ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಋತುಸ್ರಾವ ನಮ್ಮ ಹಕ್ಕು: ಚಡ್ಡಿ ಬಿಚ್ಚಿ ತೋರಿಸಬೇಕಾಗಿಲ್ಲ..

1998 ರಲ್ಲಿ  ಪ್ರತಿಭಾ ನಂದಕುಮಾರ್ ಅವರ “ಕವಡೆಯಾಟ” ಸಂಕಲನದಲ್ಲಿ “ಹೆಣ್ಣು ಮತ್ತು ರಕ್ತ” ಕುರಿತು ಕವಿತೆ ಬರೆದಿದ್ದರು.

ಋತುಸ್ರಾವವನ್ನೇ ಗುರಿಯಾಗಿಸಿಕೊಂಡಿರುವ ಧರ್ಮಾಂಧರ ಕಾಲದಲ್ಲಿ ಈಗ ಮತ್ತೆ ಆ ಕವನವನ್ನು ಪ್ರತಿಭಾ ಮುಂದುವರಿಸಿದ್ದಾರೆ.   

‘ಅವಧಿ’ ಋತುಸ್ರಾವ ಕುರಿತು ಸಂವೇದನಾಶೀಲ ಮನಸ್ಸುಗಳು ಬರೆದಿರುವ ಬರಹಗಳನ್ನು ‘ಋತುಸ್ರಾವ ನಮ್ಮ ಹಕ್ಕು’ ಎನ್ನುವ ಹೆಸರಿನಲ್ಲಿ ಇಂದು ಪ್ರಕಟಿಸುತ್ತಿದೆ. 

ಪ್ರತಿಭಾ ಮೊದಲು ಬರೆದಿದ್ದ ಕವನ ಹಾಗೂ ಈಗ ಬರೆದಿರುವ “ಹೆಣ್ಣು ಮತ್ತು ರಕ್ತ -೨” ಇಲ್ಲಿದೆ-

ಹೆಣ್ಣು ಮತ್ತು ರಕ್ತ 2

ಚಡ್ಡಿ ಬಿಚ್ಚಿ ತೋರಿಸಬೇಕಾಗಿಲ್ಲ
ಸ್ರಾವ ಜನ್ಮಸಿದ್ಧ ಹಕ್ಕು
ಅಡಿಗೆಮನೆ ದೇವರಮನೆಯೊಳ ಹೊರಗೆ
ಹೆಣ್ಣಿನ ಚಲನವಲನ ಸಿಕ್ಕು

ಹೊಸಿಲಿನ ದಾಟು ರೇಖೆಗಳ
ರಾಮ ಲಕ್ಷ್ಮಣರ ನಿಷೇಧಗಳ
ದಂಡಕಾರಣ್ಯದಲ್ಲಿ ದಂಡಪಿಂಡಗಳ
ಗೋಪ್ಯ ಸ್ಫೋಟಿಸುವ ಕರಾಮತ್ತು

ಎಳೆಯ ಬಾಲೆಯರ ಲಂಗೋಟಿಯಲ್ಲಿ
ಭದ್ರ ಅಡಗಿದೆ ಶಾಸ್ತ್ರ ಸಂಹಿತೆಯ ಕೂಪ
ಗರ್ಭ ಗುಡಿಯಲ್ಲಿ ಅತ್ಯಾಚಾರ ನಿರತ ಪೂಜಾರಿ
ಮತ್ತೆ ವೇದಿಕೆಯ ಘೋಷಣೆ ಲೆಕ್ಕ ಇಟ್ಟ ಪಾಪ

ಎಲ್ಲ ತಡೆದುಕೊಳ್ಳಬಹುದು
ಶೋಷಣೆಯ ಮೀ ಟೂ ಗಳ ಸಹಿತ
ಮರೆಯಲಾಗದು ಅಕ್ಕನ ಯೋನಿಯೊಳಗೆ
ಬೆರಳಿಟ್ಟು ಮಾಡಿದ ಪರೀಕ್ಷೆ

ಚಡ್ಡಿ ಬಿಚ್ಚುವ ಹೊಸ ನಿರೀಕ್ಷೆ.

‍ಲೇಖಕರು avadhi

19 February, 2020

1 Comment

  1. T S SHRAVANA KUMARI

    ಮೈಯೆಲ್ಲಾ ಝುಮ್ಮೆನ್ನುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading