ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗವಳು ಹಾಡುತ್ತಿದ್ದಾಳೆ….

ಚೈತ್ರಾ ಶಿವಯೋಗಿಮಠ

ಉಸಿರುಗಟ್ಟಿ ಸಾಯುತ್ತಿದ್ದವಳು
ಈಗ ಹಾಡುತ್ತಿದ್ದಾಳೆ!
ಒಂದೇ ಸಮನೆ ಕೆಲಸ ಮಾಡುತ್ತಿದ್ದವಳು
ಈಗ ನಲಿಯುತ್ತಿದ್ದಾಳೆ

ಸದಾ ಅವಳ ಮೇಲೆ ಪ್ರಹಾರಗಳೇ
ಎಲ್ಲವನ್ನೂ ದೋಚುತ್ತಿದ್ದರು
ದಿನದ ಎಲ್ಲ ಪ್ರಹರಗಳಲೂ
ಅವಳನ್ನ ಬಲಾತ್ಕರಿಸುತ್ತಿದ್ದರು

ಅವಳ ಮೈಕೈ ಗುದ್ದಿ, ಆಳವಾಗಿ ತೋಡಿ
ಎಲ್ಲವನ್ನೂ ಹೀರುತ್ತಿದ್ದರು
ಅವಳ ಚೆಲುವನ್ನೆಲ್ಲಾ ಕಡಿದು, ಮತ್ಯಾರಿಗೂ
ಅವಳು ದಕ್ಕದಂತೆ ಮಾಡಿದ್ದರು!

ಎಲ್ಲದಕು ಒಂದು ಮಿತಿಯಿದೆ.
ಅವಳ ತಾಳ್ಮೆಗೂ!
ಒಮ್ಮೆಯಾದರೂ ಅಲ್ಪವಿರಾಮ
ಹಾಕಲೆ ಬೇಕು ಪರಿಚ್ಛೇದದಲಿ!

ನೊಂದು ಬೆಂದು ಸಿಡಿದೆದ್ದಿದಾಳೆ,
ತನಗಾಗಿ ತನ್ನ ಇತರ ಮಕ್ಕಳಿಗಾಗಿ
ಅವಳಿಗೀಗ ನಿಜ ಚೈತ್ರ, ವಸಂತ
ತನಗಾಗಿ ಹಾಡುತ್ತಿದ್ದಾಳೆ ನಿರುಮ್ಮಳವಾಗಿ

ಎಲ್ಲರೂ, ಎಲ್ಲವೂ ಮೂಲೆಗಂಪು
ಯಾವುದಕ್ಕೂ ಅರ್ಥವಿಲ್ಲ
ಅವಳ ಕುಹೂ ಒಂದೆ!
ಒಡಲೀಗ ತಣ್ಣಗಾಗಿದೆ

‍ಲೇಖಕರು avadhi

4 April, 2020

5 Comments

  1. Nagraj Harapanahalli.karwar

    ಧ್ಚನಿಪೂರ್ಣ ಕವಿತೆ

  2. ಚೈತ್ರಾ ಶಿವಯೋಗಿಮಠ

    ಧನ್ಯವಾದಗಳು ಸರ್

  3. Pushpanjali S

    ಬಹಳ ಚನ್ನಾಗಿದೆ

  4. ಚೈತ್ರಾ ಶಿವಯೋಗಿಮಠ

    ಧನ್ಯವಾದಗಳು ಮೇಡಂ

  5. Padmasri

    Super dear

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading