ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವಳು ಬದುಕುತ್ತಿರುವುದು ಅವನ ಬದುಕು..

ವಿನಿ ನಾಯಕ್ 

ಅವನಿಗೆನಿಸುತ್ತದೆ;
ನಾನಿವಳಿಗೆ ಹತ್ತು ನೆಕ್ಲೇಸು
ನೂರಿನ್ನೂರು ರೇಷ್ಮೆ ಸೀರೆ
ಹೆಸರಲ್ಲೊಂದು ಸೈಟು
ಎಲ್ಲ ಕೊಡಿಸಿದ್ದೇನೆ.
ರಾಣಿಯಂತ ಬದುಕು
she1ಕೊಟ್ಟರೂ ಅದರ
ಅರಿವಿಲ್ಲ ಇವಳಿಗೆ.

ಚಿಕ್ಕ ಚಿಕ್ಕ
ವಿಷಯಕ್ಕೆಲ್ಲ
ಜಗಳ,
ಕೇಳಿದ್ದೇ ಪ್ರಶ್ನೆ
ಕೇಳಿ ಕೇಳಿ
ನೆಮ್ಮದಿ ಕೆಡಿಸುತ್ತಾಳೆ.
ಸಮಯಕ್ಕೆ ಸರಿಯಾಗಿ
ಮನೆಗೆ ಬರುವದಿಲ್ಲವೆಂದು
ಸಿಡುಕುತ್ತಾಳೆ.

ಎಲ್ಲ ಕೊಡಿಸಿದ್ದೇನೆಲ್ಲ
ಇನ್ನೇನು ಬೇಕಿವಳಿಗೆ!

ಇವಳೆಂದುಕೊಳ್ಳುತ್ತಾಳೆ;
ಕಣ್ಣಲ್ಲಿ ಕಣ್ಣಿಟ್ಟು
ನೋಡುವುದೇ ಇಲ್ಲ ಅವನು
ಏನು ಉಟ್ಟರೂ, ತೊಟ್ಟರೂ
ಪರಿವಿಯೆ ಇಲ್ಲ ಅವನಿಗೆ
ಅವನಿಷ್ಟದ ಅಡಿಗೆ ಮಾಡಿ
ಆಫೀಸಿಗೆ ಕಳಿಸಿ
‘ಊಟವಾಯಿತಾ’
ಎಂದು ವಿಚಾರಿಸಿದರೆ
ರೌದ್ರಾವತಾರ ತಾಳುತ್ತಾನೆ.
ಬೇಗ ಮನೆಗೆ ಬಂದ ದಿನ
ರಾತ್ರಿ ಮಂಚದಲ್ಲಿ
ಕೆಲಸ ಮುಗಿಸಿ
ತಿರುಗಿ ಮಲಗಿಬಿಡುತ್ತಾನೆ.
ಮಾತಿಲ್ಲ ಕಥೆಯಿಲ್ಲ

ಅವನಿಗೆ
ಅರ್ಥವಾಗುವುದೇ
ಇಲ್ಲ .
ಇವಳು ಕೆಲಸ ಬಿಟ್ಟು
ಮಕ್ಕಳು,
ಅವನ ಅಪ್ಪ ಅಮ್ಮನನ್ನು
ನೋಡಿಕೊಳ್ಳುತ್ತಿದ್ದಾಳೆ
ದಿನವಿಡೀ ಎಲ್ಲರ
ಬೇಕುಬೇಡಗಳಿಗೆ ಸ್ಪಂದಿಸುತ್ತಾಳೆ.
ಕನಸುಗಳನ್ನೆಲ್ಲ ಹೂತಿಟ್ಟುಕೊಂಡ
ಇವಳು ಬದುಕುತ್ತಿರುವುದು
ಅವನ ಬದುಕು.

ಇವ್ಯಾವುದೂ ಇವಳನ್ನು
ಕಾಡುವುದಿಲ್ಲ.

ಇವಳಿಗೆ ಬೇಕಿರುವುದು
ಅವನ ಪುಟ್ಟ ಮೆಚ್ಚುಗೆಯ
ಮಾತು, ಮೆಚ್ಚುಗೆಯ ನೋಟವಷ್ಟೇ.
ಒಂದು ಬೊಗಸೆ ಪ್ರೀತಿಗಾಗಿ
ಹಪಹಪಿಸುತ್ತಾಳೆ.
ಅವನಿಗೆ
ಅರ್ಥವಾಗುವುದೇ
ಇಲ್ಲ….

‍ಲೇಖಕರು Admin

8 August, 2016

7 Comments

  1. Renuka ramananda

    ನಿಜದ ಕವಿತೆ

    • Viny.nayak

      Thank you ☺

  2. Shama, Nandibetta

    ವಿನಿ, ಅಬ್ಬಾ, ಎಂಥ ಸಾಲುಗಳು. Hats offf to you. ಎಲ್ಲರೆದೆಯ ಅವಳಲ್ಲೂ ಇರುವುದು ಇಷ್ಟೇ, ಇಷ್ಟು ಮಾತ್ರ !!!

    • Viny.nayak

      Thank you so much shama ☺

  3. Anonymous

    wow, very nice

  4. Sangeeta Kalmane

    ವಾಸ್ತವದ ಕಥೆ ಕವನದಲ್ಲಿ ಚೆನ್ನಾಗಿ ಮೂಡಿಸಿದ್ದೀರಾ. ಸೂಪರ್.

  5. Anonymous

    Nijada avala kathe helidiri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading