ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಋತುಮಾನ ಹೃದ್ಯ ಪ್ರಕೃತಿಯೇ ಪದ್ಯ

ಬಿನ್ನಹವು ಜಗದೊಡೆಯ….

 ಅರ್ಚನಾ ಎಚ್
ಮುಂಗಾರಿನಬ್ಬರಕೆ ಒಳಸುಳಿವ ಅಲೆಗಳು
ದಡವ ತಾಕುವ ಮುನ್ನ ನಿನ್ನೆ ಧ್ಯಾನಿಸುತೆ…
ಕ್ಷಿತಿಗರ್ಭದೊಡಲಲ್ಲಿ ವ್ಯಥೆಪಡುತ ಬೆಂದೆದ್ದ
ಹಾಟಕದ ಅದಿರುಗಳು  ಮತ್ತೆ ಸಿಂಗರಿಸೇ..

ನಭದೊಡಲು ನಗುಮೊಗದಿ
ನಳನಳಿಸಿ ನಗೆಹನಿಸಿ ವರುಣಾನಾಗಮನಕೆ
ಬೆಂದುರಿಗೆ ತಂಪು.. ಹಕ್ಕಿಯಿಂಚರದ ಕಂಪು..!
ಮಳೆಯ ಓತಪ್ರೋತ ನರ್ತನಕೆ
ಮುದುಡಿದ್ದೆಲ್ಲವರಳಿ ನಿಂತು.. ನೆಲಕಚ್ಚಿ ಜಂತು..!


ಮೊಗೆದ ಹನಿಗಳ ಲೆಕ್ಕ ಜಗದಗಲ ಜಲಧಿ
ಇಂದ್ರಛಾಪದೆಳೆಯ ವರ್ಣಮಯ ಪರಿಧಿ..
ಋತುಮಾನ ಹೃದ್ಯ ಪ್ರಕೃತಿಯೇ ಪದ್ಯ
ಗಿರಿಶಿಖರ ಪರ್ವತಗಳಾದಿ ಗದ್ಯ..!!
ಅಧಮ್ಯ ಸೃಷ್ಟಿಯ ಜ್ಞಾನವರಿತವನೇ ವೇದ್ಯ..!

ಕಮಾನು ಕಟ್ಟಿ ಜಮಾನ ಮೆರೆದು
ಹಗೆಯ ಉರಿಬುಗ್ಗೆಯಲಿ ಉಕ್ಕಿಬೆಂದು..!
ಜಗದ ಲಾಸ್ಯದ ಮೇಘ..! ಸಿಡಿಲಿನಬ್ಬರಕೆ
ನಗೆಮೊಗೆದು ಗಹಗಹಿಸಿ ಹಬ್ಬಿ ನಗುತ
ಉರಿಬೆಂದ ತನುಮನವ ತಾಯಂತೆ ತಬ್ಬುತ್ತಾ
ಮದವರಿದ ಮನಗಳನು ಮುದಗೊಳಿಸುತಾ..

ಜಗದ ಸಂಕಟಮುಖಕೆ ಶಾಂತಿ ಮದ್ದನು ಬಳಿದು
ಬಿನ್ನಹವು ಜಗದೊಡೆಯ ನಿತ್ಯ ನಿನ್ನೇ ಧ್ಯಾನಿಸುವೆ..
ಪಿಡುಗಗಳ ಪರಿಹರಿಸಿ ಪೇಯ ಕುಡಿಸಿ
ಮಡಿದ ಮನಗಳಿಗಷ್ಟು ಒಲವ ಸಿಂಪಡಿಸು
ಮುದದಿ ನಲಿವಾತ್ಮಗಳನಷ್ಟೇ ಜಗದಲಿರಿಸು…

‍ಲೇಖಕರು nalike

13 May, 2020

2 Comments

  1. Mahant

    ಭಾಷೆಯ ಬೆರಗು ಸೊಗಸಾಗಿದೆ

  2. Skanda

    Awesome poem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading