ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ ಗಾಂವಕಾರ ಕವಿತೆ – ಈ ಜಗವು ಹೆಣ್ಣಾಗಲಿ…

ಉದಯ ಗಾಂವಕಾರ

ಎಷ್ಟೊಂದು ಮುಖಗಳು
ಎಷ್ಟು ಕಣ್ಣುಗಳು?
ವನಿತಾ, ಗಂಗಾ, ಫಾತಿಮಾ, ಐರಿನ್
ಪಕ್ಕದ ಮನೆಯ ಮೆಹರುನ್ನಿಸಾ

ಮಗನೋ, ತಮ್ಮನೋ
ಗಂಡನೋ ಅಥವಾ
ಮನೆಯನ್ನು ಕಾಯುವ
ಅಣ್ಣನೋ?
ಬೆಳಿಗ್ಗೆ ಹೊರಟವನು
ಸಂಜೆ ಮರಳದಿದ್ದರೆ
ಕಿವಿಯಲ್ಲಿ ಅಂಬುಲೆನ್ಸಿನದೇ ಸದ್ದು.


ಮುಖದ ತುಂಬಾ
ನೋವಿನ ಗೆರೆಗಳು
ಕಣ್ಣಲ್ಲಿ ಹರಳುಗಟ್ಟಿದ ಹನಿಗಳು
ಎಲ್ಲರ ಪ್ರಾರ್ಥನೆಯೊಂದೇ-
ಸ್ಟ್ರೆಚರಿನ ಮೇಲೆ
ಮುಖ ಮುಚ್ಚಿಟ್ಟ ದೇಹ,
ನ್ಯೂಸ್ ಚಾನೆಲ್ಲಿನ
ವಿಡಿಯೋದಲ್ಲಿ ಕಂಡ
ಹೆಪ್ಪುಗಟ್ಟಿದ ರಕ್ತ
ಯಾರದ್ದೂ ಆಗಿರದಿರಲಿ!

ಈ ಜಗವು ಹೆಣ್ಣಾಗಲಿ

‍ಲೇಖಕರು Admin

31 July, 2022

1 Comment

  1. Prathibha Nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading