ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡರಲ್ಲೂ ‘ಅವನ ಸಹಿ’ ಇದೆ..

ರಂಜಾನ್ ಮತ್ತು ಶ್ರಾವಣ

ಮೆಹಬೂಬ್ ಮಠದ

ರಂಜಾನ್ ಮತ್ತು
ಶ್ರಾವಣ
ಭಕ್ತಿಯ ಹೊತ್ತು
ತರುತ್ತವೆ.

‘ಸೆಹರಿ’ ‘ಇಫ್ತಾರ್’ ನ
ಕನ್ನಡಿಯಲ್ಲಿ
ಉಪವಾಸದ
ಬಿಂಬ ಕಾಣುತ್ತದೆ.

ಭಜನೆಯ ಗೀತೆಗಳಿಗೆ
‘ತರಾವಿ’ಯ
ಆತ್ಮ ತಲೆದೂಗುತ್ತದೆ.

‘ಝಕಾತ್’ ನ ಹಣ
‘ಬಾಗಿನ’ ದ ವಸ್ತು
ಬಡವನ ಹೊಟ್ಟೆಗೆ
ಲಾಲಿ ಹಾಡುತ್ತವೆ.

‘ಸುರ್ ಕರ‍್ಮಾ’ ದ ಸಿಹಿ
‘ಗೋಧಿ ಹುಗ್ಗಿ’ ಯ ರುಚಿ
ಎರಡರಲ್ಲೂ
‘ಅವನ ಸಹಿ’ ಇದೆ.

ಚಟಗಳ ಎಸೆದು
ಇಂದ್ರಿಯಗಳ ಕಟ್ಟಿ ಹಾಕಿ
ಆಧ್ಯಾತ್ಮದ ದಾರಿಯಲಿ
ಇಬ್ಬರ ನಡಿಗೆ.

ಗೆಳೆಯರ ಬರುವಿಕೆಗೆ
ಪ್ರತಿ
ಬೀದಿಯೂ
ಶಬರಿಯಾಗುತ್ತದೆ.

ಗುಡಿಯ ಹಸಿರು ಸೀರೆ
ದರ್ಗಾದ ಕೇಸರಿ ಚಾದಾರ
ಸ್ನೇಹದ ಸನ್ನದು
ನವೀಕರಣ ಮಾಡಿಕೊಳ್ಳುತ್ತವೆ.

‍ಲೇಖಕರು avadhi

12 November, 2019

2 Comments

  1. Subhas Motammanavar

    ಸಹಿಷ್ಣುತೆಯ ಸಹಬಾಳ್ವೆ ನಮ್ಮ ಗ್ರಾಮೀಣ ಬದುಕಿನ ಸಹಜ ಅಂಗ ಅದನ್ನು ಸರಳ ಪದಗಳಲ್ಲಿ ಕಟ್ಟಿಕೊಟ್ಟ ಮೆಹಬೂಬ್ ಸರ್ ಗೆ ಧನ್ಯವಾದಗಳು ಅಭಿನಂದನೆಗಳು.

  2. T S SHRAVANA KUMARI

    ಸದಾಶಯದ ಕವಿತೆ. ಚೆನ್ನಾಗಿದೆ. ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading