ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವನೆಂಬ ಮಳೆಯೂ, ಅವಳೆಂಬ ಇಳೆಯೂ..

ಶೋಭಾ ದಿನೇಶ್


ತಣಿಯುತ್ತಿರುವ ಹಗಲನ್ನು ಹುದುಗಿಸಿಕೊಳ್ಳುತ್ತಿರುವ ಹೊತ್ತು
ಉತ್ತರದ ಅವನೂ ದಕ್ಷಿಣದ ಇವಳೂ ಹೀಗೆ ಒಬ್ಬರಿಗೊಬ್ಬರು
ಹೆಸರಿಲ್ಲದ ಊರಿನಲ್ಲಿ ಅಚಾನಕ್ಕಾಗಿ ದಿನವಿಡಿ
ಒಬ್ಬರಿಗೊಬ್ಬರು ದಕ್ಕುವುದೆಂದರೆ, ಒಂದ್ನಮೂನೆ ಸೋಜಿಗ

ಇದೊಂಥರ ಅಜೀಬಿನ ಕಥೆ
ಪ್ರೀತಿಗೆ ವಿಶೇಷ ಲಗತ್ತು ನೀಡದ, ಮುಲಾಜಿಗೆ ಸಿಕ್ಕಿಕೊಳ್ಳದ ಅವರಿಬ್ಬರೂ
ಎಲ್ಲವನ್ನೂ ಎಲ್ಲರನ್ನೂ ತೊರೆಯುವ ಧಾವಂತದಲ್ಲಿದ್ದವರು
ಹೀಗೆ ಒಂದೇ ನಿರುಕಿಗೆ ಪ್ರೀತಿಗೆ ಬಿದ್ದರೆಂದರೆ ಅಜೀಬೆ ಸರಿ

ನಸುಕಿನ ಶಪಥ ಸಂಜೆಯ ಸೆರಗಿನಲ್ಲಿ ಜಾರಿದಂತೆ
ಯಾವುದೋ ಕಾಣದ ಕೈ ಪ್ರೀತಿಯನ್ನು ಟಿಪ್ಪಣಿಸಿದ ಹಾಗೆ
ಜಡಿಮಳೆಯಲೊಂದು ಒಲವಿನ ಆತ್ಮ ಸಾಕ್ಷಾತ್ಕಾರ ಅವರಿಬ್ಬರಲ್ಲಿ
ಊರಾಚೆಯ ಮೌನದಂತೆ, ಮೈದುಂಬಿಕೊಂಡ ಪ್ರೇಮ

ಸಶಬ್ದವಾಗಿ ಅವರಿಬ್ಬರ ಎದೆ ಢವಿಸುತ್ತಿದೆ
ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ

‍ಲೇಖಕರು Avadhi

25 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading