ಕು ಸ ಮಧುಸೂದನ್ ನಾಯರ್
ವ್ಯತ್ಯಾಸ

ಇವತ್ತಿನ ಸಂಜೆ
ನಿನ್ನೆಯಂತಿಲ್ಲ
ನಿಜ
ನಾಳೆಯ ಸಂಜೆ ಇವತ್ತಿನಂತಿರುವುದಿಲ್ಲ
ಸಹಜ!
ಹಾಗೇನೆ ಯಾವುದೂ ಒಂದೇ ತೆರನಾಗಿರುವುದಿಲ್ಲ
ಅನ್ನುವುದು ನಿಸರ್ಗದ ನಿಯಮ;
ಆದರೆ
ಕವಿತೆ
ಹಾಗಲ್ಲ
ಇವತ್ತಿನ ಕವಿತೆಗೆ
ನಿನ್ನೆಯ
ನೆನಪಿರುತ್ತದೆ
ನಾಳೆಯ
ಕನಸಿರುತ್ತದೆ
ಮತ್ತೂ
ಈಕ್ಷಣದ
ಅರಿವಿರುತ್ತದೆ!
***
ಬದಲಾವಣೆಗೆ ಕಾಯುತ್ತ

ಈಗ ಮಾತ್ರವಲ್ಲ
ಯಾವಾಗಲು ಹಾಗೇನೆ ಜನ
ಕಾಯುತ್ತಿರುತ್ತಾರೆ
ಒಂದು ಬದಲಾಣೆಗಾಗಿ!
ಪಕ್ಕದ ಮನೆಯಲ್ಲಿ
ಪಕ್ಕದ ಬೀದಿಯಲ್ಲಿ
ಕನಿಷ್ಠ ಪಕ್ಕದ ಊರಲ್ಲಿ ಏನಾದರು
ಬದಲಾವಣೆ ಆಗಬಹುದೆಂದು ಕಾಯುತ್ತಿರುತ್ತಾರೆ
ನಿರಂತರವಾಗಿ;
ಹೀಗೆ ಕಾಯುವಾಗಲು ಅವರು
ಕೂತಲ್ಲಿಂದ ಕದಲುವುದಿಲ್ಲ
ಬಿಟ್ಟ ಬೇರು ಸಡಿಲಿಸುವುದಿಲ್ಲ
ಕಾಯುವುದನ್ನೇ ಕಸುಬಾಗಿಸಿಉಕೊಂಡವರು
ತಲ್ಲಣಗೊಳ್ಳುತ್ತಾರೆ
ತಮ್ಮ ಪಾದದಡಿಯಲಾಗುವ ಸಣ್ಣದೊಂದು ಕದಲಿಕೆಗೆ
ಯಾವುದೂ ಬದಲಾಗುವುದಿಲ್ಲ
ಕಾಯುವುದೂ ಬದಲಾಗುವುದಿಲ್ಲ!






ಪದ್ಯಗಳು ಚೆನ್ನಾಗಿವೆ, ಸರ್.
very…very nice..tumbane ista aaytu..
ಕವಿತೆಗಳು ಸರಳ ಸುಂದರವಾಗಿವೆ
Good ones
-Anil
ಬದಲಾವಣೆಗೆ ಕಾಯುತ್ತ – ಪದ್ಯ ಮಾರ್ಮಿಕವಾಗಿದೆ.
ಕೂತಲ್ಲಿಂದ ಕದಲುವುದಿಲ್ಲ
ಬಿಟ್ಟ ಬೇರು ಸಡಿಲಿಸುವುದಿಲ್ಲ
ಕಾಯುವುದನ್ನೇ ಕಸುಬಾಗಿಸಿಉಕೊಂಡವರು
ತಲ್ಲಣಗೊಳ್ಳುತ್ತಾರೆ
ನಿಜ, ಯಾವುದನ್ನಾದರೂ ಸರಿ ಬೇರೆ ಯಾರಾದರು ಮಾಡಲಿ ಬೇಕಾದರೆ ನಾನದರ ಫಲಾನುಭವಿಯಾದೇನು ಮತ್ತು ಹುಳುಕು ಎತ್ತಾಡಿಯೇನು ಅನ್ನುವ ನಮ್ಮ ಮನೋಭಾವಕ್ಕೆ ತಕ್ಕುದಾದ ಸಾಲು.