ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…

ಉಮಾ ಮುಕುಂದ್

ಪಾರಿಜಾತ

ಮರೆತರೋ
ಮೆಚ್ಚಿದರೋ
ಮೆಟ್ಟುವರೋ
ಮುಟ್ಟುವರೋ
ಕದ್ದು ಕಿತ್ತೊಯ್ಯುವರೋ
ನೋಡಿ ಮುನ್ನಡೆಯುವರೋ
ಇವರೆಷ್ಟು ಕೊಟ್ಟರು
ಅವರಿಷ್ಟೇ ಕೊಟ್ಟರೇ?
ಬೇಕಿಲ್ಲ ಇದಕೆ ಇದ್ಯಾವುದರ ಗೊಡವೆ
ಇದ್ದಷ್ಟು ದಿನ ಇರಬೇಕು ನೋಡು ಇದರಂತೆ
ನೀಡುವುದಷ್ಟನ್ನೇ ಕಾಯಕವಾಗಿಸಿಕೊಂಡು
ನಿತ್ಯವೂ ನಿಸೂರಾಗಿ ಹೂ ಸುರಿಸುವ
ನಿರ್ಮಲ ಪರಿಮಳದ ಪಾರಿಜಾತದಂತೆ


ನೀನಾಡುತ್ತಿದ್ದ ನುಡಿ ನೆನೆದು
ಮುಗಿಲ ಕಂಬನಿಯಲ್ಲಿ ನೆನೆದ
ಹೂಗಳ ಹೆಕ್ಕಿ ಹಗೂರಕ್ಕೆ
ಮಾಲೆ ಮಾಡಿ ಪೋಣಿಸಿ
ಮುಡಿಸಿ ನಿನ್ನ ಪಟಕ್ಕೆ
ಇಷ್ಟಕ್ಕೆ ಎಷ್ಟು ಹಾರಾಟ ನೋಡು ನಮ್ಮದು
ಎಂದು ನಗುತ್ತಿಲಿರುವ ನಿನ್ನ ಕಣ್ತುಂಬಿಕೊಂಡು,
ಚೆಲ್ಲಾಪಿಲ್ಲಿಯಾದ ನೆನಪ ಚೂರುಗಳ
ಚೆಂದಕೆ ಜೋಡಿಸಿ ಬೆಚ್ಚನೆ ಕೌದಿಯಾಗಿಸಿ
ಹೊದೆಸಿ ಬಿಡುವೆ ಬರಲಿರುವ ಇಳಿಗಾಲಕ್ಕೆ

Photo: Mukunda AN
‌‌ ‌(ಹಿಂದೆಂದೋ ತೆಗೆದ ಪಟ

‍ಲೇಖಕರು Admin

12 September, 2022

1 Comment

  1. ನೂತನ ದೋಶೆಟ್ಟಿ

    ಉಮಾ,
    ಪಾರಿಜಾತವನ್ನು ಆಯ್ದು ಕಟ್ಟುವಂತೆಯೇ ಬದುಕು…
    ಕವಿತೆ, ಚಿತ್ರಕ್ಕೆ ಒಂದು ಫ್ರೇಂ ಹಾಕಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading