ಈ ಹೊತ್ತಿಗೆ ಕಾವ್ಯ ಕಮ್ಮಟ…

ಕರ್ನಾಟಕ ಎಜುಕೇಶನ್ ಟ್ರಸ್ಟ್ ವಿಜಯಪುರ ಮತ್ತು ಕಲೇಸಂ ವಿಜಯಪುರ ಶಾಖೆ ಇವರ ಸಹಯೋಗದೊಂದಿಗೆ, ಈ ಹೊತ್ತಿಗೆ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಭಾಗವಾಗಿ ವಿಜಯಪುರದಲ್ಲಿ ಆಯೋಜಿಸುತ್ತಿರುವ ಕಾವ್ಯ ಕಮ್ಮಟವಿದು.

 ಕನ್ನಡ ಸಾಹಿತ್ಯ ಲೋಕದ ಮಹತ್ವದ ವಿಮರ್ಶಕಿಯಾದ ಡಾ. ಎಂ. ಎಸ್ ಆಶಾದೇವಿ ಅವರು ಕಮ್ಮಟದ ನಿರ್ದೇಶಕಿಯಾಗಿರುತ್ತಾರೆ. ಅತ್ಯುತ್ತಮ ಕನ್ನಡ ಕಾವ್ಯ ಪರಂಪರೆ, ಶ್ರೇಷ್ಠ ಕಾವ್ಯದ ವಿವಿಧ ಮಾದರಿಗಳ ಪರಿಚಯ, ಕಾವ್ಯ ಕಟ್ಟುವಿಕೆಯ ತಾಂತ್ರಿಕ ಮತ್ತು ತಾತ್ವಿಕ ವಿವರಗಳು: ಈ ಎಲ್ಲ ವಿವರಗಳನ್ನು ಕುರಿತಂತೆ ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ, ಚಟುವಟಿಕೆಗಳು ನಮ್ಮ ಕಮ್ಮಟದ ಭಾಗವಾಗಿರುತ್ತವೆ.

 ಡಾ. ಎಂ ಎಸ್ ಆಶಾದೇವಿ, ಡಾ. ರಾಜೇಂದ್ರ ಚೆನ್ನಿ, ಡಾ. ಚೆನ್ನಪ್ಪ ಕಟ್ಟಿ, ಡಾ. ವಿನಯ ಒಕ್ಕುಂದ, ಆರಿಫ್ ರಾಜ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಮ್ಮಟವನ್ನು ನಡೆಸಿಕೊಡಲಿದ್ದಾರೆ. 

ಕಮ್ಮಟಕ್ಕೂ ಮುಂಚೆ ಅಭ್ಯರ್ಥಿಗಳು ಓದಿಕೊಂಡು ಬರಬೇಕಾದ ಕೆಲವು ಅತ್ಯುತ್ತಮ ಕಾವ್ಯಗಳ ಭಾಗಗಳನ್ನು (ಸುಮಾರು ೧೦೦ ಪುಟಗಳು) ಅವರಿಗೆ ಕಳುಹಿಸಲಾಗುವುದು.  ಈ ಎರಡು ದಿನಗಳ ಕಾವ್ಯಸಖ್ಯದಲ್ಲಿ ಭಾಗವಹಿಸುವ ಇಚ್ಛೆಯಿದ್ದವರು ಸ್ವ ಪರಿಚಯ, ಸಂಪರ್ಕ ಸಂಖ್ಯೆ ಮತ್ತು ಎರಡು ಕವಿತೆಗಳನ್ನು [email protected] ಈ ಮಿಂಚಂಚೆಗೆ ಕಳುಹಿಸಿಕೊಡಬೇಕು.

ಒಂದಷ್ಟು ಮುಖ್ಯ ವಿವರ: 

೧. ವಸತಿ ಮತ್ತು ಊಟದ ವ್ಯವಸ್ಥೆ ಸೇರಿ ಕಮ್ಮಟದ ಪ್ರವೇಶಾತಿ ಶುಲ್ಕ ೨೦೦೦ ರೂಪಾಯಿ 

೨. ಮೂವತ್ತು ಜನರಿಗೆ ಮಾತ್ರ ಅವಕಾಶ 

೩. ಶಿಬಿರಕ್ಕೆ ಆಯ್ಕೆಯಾದಲ್ಲಿ ನಿಮ್ಮನ್ನು ಸಂಪರ್ಕಿಸಲಾಗುವುದು. 

೪. ಪರಿಚಯ, ವಿಳಾಸ, ಸಂಪರ್ಕ ಸಂಖ್ಯೆ, ಭಾವಚಿತ್ರ ಮತ್ತು ಪದ್ಯಗಳನ್ನು ಕಳುಹಿಸಬೇಕಾದ ಮಿಂಚಂಚೆ: [email protected]

೫. ನಿಮ್ಮ ಅರ್ಜಿ ನಮಗೆ ತಲುಪಲು ಕೊನೆಯ ದಿನಾಂಕ: ೫ ಮೇ ೨೦೨೩.

‍ಲೇಖಕರು avadhi

April 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: