ಇಲ್ಲಿದೆ ದಾನಮ್ಮಳ ಬಗೆಗಿನ ‘ಸಮಾಚಾರ’ EXCLUSIVE ವರದಿ

‘ಸಮಾಚಾರ’ ತಂಡಕ್ಕೆ ಚುಕ್ಕಾಣಿ ಹಿಡಿದಿರುವ ಪ್ರಶಾಂತ್ ಹುಲ್ಕೋಡ್

ಹಾಗೂ ತಂಡಕ್ಕೆ ಅಭಿನಂದನೆ ಹೇಳುತ್ತಾ- 

ಇದು ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಅಪ್ರಾಪ್ತೆಯೊಬ್ಬಳ ಚಾರಿತ್ರ್ಯ ವಧೆಗೆ ಮುಂದಾದ ಗಂಭೀರ ಪ್ರಕರಣ.

ಕಳೆದ ವರ್ಷದ ಕೊನೆಯ ತಿಂಗಳಲ್ಲಿ ವಿಜಯಪುರದ ಬಾಲಕಿ ದಾನಮ್ಮ ಅತ್ಯಾಚಾರ ಪ್ರಕರಣ ಭಾರಿ ಸದ್ದು ಮಾಡಿತ್ತು. ಶಾಲೆ ಕಲಿಯುತ್ತಿದ್ದ, ದಲಿತ ಸಮುದಾಯದ ದಾನಮ್ಮ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದ ಸುದ್ದಿ ಅದು. ದೆಹಲಿಯ ‘ನಿರ್ಭಯಾ ಪ್ರಕರಣ’ವನ್ನು ನೆನಪು ಮಾಡಿಕೊಟ್ಟ ಮಾಧ್ಯಮಗಳು, ದಾನಮ್ಮ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಉತ್ತರ ಕರ್ನಾಟಲದ ಅಥಣಿ, ಕಲಬುರ್ಗಿ, ಜೀವರ್ಗಿ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಪ್ರತಿಭಟನೆ, ಬಂದ್, ಚಲೋಗಳು ನಡೆದಿದ್ದವು. ಪ್ರಕರಣದ ತೀವ್ರತೆ ಹೆಚ್ಚುತ್ತಿದ್ದಂತೆ ರಾಜ್ಯ ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು. ಒಟ್ಟು ಆರು ಜನ ಆರೋಪಿಗಳ ಬಂಧನವಾಗಿತ್ತು.

ಇದಿಷ್ಟು ದಾನಮ್ಮ ಅತ್ಯಾಚಾರ ಪ್ರಕರಣದಲ್ಲಿ ತೆರೆಯ ಮುಂದೆ ನಡೆದ ಘಟನಾವಳಿಗಳು. ಆದರೆ, ದಾನಮ್ಮ ಅತ್ಯಾಚಾರಕ್ಕೆ ಈಡಾಗಿ, ಸಾವನ್ನಪ್ಪಿದ್ದು ಡಿ. 21. ಅದಾದ ಕೆಲವೇ ಗಂಟೆಗಳಲ್ಲಿ ವಿಜಯಪುರ ಪೊಲೀಸ್‌ ಇಲಾಖೆ ಬಾಲಕಿ ದಾನಮ್ಮಳ ಚಾರಿತ್ರ್ಯ ವಧೆ ಆರಂಭಿಸಿತ್ತು. ಈ ಕುರಿತು ‘ಸಮಾಚಾರ’ಕ್ಕೆ ಲಭ್ಯವಾಗಿರುವ ದೂರವಾಣಿ ಸಂಭಾಷಣೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, “ದಾನಮ್ಮ ಸಾವನ್ನಪ್ಪುವ ಮುನ್ನವೇ ಗರ್ಭಪಾತಕ್ಕೆ ಒಳಗಾಗಿದ್ದವು. ಆಕೆಗೆ ಅನೇಕ ಹುಡುಗರ ಜತೆ ಸಂಬಂಧ ಇತ್ತು. ಅಂದೂ ಕೂಡ ಆಕೆ ಸ್ನೇಹಿತನೊಬ್ಬನ ಜತೆ ಲೈಂಗಿಕ ಸಂಪರ್ಕ ಪಡೆದಿದ್ದಳು. ಅದಾದ ಮೇಲೆ, ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದಳು. ದಾನಮ್ಮ ಜತೆ ಇದ್ದ ಇನ್ನೊಬ್ಬ ಶಾಲಾ ಬಾಲಕಿಯ ನಡತೆ ಕೂಡ ಸರಿ ಇರಲಿಲ್ಲ,” ಎಂದು ಮಾಧ್ಯಮಗಳಿಗೆ ‘ಆಫ್‌ ದಿ ರೆಕಾರ್ಡ್‌’ ಹೆಸರಿನಲ್ಲಿ ತೇಲಿಬಟ್ಟ ಮಾತುಗಳನ್ನು ಅದು ಒಳಗೊಂಡಿದೆ. ಒಟ್ಟೂ 15.52 ನಿಮಿಷಗಳ ಸಂಭಾಷಣೆ ಇದಾಗಿದ್ದು, ಪೊಲೀಸ್‌ ಅಧಿಕಾರಿ ಅತ್ಯಾಚಾರ ಮತ್ತು ಸಾವಿಗೀಡಾದ ಬಾಲಕಿಯ ಬಗ್ಗೆ ಆಡಿರುವ ಮಾತುಗಳು ಸಾರ್ವಜನಿಕವಾಗಿ ಕೇಳಲು ಸಾಧ್ಯವಾಗದಷ್ಟು ಅಶ್ಲೀಲತೆಯಿಂದ ಕೂಡಿದೆ.

‘ಸಮಾಚಾರ’ದ ವರದಿ ಹಾಗೂ ಆಡಿಯೋ ಕೇಳಲು

ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

January 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: