ತ್ರಿವೇಣಿ ಶ್ರೀನಿವಾಸರಾವ್ ಅವರ ಬ್ಲಾಗ್ ‘ತುಳಸೀವನ‘ದಲ್ಲಿ ಸುತ್ತಾಡುತ್ತಿದ್ದಾಗ ಈ ಕವಿತೆ, ಈ ಹಾಡು ಕಣ್ಣಿಗೆ ಬಿತ್ತು.
ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಕವಿತೆ ಯಾಕೋ ತಟ್ಟನೆ ಹಿಡಿದು ನಿಲ್ಲಿಸಿತು. ಅದರೊಂದಿಗೆ ಹಾಡೂ ಇದೆ. ಪಲ್ಲವಿ ಅರುಣ್ ಹಾಡಿದ್ದಾರೆ. ಕೇಳಿ

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…
ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ?
–
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?
–
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ?
–
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?





ಧನ್ಯವಾದಗಳು ಹಾಡನ್ನು ಪರಿಚಯಿಸಿದ್ದಕ್ಕಾಗಿ.
ಈಚೆಗೆ ಈ ಹಾಡು ಮನಸ್ಸಿನಲ್ಲಿ ತುಂಬಾ ಸರ್ತಿ ಬಂದು ಹೋಗ್ತಿತ್ತು…. ಪಠ್ಯ ಕೊಟ್ಟು ಉಪಕರಿಸಿದ್ರಿ….