ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ನಿಮ್ಮನ್ನ ಮೇಷ್ಟ್ರು ಎನ್ನುತ್ತಾರೆ.. ನಾನು ಏನನ್ನಲಿ?

ಚಿದಂಬರ ನರೇಂದ್ರ

ಸರ್,

ನೀವು ಝಾಡಿಸಿ ಒದ್ದ ಮೇಲೆ
ನಾನು ಆ ಚಡ್ಡಿಯನ್ನ
ಹಾಕಿಕೊಂಡಿದ್ದೇ ಇಲ್ಲ.

ನೀವು ಅಕ್ಕರೆಯಿಂದ
ಕುಡಿಯುವುದ ಕಲಿಸಿದ ಮೇಲೆ,
ನಾನು ಆ ನಶೆಯಿಂದ ಹೊರ ಬಂದಿದ್ದೇ ಇಲ್ಲ.

ನೀವು ಕೆಣಕಿ ಅಣಕಿಸಿದಾಗ
ನಾನು ಕೆರಳಿದ್ದಕ್ಕಿಂತ
ಅರಳಿದ್ದೇ ಒಂದು ತೂಕ ಜಾಸ್ತಿ .

ನೀವು ಕಣ್ಣು ಕೊಟ್ಟ ಮೇಲೆ
ನನಗೆ ಕಂಡಿದ್ದು, ನೀವು ತೋರಿಸಿದ್ದಕ್ಕಿಂತಲೂ
ಹೆಚ್ಚು ಅರ್ಥಪೂರ್ಣ.

ಬೂಟಾಟಿಕೆ ನಿಂತಿಲ್ಲ ಸರ್
ಆದರೆ, ಇವತ್ತು ನನಗೆ ಸ್ವಲ್ಪ ನಾಚಿಕೆ.
ಅಷ್ಟು ಮಾತ್ರ ಕ್ರೆಡಿಟ್ ನಿಮಗೆ.

ನೀವು ಕೆತ್ತಿದ ಮೂರ್ತಿಗಳು
ಒಡೆದ ಗುಡಿಗಳು, ಎಲ್ಲ
ನಿಮ್ಮ ನ್ಯಾಯದ ಋಣದಲ್ಲಿವೆ.

” ನೀವಿರಬೇಕಿತ್ತು ಇವತ್ತು ” ಎಂದು
ನಾವು ಆಗಾಗ ಕನವರಿಸುವುದನ್ನು
ಅವಡುಗಚ್ಚಿ ಕ್ಷಮಿಸಿಬಿಡಿ.

ಎಲ್ಲ ನಿಮ್ಮನ್ನ ಮೇಷ್ಟ್ರು ಎನ್ನುತ್ತಾರೆ
ನಾನು ಏನನ್ನಲಿ?

‍ಲೇಖಕರು avadhi

25 January, 2019

1 Comment

  1. Kotresh

    Very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading