ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೂಡ ಹಣತೆಯ ನಿಶ್ಯಬ್ದ ಬೆಳಕಲ್ಲಿ..

ಒಂದು ಶಾಲು ಬೇಕಾಗಿದೆ

jayashree deshapande

ಜಯಶ್ರೀ ದೇಶಪಾಂಡೆ 

ಕಲೆಗಳಿಗೆ ಬುದ್ಧಿ ಇಲ್ಲ.
ಯಾವಾಗ ಹೇಗೆ ಕಾಣಿಸಿಕೊಳ್ಳಬೇಕೆಂಬ ತಿಳಿವಳಿಕೆಯಿಲ್ಲ. ತಮಗಿರುವ ಬಣ್ಣ, ಹಳ್ಳತಿಟ್ಟು, ಉದ್ದಗಲ…
ಒಂದೂ ನೋಡಿಕೊಳ್ಳದೆ ತೆರಕೊಂಡುಬಿಡುತ್ತವೆ.

shawlಬಿದ್ದ ಕಲೆಯೋ, ಬೀಳಿಸಿಕೊಂಡದ್ದೋ
ಹೇಳಲಾಗದು. ಒಟ್ಟಾರೆ ಅದು ಕಲೆ …
ಅಂದರೆ ಅಸಹ್ಯ! ಅಂದರೆ ಮುಜುಗುರ, ಅಂದರೆ ನೋವು, ಅಂದರೆ ಮುಚ್ಚಿಡಬೇಕೆಂದು ಭುಗಿಲೇಳುವ
ಅದಮ್ಯ ಬಯಕೆ….

ಸುಟ್ಟ ಕಲೆ, ಪೆಟ್ಟಿನ ಕಲೆ, ಮಾಯುತಿದ್ದ ಗಾಯ ಕೆದಕಿ ಹಿಸಿದ ಕರೀಕಲೆ!
ಅತ್ತತ್ತು ಕೆನ್ನೆಯದ್ದ ಇಳಿದೋಡುವ ನೀರ ಕಲೆ!
ಹೆಜ್ಜೆ ಹೆಜ್ಜೆಗೂ ಹಿಂದೆ ಬಂದು
ಮನಕ್ಕೆ ಬಿದ್ದ ಬರೆಗಳ
ನೆನಪಿಸುವ, ಕಾಣದ ಕಲೆ!

ಎದೆಗೂಡ ಹಣತೆಯ ನಿಶ್ಯಬ್ದ ಬೆಳಕಲ್ಲಿ
ಅಂತರಂಗಕ್ಕಷ್ಟೇ ಕಾಣಿಸಿ
ಮಾತಿಲ್ಲದೆ ಅತ್ತು,  ಪಿಸುಗುಟ್ಟುವ
ಉಸಿರಿನಲ್ಲಿ ತನ್ನ ಗಾಯದ ಕತೆ ಹೇಳುವ ಕಲೆ! ಗಡಿದಾಟಿ ಬೀಸಿದ್ದ
ಶಬ್ದಗಳ ಹೊಡೆತದ ಕಲೆ…
ಅದರೊಳಗೆ ಕಲಸಿ ನನ್ನ ನಿನ್ನಾಳದ
ವಿಷ ತಣಿದು ಅಮೃತವಾಗದೆ
ಉಕ್ಕಿ ಹರಿದ ಕತೆಯ ಕಲೆ….

ಕಲೆಗಳ ನೋಡಿಬಿಡಬಾರದೀ ಲೋಕ.
ನೋಡಿ ಆಡಿಕೊಳ್ಳಲೂ ಬಾರದಷ್ಟೆ…
ನೋಡಿ, ಆಡಿ ಸುಖಿಸುವ ಲೋಕಕ್ಕೆ
ಕಾಣದಂತೆ….
ಮುಚ್ಚಿ, ಹೊಚ್ಚಿ, ಬಚ್ಚಿರಿಸುವ ಕಾಯಕ
ಇಂದು, ಈಗ ಈ ಕ್ಷಣದ ಗರಜು..
ಅದಕ್ಕೇ ನನಗೊಂದು ಶಾಲು ಬೇಕಾಗಿದೆ!

‍ಲೇಖಕರು Admin

31 May, 2016

3 Comments

  1. kusuma patel

    Very Nice. tumbaa ishta aytu.

  2. ಆರತಿ ಘಟಿಕಾರ್

    ಬಹಳ ಸಶಕ್ತ ಕವನ ಹಳೆಯ ನೆನೆಪುಗಳ ಕಲಾಯಿ ಈ ಕಲೆ.!

  3. akshata deshpande

    Bahala channagide kavite jayasjree madam . Manakke bidda baregala nenapisuva kanada kale, ishtavada saalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading