ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ರಷ್ಯನ್ ಕವಿತೆಗಳು

ರಷ್ಯನ್ ಕವಿ ರುಬ್ತ್ಸೋವ್‌ನ ಎರಡು ಕವಿತೆಗಳು

ಮೂಲ ರಷ್ಯನ್‌ ಕವಿತೆಗಳ ಆಂಗ್ಲ ಓದಿನ ಅನುವಾದ: ಗೀತೋಸ್ಮಿ

—-

ಕವಿತೆ- ಒಂದು

ಎಷ್ಟೊಂದು ಪರಿಶುಭ್ರವಾಗಿದ್ದವು ಅವು!

ನಸುಕಿನ ಇಬ್ಬನಿಯಲಿ ತೊಯ್ದು

ತರಿವವನ ನಿರ್ದಯ ಅಲಗು

ತೆನೆಯೊಂದಿಗೆ ಆ ಹೊಳಪನ್ನು

ಮುರಿವವರೆಗೂ..

“ಹೇಳುವೆಯ, ಯಾವ ಹೂಗಳಿವು?”-

ನಾ ಕೇಳಿದೆ;

ತುಂಬ ದಿನಗಳವರೆಗೆ

ಹಾಗೆಯೇ

ಉಳಿಯಿತು ಹೆಸರು-

ದ್ರೋಹಕ್ಕೆ ಬಲಿಯಾದ

ನಿಗೂಢ ಶೋಕದಂತೆ..

ಬಂದ ಉತ್ತರವಾದರೂ

ಅದೆಷ್ಟು ಹರಿತ!

ನೆತ್ತರ ಬಸಿವ

ಹೃದಯಗಳು

ತಾವೆಲ-

ಎನುತ..

ಕವಿತೆ ಎರಡು

ಮನುಷ್ಯ ಕಲ್ಲಿನಿಂದ ಕಲ್ಲನ್ನು ಬಡಿದ

ಉದ್ಭವವಾಗಿ ಸಿಡಿದ ಕಿಡಿ

ಹುಟ್ಟುಹಾಕಿತು ಒಂದು

ಪ್ರಜ್ವಲಿತ ಜ್ವಾಲೆ

ಕವಿಗಳ ಪರಿ ಕೂಡ ಹಾಗೆ

ಅವರ ಬಿರುಸು ತಾರೆಗಳಿಗವಶ್ಯ

ಪದಗಳೊಂದಿಗೆ ಬೇಕು-

ಪದಗಳ ಸಂಘರ್ಷ

ತಮ್ಮದೇ ಕಿಡಿ ಕುಡಿಯೊಡೆಯಲು

ಮತ್ತೆ ಬೇಕು-

ಮನದ ತುಡಿತ ಕೂಡ!

ಜಡ್ಡು ಬಿದ್ದವನ ಸ್ವಸ್ಥ ನಿದ್ರೆಯಂತೆ..

ಆದರೂ..

ಸಂತೋಷಕ್ಕೂ ಒಂದು

ಸುಂಕವಿದೆಯಷ್ಡೆ?

ದೇವತೆಗಳದೂ ಇದೇ ಅಭೀಷ್ಡೆ!

ಸ್ಫುರಿಸಲಿ ನಿಮ್ಮ ಒಳಗಿನಲ್ಲಿ

ಹೊಳೆವ ಪದಗಳು ಸಿಡಿದು

ಸೆಳೆ-ಮಿಂಚಿನಂತೆ ಪುಟಿದೊಗೆದು

ಬರಲಿ

ಆ ಬೊಗಸೆಯಲ್ಲಿ!

    

‍ಲೇಖಕರು avadhi

10 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading