ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಮ್ಮನ ಗುಡ್ಡದಲ್ಲಿ ಒಮ್ಮೆ ನಿಂತು ನೋಡಿ ಹೋಗಿ

n e joshi

ಎಂ ಇ ಜೋಷಿ 

ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು ಕೆಲಸ? ಅಂತ ತಮಾಷೆಗೂ ಹೇಳ್ಬೇಡಿ.
ಹಣ್ಣು, ಹೂ, ಕಾಯಿ, ಹಡ್ಲಿಗಿ, ಅರಿಷಿಣ- ಕುಂಕುಮ, ಕಿರಾಣಿ, ದೇವರ ಫೋಟೋ  ಹೀಗೆ ಎಲ್ಲದಕ್ಕೂ ಮುಲ್ಲಾಗಳೇ ಬೇಕು.
ಅಮ್ಮನ ದರ್ಶನ ಮಾಡಿ ಆಚೆಗೆ ಬಂದರೆ ಚಹ, ತಿಂಡಿ, ಮಿರ್ಚಿ, ವಡಾಕ್ಕೂ ಮುಲ್ಲಾಗಳೇ ಬೇಕು. ಎಲ್ಲಮ್ಮನ ಜಾತ್ರೆಯುದ್ದಕ್ಕೂ ಇವರೇ ಇದ್ದಾರೆ.
ಆ ಮೂಲಕ ಎಲ್ಲಮ್ಮ ಗುಡ್ಡ ಸೌಹಾರ್ದತೆಯ ತಾಣವಾಗಿದೆ. ಜೀವ ತೆಗೆಯುವ ಭಯೋತ್ಪಾದಕರು ಇಲ್ಲಿನ ಆದರ್ಶ ಪಾಲಿಸಲಿ.
ಆ ಮೂಲಕ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆಗೆ ಮುನ್ನುಡಿ ಬರೆಯಲಿ.
savadatti3
savadatti4
savadatti5
savadatti6
savadatti7
savadatti8
savadatti9
 

‍ಲೇಖಕರು Avadhi

27 February, 2016

5 Comments

  1. ಹಜರತ್ ಅಲಿ ದೇಗಿನಾಳ

    ಸರಜೀ, ದೇಶದ ಕೋಟಿ ಕೋಟಿ ಬಡಜನರಿಗೆ ‘ಪಹಲೆ ಪೇಟೊಬಾ ಬಾದಮೇ ವಿಠೋಬಾ’.

  2. ಶಮ, ನಂದಿಬೆಟ್ಟ

    ಜಗತ್ತಿಡೀ ಎಲ್ಲಮ್ಮನ ಗುಡ್ಡವಾಗಲಿ

  3. Anonymous

    shh!.. puttur shasakaru illiguu bandaaru..!

  4. ಟಿ.ಕೆ.ಗಂಗಾಧರ ಪತ್ತಾರ.

    ಶಮ, ನಂದಿಬೆಟ್ಟರವರು “ಜಗತ್ತಿಡೀ ಎಲ್ಲಮ್ಮನ ಗುಡ್ಡವಾಗಲಿ” ಎಂದು ಅಪ್ಪಣೆ ಕೊಡಿಸಿದ್ದಾರೆ. ಅಂದರೆ ಈ ಇಡೀ ಜಗತ್ತು ಮೌಢ್ಯಾಚರಣೆ, ಅಂಧಾನುಕರಣೆ, ಸ್ತ್ರೀ ಶೋಷಣೆಯ ತಾಣವಾಗಬೇಕೇ?. ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ತೀಟೆ ತೀರಿಸಿಕೊಳ್ಳಲು ಸಂಪ್ರದಾಯದ ನೆಪದಲ್ಲಿ ಅಸಂಖ್ಯಾತ ಸೋದರಿಯರನ್ನು ದೇವದಾಸಿಯರನ್ನಾಗಿಸುವುದು ಶಮ, ನಂದಿಬೆಟ್ಟರವರಿಗೂ ಅಥವಾ ಯಾರಿಗೂ ಕಾಣಿಸುವುದಿಲ್ಲವೇ?. ಹೊರಗಣ ಪರಿಸರ ಸೌಹಾರ್ದತೆಯುಕ್ತವಾಗಿದ್ದರೆ ಸಾಕೇ? ಒಳಗೆ ದೇವರ ಹೆಸರಿನಲ್ಲಿ ಏನು ನಡೆದರೂ ಸಹ್ಯವೇ?

    • Shama, Nandibetta

      ಟಿ.ಕೆ.ಗಂಗಾಧರ ಪತ್ತಾರ ಅವರೇ,
      ನಮಸ್ತೇ.
      ನನ್ನ ಸೀಮಿತ ಅರಿವು ಮತ್ತು ತಿಳಿವಿನ ಪರಿಧಿಯಲ್ಲಿ ನಾನು ಈ ಬರಹವನ್ನು ಅರ್ಥೈಸಿಕೊಂಡಾಗ ನನಗೆ ಗೊತ್ತಾಗಿದ್ದು ಎಲ್ಲಮ್ಮನನ್ನು ಯಾವತ್ತೂ ಆರಾಧಿಸದ ಮುಲ್ಲಾಗಳು ಅಲ್ಲಿ ಪ್ರತಿ ಆಗು ಹೋಗುಗಳಲ್ಲಿ ತಮ್ಮ ಛಾಪು ಬೆರೆಸಿ ಹೆಜ್ಜೆ ಹೆಜ್ಜೆಗೂ ಜಾತ್ರೆಯನ್ನು ಚೆಂದಗಾಣಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೂ ಅನವಶ್ಯಕವಾಗಿ ಜಾತಿ ಮತ ಪಂಥಗಳ ಬಣ್ಣ ಬಳಿದು ಮನುಷ್ಯರನ್ನು ತರಕಾರಿಗಿಂತಲೂ ಕಡೆಯಾಗಿ ಕೊಚ್ಚಿ ಹಾಕುವ ಸಮಾಜದಲ್ಲಿ ಬದುಕುತ್ತಿರುವ ನನಗಿದು ಅಚ್ಚರಿ ಮತ್ತು ಖುಷಿಯ ವಿಚಾರವಾಗಿ ಕಂಡಿದೆ. ಈ ಬರಹದ ಮೂಲ ಆಶಯ ಕೂಡ ಅಲ್ಲಿನ ಸೌಹಾರ್ದತೆಯನ್ನು ಬಿಚ್ಚಿಡುವುದೇ ಆಗಿತ್ತು ಎಂದು ನನ್ನ ಅಭಿಪ್ರಾಯ. ಎಲ್ಲರೂ ಅವರವರ ಜಾತಿ ಮತ ಪಂಥಗಳನ್ನು ಅನುಸರಿಸಿಯೂ ಅದರ ಬೇಲಿಯಾಚೆ ಜಿಗಿದು ನಗುವುದು ನನ್ನ ಕನಸು ಕೂಡ. ಎಲ್ಲಮ್ಮ ಗುಡ್ಡದಲ್ಲಿ ಇಂಥ ಸೌಹಾರ್ದತೆ ನೆಲೆಯಾಗಬಹುದಾದರೆ ಜಗತ್ತೇ ಯಾಕೆ ಎಲ್ಲಮ್ಮನ ಗುಡ್ಡವಾಗಬಾರದು ಎಂಬ ನನ್ನ ಆಸೆ ಈ ಕ್ಷಣವೂ ಜೀವಂತ.
      ಇನ್ನು “ಈ ಇಡೀ ಜಗತ್ತು ಮೌಢ್ಯಾಚರಣೆ, ಅಮಧಾನುಕರಣೆ ಸ್ತ್ರೀ ಶೋಷಣೆಯ ತಾಣವಾಗಬೇಕೇ ? ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ತೀಟೆ ತೀರಿಸಿಕೊಳ್ಳಲು ಸಂಪ್ರದಾಯದ ನೆಪದಲ್ಲಿ ಅಸಂಖ್ಯಾತ ಸೋದರಿಯರನ್ನು ದೇವದಾಸಿಯರನ್ನಾಗಿಸುವುದು ಶಮ ನಂದಿಬೆಟ್ಟರವರಿಗೂ ಅಥವಾ ಯಾರಿಗೂ ಕಾಣಿಸುವುದಿಲ್ಲವೇ ಹೊರಗಣ ಪರಿಸರ ಸೌಹಾರ್ದಯುತವಾಗಿದ್ದರೆ ಸಾಕೇ ? ಒಳಗೆ ದೇವರ ಹೆಸರಿನಲ್ಲಿ ಏನು ನಡೆದರೂ ಸಹ್ಯವೇ?” ಎಂಬ ನಿಮ್ಮ ಪ್ರಶ್ನೆ ಮೌಲಿಕವೂ ಸಮಯೋಚಿತವೂ ಆಗಿದೆ. ಆದರೆ ಇದನ್ನು ನೀವು ಕೇಳಬೇಕಾಗಿರುವುದು ನನಗಲ್ಲ ಎನ್ನೋದಷ್ಟೇ ನನ್ನ ತಕರಾರು.
      ಕಾರಣ ನಾನು ಈ ವರೆಗೆ ಆ ಜಾಗವನ್ನು ಕಂಡವಳಾಗಲೀ ಒಳ ಹೊರಗಿನ ಅರಿವು ಇರುವವಳಾಗಲೀ ಅಲ್ಲ. ಇಲ್ಲಿನ ಬರಹದ ಆಶಯ, ಸೋಗಿಲ್ಲದ ಅಲ್ಲಿನ ಸೌಹಾರ್ದತೆ ಇಷ್ಟವಾಯ್ತು. ಜಗತ್ತಿಗಿಡೀ ಅದು ಹಬ್ಬಲಿ ಅಂದೆ. ಎಲ್ಲಕ್ಕೂ ಹೆಚ್ಚಾಗಿ ಆ ಲೇಖನದಲ್ಲಿ ಅವುಗಳ ಪ್ರಸ್ತಾಪ ಕೂಡ ಇಲ್ಲ. ಹಾಗಿದ್ದಾಗ ಅದು ನನಗೆ ಗೊತ್ತಾಗುವ ಸಾಧ್ಯತೆಗಳಾದರೂ ಹೇಗೆ ಎಂಬ ಯೋಚನೆ ನಿಮಗೆ ಬರಲಿಲ್ಲವೇ ? ಅಲ್ಲಿ ನಿಜಕ್ಕೂ ನೀವು ಹೇಳಿದಂಥ ಕೃತ್ಯಗಳು ನಡೆವುದಾದರೆ ಅವುಗಳು ಜಗತ್ತಿಡೀ ವ್ಯಾಪಿಸಲಿ ಅನ್ನುವಷ್ಟು ಪ್ರಜ್ಞಾಹೀನತೆ, ಅಮಾನವೀಯತೆ ನನ್ನೊಳಗಿನ್ನೂ ಹುಟ್ಟಿಲ್ಲ.
      ಇವೆಲ್ಲ ವಿಚಾರ ಅತ್ಲಾಗಿರಲಿ. ನೀವು ಇವನ್ನೆಲ್ಲ ತಿಳಿದುಕೊಂಡಿದ್ದೀರಿ ಮತ್ತು ಅವುಗಳ ಬಗ್ಗೆ ವಿರೋಧ ಮತ್ತು ಪರಿತಾಪ ಹೊಂದಿದ್ದೀರಿ ಎಂದು ನಿಮ್ಮ ಮಾತು ಹೇಳುತ್ತದೆ. ಇವನ್ನು ನಿವಾರಿಸುವಲ್ಲಿ, ಇಂಥ ವಿಷ ವೃಕ್ಷವನ್ನು ಕಡಿದೊಗೆಯುವಲ್ಲಿ ನೀವೇ ಯಾಕೆ ಮೊದಲ ಹೆಜ್ಜೆ ಇಡಬಾರದು ? ನನಗಾಗಲೀ ಇತರರಿಗಾಗಲೀ ಕಾಣದ್ದು ನಿಮಗೆ ಕಂಡಿದ್ದು ಶ್ಲಾಘನೀಯ. ಇದನ್ನು ಹೊರ ಜಗತ್ತಿಗೂ ಕಾಣಿಸುವ ಪ್ರಯತ್ನ ನಿಮ್ಮಿಂದಲೇ ಯಾಕಾಗಬಾರದು ? ಯಾರಿಗೂ ಕಾಣುತ್ತಿಲ್ಲ ಎಂದು ಪರಿತಪಿಸುವುದು ಜರೆಯುವುದು ಕಷ್ಟ; ನಮಗೆ ಕಂಡ ಕೆಟ್ಟದ್ದನ್ನು ಖಂಡಿಸುವುದು ಸುಲಭ. ನೀವದನ್ನು ಮಾಡಿ ಅಂಥ ಕೃತ್ಯಗಳು ನಿಮ್ಮ ನಾಯಕತ್ವದಲ್ಲಿ ನಿರ್ಮೂಲವಾದರೆ ಹೊರಗಿನ ಸೌಹಾರ್ದದ ಜತೆ ಒಳಗೂ ಸೌಹಾರ್ದ ಸ್ಥಾಪನೆಯಾದೀತು. “ಜಗತ್ತಿಡೀ ಎಲ್ಲಮ್ಮನ ಗುಡ್ಡವಾಗಲಿ” ಎಂಬ ನನ್ನ ಕನಸಿಗೂ ಹೊಸ ಅರ್ಥ ಸ್ಫುರಿಸೀತು. ಪುಣ್ಯದ ಕೆಲಸ, ಪ್ರಯತ್ನಿಸಿ ನೋಡಿ. ಶುಭವಾಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading