–ಡಾ. ಶ್ರೀದೇವಿ ಕರ್ಜಗಿ
ಪಾಠ
ಋತುಗಳ ರಾಜನು ಬಂದನು
ನವ ಸಂತಸ ತಂದನು
ಹಕ್ಕಿಗಳುಲಿದವು ಚಿಲಿ ಪಿಲಿ
ಎಲ್ಲೋ ಚಿಗುರಿದ
ಮಾಮರದ ಎಳರಿನ ಕಂಪಿಗೆ
ಇನ್ನೆಲ್ಲೋ ಕೇಳಿತು ಕುಹೂ ಕುಹೂ
ಸಂಪಿಗೆ ಜಾಜಿ ಮಲ್ಲಿಗೆ
ಕಂಪನು ಬೀರುವ ಹೂಗಳ ಕಂಡು
ಗುಯ್ ಗುಟ್ಟಿವೆ ದುಂಬಿಗಳ ಹಿಂಡು
ಎಲ್ಲೆಲ್ಲೂ ಎಳೆ ಚಿಗುರಿನ ತೊಡುಗೆ
ಭೂ ರಮೆಗೆಲ್ಲ ಹಸಿರಿನ ಉಡುಗೆ
ಧರೆಯಾಗಿದೆ ನೋಡು ದೇವನ ಕೊಡುಗೆ
ಮೂಡಲೇಬೇಕು ಹಳೆ ಬೇರಿಗೆ ಹೊಸ ಚಿಗುರು
ಸವಿಯಲೇ ಬೇಕು ಬೆಲ್ಲದ ಜೊತೆಗೆ
ಬೇವಿನ ಒಗರು
ಜೀವನವಿದು ಹಾವು ಏಣಿಯ ಆಟ
ನಿಲ್ಲದೆ ಏರುತ ಇಳಿಯುತ ಓಡುವ ಓಟ
ಪ್ರಕೃತಿ ಕಲಿಸಿದೆ ಜೀವನ ಪಾಠ






0 Comments