ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎತ್ತ ಸಾಗುತ್ತಿದ್ದೇವೆ?…

ಎಂ ವಿ ಶಶಿಭೂಷಣ ರಾಜು

ಎತ್ತ ಸಾಗುತ್ತಿದ್ದೇವೆ,
ದೇಹ, ಮನಗಳ ಒತ್ತೆಯಿಟ್ಟು
ಸ್ಪಷ್ಟತೆಯಿಲ್ಲದ ಪ್ರಯಾಣ ಗುರಿ ತಲುಪಿಸುವುದೇ?
ದೇಶ ಕಟ್ಟುವುದೇ?

ತಳ್ಳಿ ದೂರ ಸ್ವಲ್ಪ ದಿನ, ಜಾತಿ, ಮತ
ದೇವರನು
ವಾದವೂ ಬೇಡ, ವಿವಾದವೂ ಬೇಡ, ಆರಿಸಿ
ಕಿಡಿಯನು

ಸ್ವರ್ಗಗಳು ಕುಸಿಯುತ್ತಿವೆ, ನರಕಗಳು ನಶಿಸುತ್ತಿವೆ
ಆ-ಲೋಕ ಈ-ಲೋಕಗಳೆಲ್ಲವೂ ಅದೃಶ್ಯವಾಗಿವೆ
ಊರಿ ಭೂಲೋಕದಲಿ ಗಟ್ಟಿ ಹೆಜ್ಜೆಯ
ಆಸರಿಸಿ ಮಾನವ ಭುಜವ
ಆಸರೆಯಾಗುವುದಿಲ್ಲ ಮನುಜಗೆ ಮತ, ಜಾತಿ, ದೇವರುಗಳು
ಸಾಟಿ ಮಾನವನೊಬ್ಬನೇ ಗತಿ

ವಿಜ್ಞಾನದದ್ಭುತ ಕಿರಣಕೆ ತೆರೆದುಕೊಳ್ಳಿ
ಆರ್ಥಿಕದಾತ್ಮನಿರ್ಭರವ ಎರೆದುಕೊಳ್ಳಿ
ಆರೋಗ್ಯದುನ್ನತಿಗೆ ಕರೆದುಕೊಳ್ಳಿ
ಶಿಕ್ಷಣದಸಿಹಿಯ ಅರಿತುಕೊಳ್ಳಿ

ಏರಳೆತ್ತರಕೆ ದೇಶ
ಬೆಳಗಲಿ, ಬೆಳೆಯಲಿ ಅಭಿವೃದ್ಧಿ ಅದ್ಭುತವಾಗಿ
ನಕ್ಕು ನಲಿಯಲಿ ಜಗ ಎಲ್ಲರನೊಳಗೊಂಡು
ಆಗ ನಡೆಯಲಿ ಜಾತ್ರೆ, ಉರಸ್ಸುಗಳು
ಅಲ್ಲಿಯವರೆಗೆ ಇರಲಿ ಜಾತಿ, ಮತ, ದೇವರು
ಮನೆಯಲಿ, ಮನದಲಿ

‍ಲೇಖಕರು Admin

15 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading