ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು..

ಗೋಪಾಲ ವಾಜಪೇಯಿ ಅವರ ಅಕಾಲಿಕ ನಿಧನಕ್ಕೆ
ಗುಲ್ಜಾರರ ಹಾಡಿನ ಕಂಬನಿಯ ಮಳೆ
lakshmikanth-itnal-1ಲಕ್ಷ್ಮೀಕಾಂತ ಇಟ್ನಾಳ
doorsಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ.ಸಿಲುಕಿದೆಯೇನೋ ಉಸಿರು, ತೆರೆದು ನೋಡಿರೊ ಇನ್ನೂ
ತುಟಿವರೆಗೂ ಬಂದ ಮಾತು, ಆಡಲಿ ಇರು ಇನ್ನು
ನೋವಲಿ ನರಳಿದಂತಿದೆ, ನೋಡಿ ಇದೆಯೇ ಜೀವವಿನ್ನೂ.ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು…

ಎಬ್ಬಿಸಿರೊ ಅವನ ತಬ್ಬಿ ಹೇಳೋಣ, ವಿದಾಯವನ್ನು
ಇದೆಂಥ ಬೀಳ್ಕೊಡುವುದು, ಇದೆಂಥ ಪದ್ಧತಿಯ ಮಣ್ಣು
ಎದೆಯ ಪ್ರತಿ ಗಾಯವೂ, ಹಸಿಯಾಗಿವೆ ಇನ್ನೂ.

ಎತ್ತದಿರು ಇನ್ನೂ, ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ.

ಗುಲ್ಜಾರ್ ಹಾಡಿಗಾಗಿ ಕ್ಲಿಕ್ ಮಾಡಿ

‍ಲೇಖಕರು Admin

24 September, 2016

1 Comment

  1. mm shaik

    itnaLaji namaste..kNtumbi bantu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading