
ಚೈತ್ರಿಕಾ ಶ್ರೀಧರ್ ಹೆಗಡೆ
ಜೀವವಿಲ್ಲದ ಈ ಗುಮ್ಮನಗುಸಕ
ಸಂಜೆಯಲಿ,
ಅವನು ಬಂದರೆ…,
ಸಂಜೆ ಸೊರಗದೇ ಹಾಗೇ
ಇದ್ದುಬಿಡುತ್ತದೆಯೇ?
ಅಥವಾ ಕಳೆದ ಇಂಥ ಎಷ್ಟೋ
ಹೊತ್ತುಗಳು ಇಡಿ ಇಡೀ
ದಕ್ಕಿಬಿಡುತ್ತವೆಯೇ?
ನನಗೆ ಹೀಗೇ,
ಏನೇನೋ ಕೆಲಸ ಮಾಡುತ್ತಲೇ
ತಣ್ಣಗೆ ಪ್ರಶ್ನೆ ಕೇಳುವ ಚಟ..
ನೋಡಿ,
ಅಂಗಳದಲ್ಲಿ ಹೂಗಿಡಗಳು
ಒಣಗುತ್ತಿದ್ದರೂ,
ಒಳಗೆ ಪಟ್ಟಗೆ ಕುಳಿತು
ಕಾಗದ ಕತ್ತರಿಸುತ್ತಾ
ಕೊಲಾಜು ಮಾಡುವ ಚಟ….
ಹೋಗಲಿ, ಇದೊಂದು
ಪ್ರಶ್ನೆಗೆ ಉತ್ತರ ಹೇಳಿಬಿಡಿ…
ಚೂರು ದುಬಾರಿಯೆನಿಸಿದರೂ
ಕೊಂಡುಕೊಳ್ಳುವ ಬಣ್ಣದ
ಡಬ್ಬಗಳಲ್ಲಿ ಹಚ್ಚಿಕೊಳ್ಳುವ,
ಮೆತ್ತಿಕೊಳ್ಳುವ ಎಷ್ಟೆಲ್ಲ
ನಮೂನಿ ಬಣ್ಣಗಳು…
ಅದರಲ್ಲಿ ಈ ತುಟಿಗೆ ಅಂಟಿಸಿಕೊಳ್ಳುವ
ನಗು ಎಲ್ಲಿರುತ್ತದೆ ಗೊತ್ತೆ?
ಗೊತ್ತಿದ್ದರೆ,
ಯರಾದರೂ ಚೂರು
ಸೂಗುಟ್ಟಿ ಹೋಗಿ…..
ಬೇಕಾಗಿದ್ದು ಬರೀ
ನನಗಷ್ಟೇ ಅಲ್ಲ,
ಜೀವವಿಲ್ಲದ ಸಂಜೆಗಳಿಗೆ,
ಕೊಲಾಜುಗಳಿಗೆ, ಇನ್ನೂ ಏನೇನಕ್ಕೋ..





ಚೆನ್ನಾಗಿದೆ..
ಕವಿತೆ ಚೆನ್ನಾಗಿದೆ. ಮನಸ್ಸಿನಾಳದಲ್ಲೇ ಆ ನಗುವಿದೆ ಎಂಬ ಗುಮಾನಿ
very beautiful poem. keep it up.
ಹೊರಗೆಲ್ಲೂ ಹುಡುಕದೇ,,,,,,, ತನ್ನೊಳಗೇ ಹುಡುಕಬೇಕೇನೋ,,,,,