ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲೊಂದು ಕವಿತೆ, ಅಲ್ಲೊಂದು ಹಾಡು

ತ್ರಿವೇಣಿ ಶ್ರೀನಿವಾಸರಾವ್ ಅವರ ಬ್ಲಾಗ್ ‘ತುಳಸೀವನ‘ದಲ್ಲಿ ಸುತ್ತಾಡುತ್ತಿದ್ದಾಗ ಈ ಕವಿತೆ, ಈ ಹಾಡು ಕಣ್ಣಿಗೆ ಬಿತ್ತು.

ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಕವಿತೆ ಯಾಕೋ ತಟ್ಟನೆ ಹಿಡಿದು ನಿಲ್ಲಿಸಿತು. ಅದರೊಂದಿಗೆ ಹಾಡೂ ಇದೆ. ಪಲ್ಲವಿ ಅರುಣ್ ಹಾಡಿದ್ದಾರೆ. ಕೇಳಿ

91-7

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ

ಅರಿತೆವೇನು ನಾವು ನಮ್ಮ ಅಂತರಾಳವ?

–

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ

ನೀರಿನಾಳ ತಿಳಿಯಿತೇನು ಹಾಯಿದೋಣಿಗೆ?

–

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ

ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ?

–

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ

ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?

‍ಲೇಖಕರು avadhi

4 August, 2009

2 Comments

  1. ಸಂದೀಪ್ ಕಾಮತ್

    ಧನ್ಯವಾದಗಳು ಹಾಡನ್ನು ಪರಿಚಯಿಸಿದ್ದಕ್ಕಾಗಿ.

  2. Rohit Ramachandraiah

    ಈಚೆಗೆ ಈ ಹಾಡು ಮನಸ್ಸಿನಲ್ಲಿ ತುಂಬಾ ಸರ್ತಿ ಬಂದು ಹೋಗ್ತಿತ್ತು…. ಪಠ್ಯ ಕೊಟ್ಟು ಉಪಕರಿಸಿದ್ರಿ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading