ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಎಲ್ಲರೆಲ್ಲರ ಕಣ್ಣೊಳು ಮಗುವಿನ ನಗುವು ನಲಿಯುವ ಕಾಲವು ತುಂಬಿ ಬರಲಿ…'

ಉಗಾದಿಗೆ…

– ನಾಗತಿಹಳ್ಳಿ ರಮೇಶ

ಬರಲಿ ಬರಲಿ ಉಗಾದಿ
ಹೊಸ ಹರುಷವ ತರಲಿ ಯುಗಾದಿ
ಬರಲಿ ಬರಲಿ ಉಗಾದಿ
ನಿಜ ಸುಖವ ತರಲಿ ಯುಗಾದಿ
ದುಡಿವ ತೋಳಿಗೆ ಚೇತನವಾಗಿ
ದುಃಖದ ಬಾಳಿಗೆ ಸಂತಸವಾಗಿ
ನೆತ್ತರು ಹರಿಸುವ ಮನವು ಬತ್ತಿ
ಬೆಳಗಲಿ ಒಲವಿನ ಹಣತೆಯು ಹೊತ್ತಿ
ಹೊಂಗೆ ಬೇವಿನ ಹೂಗಳ ಕಂಪಲಿ
ಹರಿವ ನೀರಿನ ಅಲೆಗಳ ತಂಪಲಿ
ಗಿಡಮರ ಬಳ್ಳಿಯ ಚಿಗುರಿನ ಹೊಳಪಲಿ
ಕಬ್ಬಿನ ಜಲ್ಲೆಯ ಸುಗ್ಗಿಯ ಹಸಿರಲಿ
ಬರಲಿ ಬರಲಿ ಉಗಾದಿ

ಮಾವಿನ ಮರದಲಿ ಕೋಗಿಲೆ ಸ್ವರದಲಿ
ಜೀವನ ಜೋಕಾಲಿ ಜೀಕುತಾ ಬರಲಿ
ಅರಳೀ ಮರದಲಿ ಆಲದ ಮರದಲಿ
ಕಾಗೆಯ ಕರುಳಿನ ಕರೆಯು ಮೊಳಗಲಿ
ಜನಮನ ಜೀವನ ಚಾಲಕ ಶಕ್ತಿ
ಪ್ರೇಮ ಕಾಂತಿಯ ಕಂಗಳ ದೀಪ್ತಿ
ಅವ್ವನ ಕೈಯಲಿ ಮೂಡುವ ಹೋಳಿಗೆ
ತುಂಬಲಿ ಊರು ಕೇರಿಯ ಜೋಳಿಗೆ
ಬಾ ಉಗಾದಿ ನವ ಯುಗಾದಿ
ನೇಗಿಲ ಬೆವರಿಗೆ ನೆಲವು ಅರಳಿ
ಒಲುಮೆಯ ಬಾಳಿಗೆ ತೋರಣಕಟ್ಟಿ
ನಮ್ಮೆದೆ ಕಾಡಲಿ ಸೊಬಗಿನ ನವಿಲು
ಗರಿಗಳ ಬಿಚ್ಚಿ ಕುಣಿಯುತಾ ಬರಲಿ
ಕತ್ತಲೆ ಬದುಕಿಗೆ ಸಮತೆಯ ಕರುಣೆಯ
ಬೆಳಕಿನ ನದಿಯು ಹರಿಯುತಾ ಬರಲಿ
ಎಲ್ಲರೆಲ್ಲರ ಕಣ್ಣೊಳು ಮಗುವಿನ ನಗುವು
ನಲಿಯುವ ಕಾಲವು ತುಂಬಿ ಬರಲಿ
 

‍ಲೇಖಕರು G

21 March, 2015

2 Comments

  1. mmshaik

    oLLeya kavite…

  2. Rukmini Nagannavar

    ಯುಗಾದಗೆ ನಿಮ್ಮ ಆಶಯಗಳೆಲ್ಲ ಈಡೇರಲಿ. ಸರ್ವೇ ಜನ ಸುಖಿನೋ ಭವಂತು..
    ಯುಗಾದಿ ಶುಭಾಶಯಗಳು ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading