ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ದಾರಿಗಳ ಮೇಲೇಕೆ ಕೆಂಪು ಹೆಜ್ಜೆಗಳು?

ರಸ್ತೆಗೆಂಪು

 ಡಿ. ಎಮ್. ನದಾಫ್

ನನ್ನ ಕಣ್ಣುಗಳಿಗೇನಾಗಿದೆ?
ಈ ವಿಶಾಲ ರಸ್ತೆಗಳೇಕೆ ಕೆಂಪಾಗಿ ಕಾಣಿಸುತ್ತಿವೆ!
ವರ್ಷವಾಗಿಲ್ಲವಿದಕೆ ಡಾಂಬರು ಬಳಿದು
ಅದೋ ಆ ರಸ್ತೆಗೆ…
ತಿಂಗಳಾಗಿಲ್ಲವದಕೆ ಸಿಮೆಂಟು ಸುರಿದು
ಮತ್ತೇಕೆ ಇದು ಡಾಂಬರಿ‌ನಂತೆ ಕಪ್ಪಾಗಿಲ್ಲ?
ಮತ್ತೇಕೆ ಅದು ಕಾಂಕ್ರೀಟಿನ ಬಣ್ಣದಂತಿಲ್ಲ?

ಅಕ್ಕ-ಪಕ್ಕದವರ ಕೇಳಿದೆ
“ರಸ್ತೆಯೇಕೆ ಕೆಂಪಾಗಿದೆ?”
ಪಕ್ಕನೆ ನಕ್ಕು ಹೇಳಿದರು
“ರಸ್ತೆಗಲ್ಲ ನಿನ್ನ ಕಣ್ಣುಗಳಿಗೇನಾಗಿದೆ ನೋಡಿಕೋ….”


ಇಲ್ಲ! ನನ್ನ ಕಣ್ಣುಗಳು ಸರಿಯಾಗಿಯೇ ಇವೆ
ವೈದ್ಯರೇ ಹೇಳಿದ್ದಾರೆ
“ಬಣ್ಣಗುರುಡಿಲ್ಲ”ವೆಂದು
ಈ ದಾರಿಗಳ ಮೇಲೇಕೆ ಕೆಂಪು ಹೆಜ್ಜೆಗಳು?
ಹೆಜ್ಜೆ-ಹೆಜ್ಜೆಯ ನಡುವೇಕೆ ರಕ್ತದ ಹನಿಗಳು?
ಪ್ರತಿ ಹೆಜ್ಜೆಯೂ ವಿವಿಧ ಆಕಾರ ಗಾತ್ರದವುಗಳು
ಇದೋ ಈ ಮಗುವಿನ ಪುಟ್ಟ ಹೆಜ್ಜೆ ಸ್ಪಷ್ಟ ಮೂಡಿದೆ.

ನನ್ನ ಕಣ್ಣುಗಳ ನಾನೇ ನಂಬದಾದೆ
ಮನೆಗೆ ಬಂದು ಹೊದ್ದು ಮಲಗಿದೆ
ಕಣ್ಮುಚ್ಚಿದರೆ ಮತ್ತೆ ಅದೇ ಕೆಂಪು ರಸ್ತೆ!
ನಡೆದೇ ನಡೆಯುತ್ತಿದ್ದಾರೆ ಬರಿಗಾಲಲ್ಲಿ ನನ್ನ  ಜನ
ನಗರಗಳಿಂದ ಮರಳಿ ಮಣ್ಣಿನೆಡೆಗೆ ಅವರ   ಪಯಣ!
ರಸ್ತೆ ತುಂಬ ನನ್ನವರ ಕೆಂಪು ರಕ್ತ ಕಲೆಯ ಹೆಜ್ಜೆ
ನೆನಪಿಸಿದವು ಇತಿಹಾಸದ ಯುದ್ಧ;
ಮಾಂಸ- ಮಜ್ಜೆ.

‍ಲೇಖಕರು nalike

9 June, 2020

1 Comment

  1. ashfaq peerzade

    ಹೃದಯ ತಟ್ಟುವ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading