ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಸದ್ದುಗಳು, ನಡುವೆ ಒಂದು ಮೌನ…

-ವಿಜಯರಾಘವನ್ ರಾಮ್ ಕುಮಾರ್

ಶಿಷ್ಯ ಹ್ಸಿಯಾಂಗ್- ಯೆನ್ ಚಿ-ಸಿಯೆನ್
ಕಸಬಳಿಯುತ್ತಿದ್ದ ರಾಜಗುರು ನಾನ್ ಯಾಂಗ್
ನ ಸಮಾಧಿಯನ್ನು ಶುಚಿಮಾಡಲು
ಅವನ ಪೊರಕೆ ಸೆಳೆದ ಕಲ್ಲೊಂದು
ಹಾರಿ ಬಿದಿರು ಬೊಂಬಿನ ಆಸರೆಗಂಬಕ್ಕೆ
ಬಡಿದು ಮಾಡಿಯೇ ಬಿಟ್ಟಿತು ಸದ್ದು
ಟೊಕ್ ನಿಜ ಟೊಕ್ ಸದ್ದು
ಆಗ ಚಿ-ಸಿಯೆನ್ನ ತಲೆಯಲ್ಲಿದ್ದುದು
ಒಂದೇ ಪ್ರಶ್ನೆ, ನನ್ನ ಅಪ್ಪ-ಅಮ್ಮಂದಿರು
ಹುಟ್ಟುವ ಮೊದಲು ನನ್ನ ಮುಖವೆಂತಿತ್ತು?
ಅದೊಂದೇ ಸದ್ದು, ಟೊಕ್
ಬದುಕಿಲ್ಲದ ಧ್ಯಾನದಲ್ಲಿದ್ದವನಿಗೆ
ಉತ್ತರ ದೊರೆತೇಹೋಯಿತು
ಇನ್ನು ಈ ಚಿ-ಸಿಯೆನ್ಗೆ ಈ ಸಮಾಧಿ ಸಾಕು
ಚಿ-ಸಿಯೆನ್ ಹೇಳಿದ: ಆ ಒಂದು ಸದ್ದು
ನನ್ನ ಪೂರ್ವಜ್ಞಾನವನ್ನೆಲ್ಲ ಮರೆಸಿಬಿಟ್ಟಿತು.
ಅಸಹಜ ಶಿಸ್ತು ಇನ್ನು ಬೇಕಿಲ್ಲ
ಹೆಜ್ಜೆ ಹೆಜ್ಜೆಗಳಲ್ಲು ಆ ಅನಾದಿ ಮಾರ್ಗವನ್ನೆತ್ತಿ
ಹಿಡಿವೆ, ಬದುಕಿಲ್ಲದ ಧ್ಯಾನದಲ್ಲಿನ್ನು ಬೀಳುವುದುಂಟೇ
ನಾನು ನಡೆವಾಗಲಿನ್ನು ಹೆಜ್ಜೆಗುರುತುಗಳಿಲ್ಲ
ನಿಯತಿಗಳಿಗೆ ನನ್ನ ಇಂದ್ರಿಯಗಳಿನ್ನು ಬಂಧಿಯಲ್ಲ
***
ಶಿಷ್ಯ ಗುರುವಾದ. ಗುರುಗಳು ಬೇರೆಬೇರೆಯೇ?
ನಡೆದವರೆಲ್ಲ ಹಾದಿಯಾದರು, ಶಬ್ದವೇನಾಯಿತು?
***
ಆ ನಿಶಬ್ದ ಬದುಕಿಲ್ಲದ ಧ್ಯಾನದಲಿದ್ದ ಸೋದರ ಸಂತನನ್ನು
ಕಂಡು ಚಿಂಗ್ ತ್ಸೇನ್ ಮಾತಲ್ಲದ ಮಾತಲ್ಲಿ ಅಂದ:
ನೂರಡಿ ಎತ್ತರದ ಕಂಬದ ಮೇಲೆ ಕೂತ ನೀನು
ಈಗಾಗಲೇ ದಾರಿಯನ್ನು ತಲುಪಿಬಿಟ್ಟಿರುವೆ.
ಆದರೆ ಕ್ರಮಿಸದ ದಾರಿಯಲ್ಲದ ಅದು ನಿಜದ ದಾರಿಯಲ್ಲ
ನೀನಿರುವೆಡೆಯಿಂದ ಬಿಡಿಸಿಕೊಂಡು ಇನ್ನೊಂದಡಿಯಿಡು
ಬಳಿಕ ದಶದಿಕ್ಕುಗಳಲ್ಲಿನ ವಿಶ್ವಗಳೆಲ್ಲ ನಿನ್ನ ಪೂರ್ಣಕಾಯ
ಎಲ್ಲ ಕಳೆದರೂ, ಇನ್ನೊಂದು ಅಡಿ ಬಾಕಿ, ಪೂರ್ಣತೆಗೆ
ದಾರಿಯಲ್ಲದ ದಾರಿ, ಆಯ್ಕೆಯಲ್ಲದ ಅರಿವಿನೆಡೆಗೆ
***
ಇನ್ನೊಂದು ಸದ್ದಿನ ಕಥೆ
ಕಣ್ಣಿಗೆ ಹೊಸದಾದ ಹಳೆಯ ಕೊಳಕ್ಕೆ ತಡೆಗೋಡೆಗಳಿಲ್ಲ
ಕಪ್ಪೆ ಅಥವಾ ಗುರು ಬಾಶೋ ಕೊಳಕ್ಕೆ ಹಾರಿದರೆ
ಸದ್ದಿನ ಅನುರಣನವೆಲ್ಲಿಯದು? ಇದ್ದರೆ ತಾನೆ?
ಕಿರಿಯಲೆಗಳೆದ್ದವು ಮೌನ ಕೊಳದಲ್ಲಿ.

 

‍ಲೇಖಕರು avadhi

8 September, 2011

2 Comments

  1. raju hegade

    kaviteyendare ide allave

  2. veda

    sundara kavana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading