ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಜಗತ್ತು ನಡೆಯುತ್ತಿರುವುದು ಭಯದಿಂದ

 ಸುಹಾನ್ ಶೇಕ್ 
ಪ್ರೀತಿಗೆ ಮೋಸದ ಭಯ
ಮನೆಯವ್ರ ನಿರ್ಧಾರದ ಭಯ
ನಾಲ್ಕು ಮನೆ ಮನದ ನುಡಿಯ ಭಯ
ಒಂದಾಗದೇ ಸಾಯುವ ಭಯ
ಬೆಂಕಿಗೆ ನೀರಿನ ರಭಸ ಸ್ಪರ್ಶಿಸುವ ಭಯ
ಬೆಳಕಿಗೆ ಕತ್ತಲು ತರುವ ಮೌನದ ಭಯ
ಕತ್ತಲಿಗೆ ಬೆಳಕಿನ ಕಿರಣಗಳು ತರುವ ಶಾಖದ ಭಯ

ಸಮುದ್ರದ ಒಡಲಿಗೆ ತ್ಯಾಜ್ಯಗಳ ಭಯ
ಕಡಲಿಗೆ ಒಡಲು ಸೀಳಿ ಮರಳು ತೆಗೆಯುವ
ದುಷ್ಟರ ದೃಷ್ಟಿ ತಾಗುವ ನೋವಿನ ಭಯ
ರಸ್ತೆಗೆ ಎದೆ ಮೇಲೆ ಹಾದು ಹೋಗುವ
ವಾಹನದ ಭಾರವನ್ನು ಸಹಿಸಿ ಕೂರುವ ಭಯ
ಗಡಿಯಾರದ ಮುಳ್ಳಿಗೆ ಶೆಲ್ಲು ನಿಲ್ಲುವ ಭಯ

ಕ್ಷೌರಿಕನಿಗೆ ಕತ್ತರಿ ತಾಗಿಸದೆ ಕೈಯನ್ನು
ನಿಯಂತ್ರಿಸಿ ಕಾಯಕ ಮಾಡುವ ಸವಾಲಿನ ಭಯ
ಸಕ್ಕರೆಗೆ ಅತಿಯಾದ ನೀರು ಬೆರೆಸಿ‌ ರುಚಿ
ಕಳೆದುಕೊಳ್ಳುವ ಭಯ
ಕಿಟಕಿ ಬಾಗಿಲಿನ ಹೊರ‌ ಮೈಗೆ ರಾತ್ರಿ
ತಂಗಾಳಿಯನ್ನು ಅನುಭವಿಸುವ ಏಕಾಂತದ ಭಯ
ಫ್ಯಾನು, ಎಸಿ, ಟಿವಿ, ಫ್ರಿಡ್ಜ್ ಗಳಿಗೆ ಕರೆಂಟ್ ಹೋಗಿ
ಉಸಿರುಗಟ್ಟಿ ಕಾಯುವ ಭಯ
ಸೂರ್ಯನಿಗೆ ಪ್ರತಿಸ್ಪರ್ಧಿ ಚಂದಿರನ ಭಯ
ಚಂದಿರನಿಗೆ ಹಗಲು ದೂಡುವ ದೊಡ್ಡ ‌ಭಯ
ನಕ್ಷತ್ರಗಳಿಗೆ ರಾತ್ರಿ ತನ್ನ ಅಸ್ತಿತ್ವ ಉಳಿಸುವ ಭಯ
ಬಡವನಿಗೆ ಹಸಿವಿನ ಭಯ
ಉಳ್ಳವವನಿಗೆ ಕಳೆದುಕೊಳ್ಳುವ ಭಯ
ಕಿರಿಯರಿಗೆ ಬೀಳುವ ಭಯ
ಹಿರಿಯರಿಗೆ ಪಾಪದ ಭಯ
ನಾವಿಕನಿಗೆ ದಾರಿಯ ಭಯ
ನಾಯಕನಿಗೆ ಸೋಲಿನ ಭಯ
ಸೈನಿಕನಿಗೆ ಶರಣಾಗತಿಯ ಭಯ
ಈ ಜಗತ್ತು ನಡೆಯುತ್ತಿರುವುದು ಭಯದಿಂದ

‍ಲೇಖಕರು nalike

29 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading