಾರತದಲ್ಲಿ ಕೂಡ  ನಡುಕ, ನರಕ, ನಾಕ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು ಹೇಗೆ ನಡೆದುಕೊಳ್ಳುತ್ತಿವೆ?
ವರದಿ, ಸುದ್ದಿಗಳನ್ನು ಹೇಗೆ ಬಿತ್ತರಿಸುತ್ತಿದೆ, ಎಂಥ ಭಾಷೆ ಉಪಯೋಗಿಸುತ್ತಿದೆ ಎಂಬುದು ಚರ್ಚೆಯಾಗುತ್ತಿದೆ.

ವಾಹಿನಿಯೊಂದರಲ್ಲಿ .. “ಮನೆ ಇಂದ ಹೊರಬರಬೇಡಿ, ಆತ್ಮಹತ್ಯೆ ಮಾಡಿಕೊಳ್ಳಿ ” ಎಂದು ಪ್ರಮುಖ ಸುದ್ದಿಯಲ್ಲಿ ಉಲ್ಲೇಖ ಮಾಡಿರುವುದು ಜನತೆಯ ಆಕ್ರೋಶಕ್ಕೆ ಗುರಿಯಾಗಿದೆ.
ಭಾಷೆ ಮತ್ತು ಧ್ವನಿ.. ಇವುಗಳ ಸರಿಯಾದ ಮೇಳೈಸುವಿಕೆ ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದನೀಯ.

ಪ್ರತಿ ಪದವೂ ಬ್ರಹ್ಮ. ಪ್ರತಿ ಅಕ್ಷರಕ್ಕೂ ಸ್ಥಾನ ಇದೆ. ಉಚ್ಚಾರಕ್ಕೆ ಕ್ರಮ ಇದೆ. ಸದ್ಯ, ಕೇಶಿರಾಜನ ‘ಶಬ್ದಮಣಿದರ್ಪಣ’ಕ್ಕೆ ಹೋಗುವುದು ಬೇಡ. ಒಂದು ವಾಕ್ಯದ ಸಂರಚನೆ ಮತ್ತು ನಿರೂಪಣೆ ಸರಿಯಾಗಿ ಬರುತ್ತಿದೆಯೇ..? ಪ್ರತಿ ನಿರೂಪಕನೂ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.
ಧ್ವನಿಯ ಏರಿಳಿತ ಭಾವ ಸೃಷ್ಟಿ ಮಾಡುತ್ತದೆ.

“ಇವತ್ತು ಏನಾಯ್ತು ಗೊತ್ತಾ…
ಎಷ್ಟು ಜನ ಸತ್ತರು ಹೇಳ್ತೀವಿ..
ಸಾವಿನ ಸರಿಯಾದ ಕ್ಷಣ ಕ್ಷಣದ ಮಾಹಿತಿ ನಮ್ಮಲ್ಲಿ ಮಾತ್ರ..”

ಇವರಿಗೆ ಏನಾಗಿತ್ತು ಧಾಡಿ..

ಇಂತಹ ವಾಕ್ಯಗಳು.. ಮತ್ತು ಸಲ್ಲದ ಏರಿಳಿತಗಳು.. ಮೆದುಳಿನ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿರುವ ಸತ್ಯ.

ವರನಟ ಡಾ. ರಾಜಕುಮಾರ್ ‘ಭಕ್ತ ಕುಂಬಾರ’ದಲ್ಲಿ “ವಿಠಲಾ” ಎಂದು ಎಷ್ಟು ಭಾವಗಳಲ್ಲಿ ಹೇಳುತ್ತಾರೆ ಎಂದು ಗಮನಿಸಿ ಕೇಳಿದರೆ, ವಿಠಲ ಬರೀ ವಿಠಲ ಅಲ್ಲ. ಆ ಮೂರು ಅಕ್ಷರದಲ್ಲಿ ಒಮ್ಮೆ ಮಮತೆ, ಒಮ್ಮೆ ಪ್ರೀತಿ, ಒಮ್ಮೆ ಭಕ್ತಿ, ಮತ್ತೊಮ್ಮೆ ಮೋಕ್ಷ, ತೃಪ್ತಿ, ಪ್ರಶ್ನೆ, ಸಂತೋಷ.. ಎಲ್ಲ ಪುಟಿದೇಳುತ್ತದೆ. ವಿವಿಧ ಭಾವಗಳನ್ನು ವಿಠಲ ಎಂಬ ಮೂರು ಅಕ್ಷರಗಳಲ್ಲಿ ರಾಜ್ ಹೊರಹೊಮ್ಮಿಸುತ್ತಾರೆ. ಧ್ವನಿಯ ಶಕ್ತಿ ಏನು ಎಂದು ತೋರಿಸಿಕೊಡುತ್ತಾರೆ.

ಇಂದು ನಮ್ಮ ನಿರೂಪಕರು ಎಲ್ಲಕ್ಕೂ ಒಂದೇ ಏರಿಳಿತ ಬಳಸುವರು. ಇನ್ನು ಪದ ವಿಭಾಗವಂತೂ ವಿಠಲನೆ ಕಾಪಾಡಬೇಕು.
ಹಾಗೆ ನೋಡಿದರೆ ನಾಟಕ ,ರೂಪಕಗಳಿಗೆ ಮಾತ್ರ ಭಾವ ಬರಬೇಕು, ಸುದ್ದಿ ಎಂಬುದು ಭಾವ ಹೊಂದಿರಬಾರದು. ಸುದ್ದಿ ಎಂಬುದು ಸರಳ ಮಾಹಿತಿ ಓದು ಆಗಬೇಕು. ಸಂವಹನ ಅಷ್ಟೇ ಇರಬೇಕು ಎಂಬುದು ಒಂದು ನಿಯಮ.
ಧ್ವನಿಯ tonal ವ್ಯತ್ಯಾಸದಲ್ಲೇ ವಿಷಯ ತಲುಪಿಸಬೇಕು ಎಂಬುದು ಸ್ಪಷ್ಟ.
ಆದರೆ “ಮುಖ್ಯಾಂಶಗಳು” ಎಂದು ಎತ್ತರದ ದನಿಯಲ್ಲಿ ಕಿರುಚುವುದು, ಧ್ವನಿಶಕ್ತಿಯ ಅರಿವಿಲ್ಲದೆ ಲಯ ತಪ್ಪುವುದು, ಕೆಟ್ಟ ಹಿನ್ನೆಲೆ ವಾದ್ಯ, ಅಕ್ಷರ ನುಂಗಿಹಾಕುವುದು,  “ಏನಾಯ್ತು ಗೊತ್ತಾ” ಅಂತ ಭಯಾನಕ  ಕ್ರೌರ್ಯ ತೋರಿಸುವುದು ವೀಕ್ಷಕರನ್ನು ಕೊಲ್ಲುತ್ತವೆ.

ಒಂದು ಸಹಜ ಸಾಮಾನ್ಯ ಭಾಷೆ ಧಾಟಿ ತಂದರೆ ಸಮಂಜಸ ಆಗುವುದಿಲ್ಲವೇ? ಒಮ್ಮೆ ಮಾಧ್ಯಮ ಮಿತ್ರ ಈಶ್ವರ ದೈತೋಟ ಹೇಳಿದ್ದರು.. ಈ ಕಿರುಚಾಟ ಖಾಸಗಿ ಮಾಧ್ಯಮದ  ಅಗತ್ಯ ಎಂದು.
ಆದರೆ ಇಂದು ಅದು ಅಸಹಜವಾಗಿದೆ, ಅಸಹನೀಯವಾಗುತ್ತಿದೆ,  ಭಾಷೆಯನ್ನು ಕೊಂದಿದೆ, ಅದೇ ಒಂದು ವಿಚಿತ್ರ ಕೆಟ್ಟ ಶೈಲಿಯಾಗಿ ರೂಪುಗೊಂಡಿದೆ.

ಮೊದಮೊದಲು crime story ಗೆ ಬಂದ ಧಾಟಿ ಇಂದು ಎಲ್ಲಾ ವರದಿಗಳಿಗೂ ಬರುತ್ತಿದೆ. 19 ಜನ ಸತ್ತಿದ್ದಾರೆ ಎಂದು ಹೇಳುವಾಗ, ದನಿಯಲ್ಲಿ ಸ್ವಲ್ಪವಾದರೂ ಖೇದ ಬೇಡವೇ.. ವಾಹ್ ನೋಡಿ 19,20 49.. ಎಂದು ಹರಾಜು ಹಾಕೋ ಮಾದರಿ ಕೂಗುವುದು ಎಂಥಾ ಸುದ್ದಿವಾಚನ ಅಥವಾ ನಿರೂಪಣೆ..
ಕೊನೆಯ ಅಕ್ಷರಕ್ಕೆ ವಿಶೇಷ ಒತ್ತು ಕೊಟ್ಟು ನಿಲ್ಲಿಸುವ ಶೈಲಿ, ಎಳೆದು ಎಳೆದು ಓದುವುದು,
Headlines ಓದುವಾಗ ದನಿಯ ಶಕ್ತಿ ಮೀರಿ ಕಿರುಚುವುದು, ಭಯ ಮತ್ತು tension ಮಿಶ್ರಿತ  ಪ್ರಸ್ತುತಿ,
ಓದುವವನ ಭಾವ ನೋಡುಗನ ಮೇಲೆ ಪರಿಣಾಮ ಬೀರುತ್ತದೆ.

ಮಗು ಬೋರೆವೆಲ್ ಗೆ ಬಿದ್ದಿದೆ. ರಕ್ಷಿಸಲು ಕಾರ್ಯಾಚರಣೆ ಆರಂಭ..
ಇದರಲ್ಲಿ ಕ್ಷಣ ಕ್ಷಣದ ಮಾಹಿತಿ ಅಂದರೆ ಏನು.. ಮಗು ಎಷ್ಟು ಇಂಚು ಒಳಗೆ ಹೋಯ್ತು, ಉಸಿರಾಡ್ತಾ ಇದೆಯಾ..ಹೀಗೆ.. ಸಾಗುತ್ತದೆ..
ಎಷ್ಟು ಬಾರಿ ಇದನ್ನು ಕೇಳುವ ಶಕ್ತಿ ಇರುತ್ತದೆ ನೋಡುಗನಿಗೆ..
ಇಂತ ಸಂದರ್ಭದಲ್ಲಿ ಮೌನವಾಗಿ ದೃಶ್ಯ ತೋರಿಸಿದರೆ ಸಾಕು. ಅರ್ಥ ಆಗುತ್ತದೆ.
ಕಾಮೆಂಟರಿ ಕೊಡಲೇ ಬೇಕೆಂದರೆ ಸಣ್ಣ ವಾಕ್ಯಗಳಲ್ಲಿ ಪರಿಸ್ಥಿತಿ ಚಿತ್ರಣ ಕೊಟ್ಟರೆ ಸಾಕು.

ಯಾವಾಗ ಧ್ವನಿ ಏರಿಕೆ ಬೇಕು ಬೇಡ ಎಂದು ಹೇಗೆ ನಿರ್ಧಾರ ಮಾಡುತ್ತಿದ್ದಾರೆ..
ಇದು ಯಾರ ಹೇರಿಕೆ. ಇದು ಇಂದಿನ ಅಗತ್ಯವೇ.. ಯಾರಿಗೆ ಇದು ಇಷ್ಟ ಆಗುತ್ತಿದೆ..

ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೇನೆ.
ಅಭಿಪ್ರಾಯ ಸಂಗ್ರಹಣೆ ಇದೆ. ಸಮಗ್ರವಾಗಿ ಹೇಳಬೇಕೆಂದರೆ, ಈಗ ಕ್ಷಣ ಕ್ಷಣದ ಈ ಅಕ್ಷರ ಭಾವದ ಕೊಲೆ ಸಹಿಸುತ್ತ ಜನ ಲೇವಡಿ ಮಾಡುತ್ತಿದ್ದಾರೆ.
ಪ್ರಶಸ್ತಿ, ಬಹುಮಾನ, ಸಾವು, ಸಿನೆಮಾ, ಹಾಸ್ಯ ಎಲ್ಲಕ್ಕೂ ಒಂದೇ tone. ಒಂದೇ pitch.

ವಿಷಯದ ಬಗ್ಗೆ ಅಂದರೆ script ವಿಚಾರ ಇಲ್ಲಿ ಪ್ರಸ್ತಾಪ ಮಾಡುತ್ತಿಲ್ಲ.ಆದರೆ , ಓದುತ್ತಿರುವ , ಹೇಳುತ್ತಿರುವ style ಬಗ್ಗೆ ಮಾತ್ರ ಗಮನ ಹರಿಸುವ ಅಗತ್ಯ ಇದೆ ಎನಿಸದೇ?
ಇದು ಭಾಷೆಯ ಸೊಗಡನ್ನು ಮರೆಸುತ್ತಿದೆ.

ಸುದ್ದಿಯನ್ನು celebrate ಮಾಡುವುದು ಇಂದಿನ ಅಗತ್ಯವೇ..
ಕೊನೆಗೆ ಸಾವಿನ ಸುದ್ದಿಯನ್ನೂ ಕೂಡ…?.. ಸಾವಿಗೆ ಘನತೆ ಇದೆ.
ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ..
“ಕಿಮ್ಸ್ ನಿರ್ದೇಶಕರು ಬಾಯ್ಬಿಟ್ಟ ಸತ್ಯ”
ಭಾರತ ಕೊರೊನಾ 3 ನೇ ಸ್ಟೇಜ್ ಗೆ ಹೋಗೇ ಬಿಡ್ತಾ..”
“ಆ ಯುದ್ಧದಲ್ಲಿ ಎಲ್ಲ ಮಟಾಶ್..”

ಹೀಗೆ ಸಾಗುತ್ತೆ ಗರಿಷ್ಠ ಶ್ರುತಿಯಲ್ಲಿ ವಾಕ್ಯಗಳು..

ಮಾಧ್ಯಮಗಳೇ ಹುಚ್ಚು ಹಿಡಿಸುತ್ತವೆ.
TV ಆಫ್ ಮಾಡಿದ ಮೇಲೆ ಮನಸು ಶಾಂತ ಆಯಿತು ಎಂದು ಹೇಳುವವರನ್ನು ನೋಡಿದ್ದೇನೆ.

ಕೊರೊನಾ ಒಂದು ಕಡೆ ಸಾಯಿಸ್ತಿದೆ, ಮನೆಯ lock down ಒಂದು ರೀತಿ ಕೊಲ್ಲುತ್ತಿದೆ,  ಎರಡನ್ನೂ ಮೀರಿಸುವ ಹಾಗೆ ವಿಜೃಂಭಿತ ವೀರ ಶೈಲಿಯಲ್ಲಿ  ಪ್ರಸ್ತುತೀಕರಣ ಉಸಿರುಕಟ್ಟಿಸುತ್ತಿಲ್ಲವೇ..
ಆಕಾಶವಾಣಿ ದೂರದರ್ಶನ ಶೈಲಿ ಮತ್ತು ಖಾಸಗಿ ಶೈಲಿ ಎಂದು ವ್ಯಾಕರಣ ವಿಭಾಗ ಮಾಡುವ ಕಾಲ ಸನ್ನಿಹಿತವಾಗಿದೆ.

ಕೇಳುಗ ಅಥವಾ ವೀಕ್ಷಕ  ಪ್ರಭು ಈ ಕರೊನ ಕಾಲದಲ್ಲಿ ಕಾರಣ ಹುಡುಕುತ್ತಾನೆ. ಅವಲೋಕನ ಮಾಡುತ್ತಿದ್ದಾನೆ.
ಎಲೆಕ್ಟ್ರಾನಿಕ್ ಮಾಧ್ಯಮಗಳು ಧ್ವನಿ, ಏರಿಳಿತ, ಭಾಷೆ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗಿರುವುದು ಇಂದಿನ ಜರೂರು.

‍ಲೇಖಕರು avadhi

April 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. Prabhamani k

    Ayyo sumathi…nanu mattu manju estu sari evara shyli..kiruchodu..arachodu..pitch…tone idara bagge tumba charche madi asahya agi..navantu yavde karannakku enta channels newsgalanna nodalla…tale dimm..annutte…nam favourite channel chandana…adanna aste navu nododu…TV nodidre ondu tampu bhava..kaduva …kalakuva sannevasha manadalli moodabeku..evagina T V nodidre bhaya…atanka…dava dava shuruagutte..benki beelali e private channelsge…che…down with…their language..tone..voice…pitch…expression…

    ಪ್ರತಿಕ್ರಿಯೆ
  2. Shyamala Madhav

    ಸ್ವಲ್ಪವಲ್ಲ; ತುಂಬಾ ಗಮನ ಹರಿಸಬೇಕು. ಈ ರಾಕ್ಷಸೀಯ ಪ್ರಲಾಪವನ್ನು, ಧ್ವನಿಯೇರಿಸುವುದನ್ನು, ಧ್ವನಿಯ ಅಸಹಜ ಏರಿಳಿತಗಳನ್ನು ತಕ್ಷಣ ಬಿಡಬೇಕು.
    ಭಾಷೆ ಶುಧ್ಧವಿರಬೇಕು. ಈ ನಿಟ್ಟಿನಲ್ಲಿ ಮಾಧ್ಯಮಕ್ಕೆ ನೀತಿಸಂಹಿತೆ ಕೂಡಲೇ ಜ್ಯಾರಿ ಯಾಗಬೇಕು.

    ಪ್ರತಿಕ್ರಿಯೆ
  3. Madhu Bn

    ವಾಹಿನಿಗಳು ಆದರ್ಶ ಬಿಟ್ಟು…ಮೂರನ್ನು ಬಿಟ್ಟೂ…ಮೂರ್ಖರ ಪೆಟ್ಟಿಗೆಯಾಗುವತ್ತ ಹೊರಟಿರುವುದು ದುರಂತ…

    ಪ್ರತಿಕ್ರಿಯೆ
  4. Rajeshwari

    ಇತ್ತೀಚೆಗೆ ಕೊರೋನ ಬಗ್ಗೆ ಹೇಳುತ್ತಾ, ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ನನಲ್ಲಿನ ಗುಂಪಿನ ಸುದ್ದಿ ವಿವರಿಸುತ್ತಾ ನಿರೂಪಕರು ಬಳಸಿದ ಬೈಗುಳದ ಭಾಷೆ communal riots ಗೆ ನಾಂದಿ ಹಾಡುವ ಹಾಗಿತ್ತು. ಕರ್ನಾಟಕ seal down ಎನ್ನುವ ಸುದ್ದಿ ಖಾತ್ರಿ ಆಗುವ ಮುನ್ನವೇ ಚಿತ್ರ ವಿಚಿತ್ರವಾಗಿ ಬಿತ್ತರಿಸಿ ಜನಗಳಲ್ಲಿ anxiety ಮೂಡಿಸಿದ್ದು ಇವರ ಸಾಧನೆಗೆ ಮತ್ತೊಂದು ಗರಿ. ಆದರೆ, ಇದಥ ಬಗ್ಗೆ ಗಮನ ಹರಿಸಿ ನಿಯಮಾವಳಿ ರೂಪಿಸುವ ಕಾರ್ಯ ಮಾತ್ರ ನಡೆದೇ ಇಲ್ಲ

    ಪ್ರತಿಕ್ರಿಯೆ
  5. Nagashree S

    ಸಕಾಲಿಕ ಲೇಖನ ಮೇಡಂ. ಕನಿಷ್ಟ ಸೂಕ್ಷ್ಮತೆಯೂ ಇಲ್ಲದೆ, ಭಾಷೆಯ ಮೇಲೆ ಹಿಡಿತವೇ ಇಲ್ಲದೆ ಅರಚುವುದೇ ಹೆಚ್ಚುಗಾರಿಕೆ ಎಂದುಕೊಂಡಿರುವ ಮಾಧ್ಯಮಗಳ ಕುರಿತಾದ ನಿಮ್ಮ ಮಾತುಗಳು ನನ್ನದು ಕೂಡ. ಕ್ಷಣಕ್ಷಣಕ್ಕೂ ತೋರಿಸುವಷ್ಟು ಸುದ್ದಿ ಎಲ್ಲಿರುತ್ತದೆ? ಎಲ್ಲವನ್ನೂ ‘ಸುದ್ದಿ’ ಮಾಡುತ್ತಿರುವುದು ವೀಕ್ಷಕರ ಸಹನೆ ಪರೀಕ್ಷಿಸುತ್ತಿದೆ.‌

    ಪ್ರತಿಕ್ರಿಯೆ
    • Vinna

      ಒಂದು ಒಳ್ಳೆ ಬರಹ ಮೇಡಂ. ಕ್ಷಣ ಕ್ಷಣದ ಸುದ್ದಿ ಅಂತಾರೆ ಒಂದೇ ವಿಷಯವನ್ನು ಬೇರೆ ಬೇರೆ ಪದ ಬಳಸಿ ಹೇಳುತಾರೆ. ನಮ್ಮಲೇ ಮೊದಲು ಅಂತ ಎಲ್ಲ ಮಾಧ್ಯಮದವರದು ಒಂದೇ ಗೋಳು. ಬೆಚ್ಚಿ ಬೀಳಿಸುವ ವಿಚಾರ ಅಂತ ಹೇಳಿ ಜನರರನ್ನು ಭಯ ಬೀಳಿಸುತಾರೆ…

      ಪ್ರತಿಕ್ರಿಯೆ
  6. Ravi BG

    ಅರ್ಥಗರ್ಭಿತ ಹಾಗೂ ಸಮಯೋಚಿ ಬರವಣಿಗೆ! ಬಹುತೇಕ ಎಲ್ಲಾ ದ್ರಿಶ್ಯ ಮಾಧ್ಯಮಗಳು, ಜನರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿವೆ.

    ನಮ್ಮಲೇ ಮೊದಲುಯಂಬ ಹುಂಭ… ನಂಬಿಕೆಯೊಂದಿಗೆ…. !

    ಪ್ರತಿಕ್ರಿಯೆ
    • A. Shrilatha

      ಕೆಲವು channels ಸತತವಾಗಿ ನೋಡಿದರೆ ಮಾನಸಿಕವಾಗಿ ಖಿನ್ನತೆಯುಂಟಾಗುತ್ತದೆ. ಗಟ್ಟಿ ಯಾಗಿ ಕಿರುಚುವಿಕೆ, ಧ್ವನಿಯಲ್ಲಿ ಏರಿಳಿತಗಳೇ ಇಲ್ಲ. ಜಾಗೃತಿ ಮೂಡಿಸಬೇಕೆ ಹೊರತು ಭಯ ಪಡುವಂತೆ ನಿರೂಪಣೆ ಮಾಡಬಾರದು. – ಎ. ಶ್ರೀಲತಾ.

      ಪ್ರತಿಕ್ರಿಯೆ
  7. ವಿನ್ನು. ರವಿ

    ಒಂದು ಒಳ್ಳೆ ಬರಹ ಮೇಡಂ. ಕ್ಷಣ ಕ್ಷಣದ ಸುದ್ದಿ ಅಂತಾರೆ ಒಂದೇ ವಿಷಯವನ್ನು ಬೇರೆ ಬೇರೆ ಪದ ಬಳಸಿ ಹೇಳುತಾರೆ. ನಮ್ಮಲೇ ಮೊದಲು ಅಂತ ಎಲ್ಲ ಮಾಧ್ಯಮದವರದು ಒಂದೇ ಗೋಳು. ಬೆಚ್ಚಿ ಬೀಳಿಸುವ ವಿಚಾರ ಅಂತ ಹೇಳಿ ಜನರರನ್ನು ಭಯ ಬೀಳಿಸುತಾರೆ…

    ಪ್ರತಿಕ್ರಿಯೆ
    • Ravi BG

      ಬೆಚ್ಚಿಬೀಳುವ, ಸುದ್ದಿಗಳನ್ನು… ಜಿಗುಪ್ಸೆ ಉಂಟಾಗಿದೆ.

      ಪ್ರತಿಕ್ರಿಯೆ
  8. ವೇದ

    ನಿಜ ಸುಮತಿ. ಈ ಸುದ್ದಿ ಓದುವವರು ಎಷ್ಟು ಕೆಟ್ಟದಾಗಿ ಓದುತ್ತಾರೆಂದ್ರೆ, ಅವರ ಭಾಷೆ ಹಾವ ಭಾವ ಎಲ್ಲವೂ ಜಿಗುಪ್ಸೆ ಹುಟ್ಟಿಸುತ್ತದೆ. ನೀ ಬರೆದಂತೆ ಸಾವಿನ ಲೆಕ್ಕ ಹೇಳುವುದು ಒಂದು ಸಂತೋಷದ ಸಮಾಚಾರದಂತೆ ಹೇಳುತ್ತಾರೆ. ನಾನು ಇತ್ತೀಚೆಗೆ News channel ಗಳನ್ನು ನೋಡುವುದನ್ನೇ ನಿಲ್ಲಿಸಿದ್ದೀನಿ

    ಪ್ರತಿಕ್ರಿಯೆ
  9. Dayanand

    ಖಾಸಗಿ ಸುದ್ದಿ ಮಾಧ್ಯಮಗಳನ್ನ ಹೆಚ್ಚಾಗಿ ನೋಡಿದ ಫಲವೇ ನಿಮ್ಮ ಲೇಖನ ಅನ್ನೋದು ಭಾವನೆ ಮೇಡಂ.ದಡ್ಡ ಜನಕ್ಕೆ ಹೇಗೆ ಹೇಳಬೇಕೋ ಹಾಗೇ ಮಾಧ್ಯಮಗಳು ಹೇಳ್ತೀವೆ.. ಇಷ್ಟಾದ್ಮೇಲೂ .. ಇಷ್ಟು ಜನ ಸತ್ತರು ಅಂತ ಕಿರುಚಿ.. ಹರಿದುಕೊಂಡು ಹೇಳಿದರೂ ಕೇಳ್ತಿಲ್ಲ.. ಅದು ಹೋಗಲಿ ಪೊಲೀಸರು ಲಾಠಿ ಮುರಿಯುವಂಗೆ ಹೊಡೆದರೂ ಬಗ್ಗುತ್ತಿಲ್ಲ.. ಅಂಥದ್ರಲ್ಲಿ ನಯವಾಗಿ ನಾಜೂಕಾಗಿ.. ಸತ್ತವರ ಲೆಕ್ಕ ಹೇಳದೆ.. ಸೋಂಕಿತರ ಲೆಕ್ಕ ಹೇಳದೆ.. ಅದಕ್ಕೆ ಮತ್ತಷ್ಟು ಪ್ರಾಶಸ್ತ್ಯ ಕೊಡದೆ.. (ಎಂದು ಹೇಳಿದರು.. ಅಂತಾ ಮಾಹಿತಿ ನೀಡಿದಿ.. ಸರ್ಕಾರ ಮನವಿ ಮಾಡಿದೆ.. ಕ್ರಮ ಕೈಗೊಳ್ಳಲಾಗಿದೆ.. ಎಚ್ಚರಿಕೆ ವಹಿಸಲಾಗಿದೆ) ಹೀಗೆ ಸರ್ಕಾರಿ ಭಾಷೆಯಲ್ಲಿ ಹೇಳಿದ್ರೆ ಕೇಳ್ತಾರಾ.. ಅಷ್ಟಕ್ಕೂ ಅಷ್ಟೊಂದು ಚಾನೆಲ್ ಗಳಿರುವಾಗ ಸುದ್ದಿ ಮಾಧ್ಯಮಗಳ ಮೇಲೇಕೆ ನಿಮ್ಮ ವಕ್ರ ಕಣ್ಣು ಅನ್ನೋದು ಅರ್ಥ ವಾಗದ ಮಿಲಿಯನ್ ಡಾಲರ್ ಪ್ರಶ್ನೆ..)

    ಪ್ರತಿಕ್ರಿಯೆ
  10. Sumathi BK

    ದಯಾನಂದ ಅವರೇ, ದಡ್ಡರಿಗೆ channel ಗಳು ಅಂತಾ ಇದ್ದೀರಿ. ಸಂತೋಷ.
    ಹೆಚ್ಚು ಕಿರುಚಿದರೆ ಹೆಚ್ಚು ತಲುಪುತ್ತೆ ಅಂತ ಹೇಳ್ತೀರಿ. ಒಳ್ಳೆಯದು.
    ಇಷ್ಟು ಕಿರುಚಿದರೂ ಕೇಳಿಸ್ತಿಲ್ಲ ನಮ್ಮ ಜನಕ್ಕೆ ಅನ್ನೋದು ನಿಮ್ಮ ಕಾಳಜಿ ತೋರಿಸುತ್ತೆ.
    ಸರ್ಕಾರಿ ಭಾಷೆ, ಖಾಸಗಿ ಭಾಷೆ ಅಂತ ಇಲ್ಲ ಇರೋದು ಒಂದೇ. ಅದು ನಮ್ಮ ಮುದ್ದು ಕನ್ನಡ.
    ನನ್ನ ದೃಷ್ಟಿ ಭಾಷೆ ಮತ್ತು ಪ್ರಸ್ತುತೀಕರಣ ದ ಬಗ್ಗೆ ಮಾತ್ರ. ಕಿವಿಗೆ ಕಠಿಣ ಎನಿಸದಿರಲಿ. ಮನಸಿಗೆ ಹಿತ ಇರಲಿ. ಅಲ್ಲವೇ. ನಮಸ್ಕಾರ.

    ಪ್ರತಿಕ್ರಿಯೆ
  11. Sumathi BK

    ದಯಾನಂದ ಅವರೇ,
    ದಡ್ಡರಿಗೆ channel ಗಳು ಅಂತಾ ಇದ್ದೀರಿ. ಸಂತೋಷ.
    ಹೆಚ್ಚು ಕಿರುಚಿದರೆ ಹೆಚ್ಚು ತಲುಪುತ್ತೆ ಅಂತ ಹೇಳ್ತೀರಿ. ಒಳ್ಳೆಯದು.
    ಇಷ್ಟು ಕಿರುಚಿದರೂ ಕೇಳಿಸ್ತಿಲ್ಲ ನಮ್ಮ ಜನಕ್ಕೆ ಅನ್ನೋದು ನಿಮ್ಮ ಕಾಳಜಿ ತೋರಿಸುತ್ತೆ.
    ಸರ್ಕಾರಿ ಭಾಷೆ, ಖಾಸಗಿ ಭಾಷೆ ಅಂತ ಇಲ್ಲ ಇರೋದು ಒಂದೇ. ಅದು ನಮ್ಮ ಮುದ್ದು ಕನ್ನಡ.
    ನನ್ನ ದೃಷ್ಟಿ ಭಾಷೆ ಮತ್ತು ಪ್ರಸ್ತುತೀಕರಣ ದ ಬಗ್ಗೆ ಮಾತ್ರ. ಕಿವಿಗೆ ಕಠಿಣ ಎನಿಸದಿರಲಿ. ಮನಸಿಗೆ ಹಿತ ಇರಲಿ. ಅಲ್ಲವೇ. ನಮಸ್ಕಾರ.

    ಪ್ರತಿಕ್ರಿಯೆ
  12. Dhanyakumar Minajagi

    ಖಾಸಗಿ ವಾಹಿನಿಗಳು ಸುದ್ದಿ ಸಮಾಚಾರ ಪ್ರಸಾರ ಮಾಡುವಾಗ ಅನುಸರಿಸುತ್ತಿರುವ ಶೈಲಿ ಯಾವುದೆಂದರೆ ಅದು ಅರ್ನಾಬ ಗೋಸ್ವಾಮಿ ಅರಚುವ ಶೈಲಿ. ಆ ಮಹಾಪ್ರಭು ಯಾವಾಗ ಕಿರುಚಲು ಪ್ರಾರಂಭಿಸಿದನೋ ಅಂದಿನಿಂದ ಕನ್ನಡದ ಎಲ್ಲ ವಾಹಿನಿಗಳು ಶುರವಿಟ್ಟುಕೊಂಡವು. ಮೊದ ಮೊದಲು ಅಪರಾಧ ಪ್ರಕರಣಗಳನ್ನು ಪ್ರಸ್ತುತ ಪಡಿಸಲು ಪ್ರಾರಂಭಿಸಿದವರು ಎಲ್ಲ ಸಮಾಚಾರಗಳಿಗೂ ಅಳವಡಿಸಿಕೊಂಡಿದ್ದಾರೆ.
    ನಾನು ವೈಯಕ್ತಿಕವಾಗಿ ದೂರದರ್ಶನದ ಚಂದನ ಮತ್ತು ಇಂಗ್ಲಿಷ ಸುದ್ದಿಗಳನ್ನು ವೀಕಷಿಸುತ್ತಿದ್ದೇನೆ.
    ತಮ್ಮ ಲೇಖನವನ್ನು ಎಲ್ಲ ವಾಹಿನಿಯ ಅ್ಯಂಕರುಗಳಿಗೆ ಕಳುಹಿಸಿದರೆ ಉತ್ತಮ ಎಂಬುದು ನನ್ನ ಅನಿಸಿಕೆ.
    ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: