ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ..

ಯೋಗೇಶ್ ಎಚ್ ವಿ 

ಗುಜರಾತಿನಲ್ಲಿ ಮುಸ್ಲಿಮರ ಮಾರಣ ಹೋಮ ನಡೆದಿತ್ತು, ಅದನ್ನು ಪ್ರತಿಭಟಿಸಿ ‘ಅಗ್ನಿ’ ಪತ್ರಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು

ಆಗ ನಾನು ಅಲ್ಲಿಗೆ ಭಾಗವಹಿಸಲು ಹೋಗಿದ್ದೆ . ಅಲ್ಲೇ ನೋಡಿದ್ದು ಈ ರೈತ ಮುಖಂಡರಾದ ಪುಟ್ಟಣ್ಣಯ್ಯ ಅವರನ್ನು .

ಪುಟ್ಟಣ್ಣಯ್ಯನವರು “ನೋಡಿ , ನೀವು ಮಸೀದಿ ಕಟ್ಟಿದ್ರೆ ಮುಸ್ಲಿಂ ಮಾತ್ರ ಅಲ್ಲಿಗೆ ಹೋಗ್ತಾರೆ, ದೇವಸ್ಥಾನ ಕಟ್ಟಿದರೆ ಹಿಂದೂಗಳು ಮಾತ್ರ ಹೋಗ್ತಾರೆ, ಚರ್ಚ್ ಕಟ್ಟಿದರೆ ಕ್ರಿಶ್ಚಿಯನ್ ಮಾತ್ರ ಹೋಗ್ತಾರೆ .. ಬ್ಯಾಡ.. ಅದೇ ನೀವು ಕಕ್ಕಸ್ ಮನೆ ಕಟ್ಟಿ ಈ ಹಿಂದೂ , ಮುಸ್ಲಿಂ , ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ….

ನೋಡ್ರೀ ನಾವು ರೈತಾಪಿ ಜನ ನಾವು ಭೂಮಿ ತಾಯಿ ಮಕ್ಕಳು, ನಮ್ಮ ಧರ್ಮ ಭೂಮಿ, ಈ ತಾಯಿ ಎಲ್ಲರನ್ನೂ ಹೊತ್ತು ಸಾಕ್ತಾಳೆ ..ನಾವು ಸತ್ರೆ ತನ್ನ ಮಡಿಲಲ್ಲೇ ಇಟ್ಕೊತಾಳೆ, ಯಾವತ್ತೂ ನಮ್ಮ ಕೈ ಬಿಡಾಕಿಲ್ಲ..ಎಲ್ಲಾ ಭೂತಾಯಿ ಮಕ್ಕಳಾಗಿ..”

ಕಂಚಿನ ಕಂಠದ ಪುಟ್ಟಣ್ಣಯ್ಯನವರು, ಪರಿಣಾಮಕಾರಿಯಾಗಿ, ಸರಳವಾಗಿ ಮಾತಾಡುತ್ತಿದ್ದ ರೈತ ಮುಖಂಡ ಇನ್ನಿಲ್ಲ ಎನ್ನುವುದು ನಿಜಕ್ಕೂ ದುಃಖಕರ ವಿಷಯ

‍ಲೇಖಕರು avadhi

21 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading