ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಪವಾಸ ಮಾಡುತ್ತಾರೆ ಸೋನಮ್

-ನಿರ್ಮಲಾ ಶೆಟ್ಟರ

ಗಜಲ್

ಅನ್ನ ತಿನ್ನುವ ಮನುಷ್ಯರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್
ಮಾನವತೆಯ ಹಾದಿಯ ಪಯಣಿಗರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ಈ ಹೋರಾಟ ಉಪವಾಸ ಸತ್ಯಾಗ್ರಹ ಎಲ್ಲವನ್ನು ಯಾವತ್ತೊ ಮಖೇಡಿಯಾಗಿಸಿದ್ದಾರೆ
ಆತ್ಮಹತ್ಯೆಗೀಡಾದ ಮಕ್ಕಳ ಪಾಲಕರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ನಾಡಿಮಿಡಿತ ಏರುಪೇರಾದ ನಿನ್ನೊಂದಿಗೆ ಪಟ ತೆಗೆದುಕೊಳ್ಳುವ ಜನರಿವರು
ಸಮಸ್ಯೆಯ ಮೂಲ ತಿಳಿದವರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ಅವರು ಪ್ರಾರ್ಥಿಸುತ್ತಾರೆ ಅವರಂತೆ ನೀನು ತಿಂದುಂಡು ಉಸಾಬರಿ ಬಿಡಬೇಕೆಂದು
ಒಂದೊಂದು ಅಗುಳಿನ ಬೆಲೆ ತಿಳಿದವರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ತಿನ್ನುವ ಅನ್ನ ಕುಡಿಯುವ ನೀರು ಕೊನೆಗೆ ತಾಯ್ನೆಲವು ವಿಷವಾಗಿದೆ ಅವರ ಕೈಯಲ್ಲಿ
ಏನು ಇಲ್ಲದೆ ಬದುಕಬಲ್ಲ ನಿನ್ನಂಥವರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ನಿನ್ನಂತೆ ಒಂದಿಷ್ಟು ಜನರಿದ್ದಾರೆ ನಿನ್ನೊಂದಿಗೆ ಪ್ರೀತಿ ಆಯುಧ ಹಿಡಿದು ನಿಂತಿರುವರು
ಷಡ್ಯಂತ್ರದ ಹತಾರುಗಳಿಲ್ಲದವರು ಮಾತ್ರ ಉಪವಾಸ ಮಾಡುತ್ತಾರೆ ಸೋನಮ್

ಅತ್ಯಾಚಾರ ಆತ್ಮಹತ್ಯೆ ಕೊಲೆ ಅಧಿಕಾರ ದಾಹ ಇರುವತನಕ ಉಪವಾಸಗಳಿರುತ್ತವೆ ನಿಶೆ
ಯಾರದೊ ಬೆವರಿಗೆ ರಕ್ತಕೆ ಉಸಿರ ಹಾಸುವವರು ಉಪವಾಸ ಮಾಡುತ್ತಾರೆ ಸೋನಮ್

‍ಲೇಖಕರು Admin

18 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading