ಎಲ್ಲಿ ನಿನ್ನ ಕೊಳಲು..

ಸಾ. ದಯಾ

ನೀನಂದು ನುಡಿಸಿದ್ದ ಕೊಳಲ ಹೆಜ್ಜೆ ಹೆಜ್ಜೆಗಳು ಗಲ್ಲಿಗಲ್ಲಿಗಳಲ್ಲಿ ನಿನ್ನ ಕೊಳಲ ನಾದಕ್ಕೆ
ಎದೆ ಎದೆಯೊಳಗೂ ಅರಳಿದ ಪ್ರೀತಿ

ಈ ಮಣ್ಣ ನೋವು ನಲಿವು;
ಹೇಗೆ ಉಡುಗಿ ಹೋಯಿತು ತೊಟ್ಟ ಉಸಿರು.

ಎಲ್ಲಿ ಮರೆಯಾಯಿತು ನಿನ್ನ ಕೊಳಲು
ಗಲ್ಲಿಗಲ್ಲಿಗಳಲ್ಲಿ ಹೆಜ್ಜೆ ಊರಿ ಕುಣಿದಂತ ಕೊಳಲು
ಸಾಗರದ ಅಲೆಗಳಲ್ಲಿ ಪ್ರೀತಿಯ ಸಿಂಚನವನ್ನಿತ್ತ ಕೊಳಲು
ಗುಡ್ಡ ಬೆಟ್ಟಗಳ ಸವರಿ ಹೆಜ್ಜೇನು ಸುರಿದ ಕೊಳಲು
ಯಾವ ಕಾರಣಕೆ, ಹೇಗೆ ಲುಪ್ತವಾಯಿತು ಕೊಳಲು.

ಎದೆಯ ತಣಿಸಿದ ನಾದ
ರಾಧೆಯ ಒಲವಿನಲಿ ಮಿಂದ
ಗೋಪಿಕೆಯರ ಉಲಿದ
ಕೊಳಲ ಮೀಟಿದ ನಿನ್ನ ಕೈ ಬೆರಳು ಎಲ್ಲಿ?

ಯೋಗ ನಿದ್ರೆಯಿಂದೆದ್ದು ಬಾ ಯೋಗಿ
ಇಳಿದು ಬಿಡು ಜಗ ಜಟ್ಟಿಗಳ ಈ ಜಗಕೆ
ಅಖಾಡದಲಿ ಕೆಸರು ತುಂಬಿಹುದು
ಎದೆಯಿಂದ ಎದೆಗೆ ಹರಿವ ಪ್ರೇಮ ಸುಧೆಯ
ಮತ್ತೆ ನುಡಿಸಿಬಿಡು ಲಯಬದ್ಧ ಸಾಲುಗಳ.

ಕೊಳಲೊಂದು ರೂಪಕವಾದದು ಸಾಕು
ಜೀವ ಜೀವಗಳಲಿ ರಸಬಿಂದು ಸುರಿಸು
ನಿನ್ನ ಕೈ ಬೆರಳ ಕುಣಿಸು.

ಸಾ.ದಯಾ ಅವರು ಮುಂಬಯಿಯ ಹಿರಿಯ ಕವಿ. ಸಂಕ್ರಮಣ ಕಾವ್ಯ ಸ್ಪರ್ಧೆ ಯಲ್ಲಿ ಬಹುಮಾನಿತರು. ಜಾತ್ರೆಯ ಮರುದಿನ; , ಮಳೆ ಹನಿ ಮುತ್ತು; ,ಪಾಟಕ್; ,ಪೊಸ ಬೊಲ್ಪು; ಒಸರ್; ಉಬರ್; ಗುರುಗುಂಜಿ ಕೃತಿಗಳು.
ಸುಮಾರು ೨೦ಕ್ಕಿಂತಲೂ ಹೆಚ್ಚು ಕನ್ನಡ-ತುಳು ನಾಟಕ, ರೂಪಕ, ನೆರಳು ನಾಟಕಗಳ ರಚನೆ, ನಿರ್ದೇಶನ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ahalya Ballal

    ಪರಿಚಿತವೆನಿಸುವ ಹುಡುಕಾಟದ ಅಭಿವ್ಯಕ್ತಿ… ಕೊನೆಯ “ಕೊಳಲೊಂದು ರೂಪಕವಾದದು ಸಾಕು” ಎಂಬಲ್ಲಿ ಝಗ್ಗನೆ ದೀಪ ಹೊತ್ತಿದಂತಾಯಿತು. ಅಭಿನಂದನೆ, ದಯಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: