ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೆಂದೂ ಬಚ್ಚಿಡುವ ಗೋಜಿಗೆ ಹೋಗಲಾರೆ..

ಮಡಿಸಿಟ್ಟ ಬೆಳಕಿಂದ

ಬಿದಲೋಟಿ ರಂಗನಾಥ್


ಮಡಿಸಿಟ್ಟ ಬೆಳಕನು ಬಿಡಿಸುವ ಹೊತ್ತಿಗೆ
ಜರುಗಿದ್ದು ಕೊಲೆ ಸುಲಿಗೆ ಅತ್ಯಾಚಾರ ಎಷ್ಟೊಂದು
ರಕ್ತ ಚೆಲ್ಲಿತ್ತು,
ತೊಟ್ಟ ಅರಿವೆಗಳು ಹರಿದಿದ್ದವು
ಬಳೆ ಚೂರುಗಳು ನೆಣ ಮುರಿದುಕೊಂಡು ಉರುಳಿದ್ದವು
ಆಯಾತನ ಖಾಲಿಯಾಗಿತ್ತು.
 
ತೊನೆತ ಪ್ರೇಮ ಕಾಟಿಗೆ ಬಳಿದುಕೊಂಡು
ಅಗೈರ ಗುರುತು ಹೆಜ್ಜೆ ಊರಿತ್ತು
ಅಪಚಯದ ಮಾತುಗಳು ಬಿದ್ದಿದ್ದವು
ನಾಲಗೆ ಕತ್ತರಿಸಿಕೊಂಡು
 
ಪ್ರಾತ್ಯಕ್ಷಿಕೆಗೆ ಬೆಳಕು
ಕಣ್ಣು ಕಳೆದುಕೊಂಡಿದ್ದೇ ಬಂತು
ಯಾರು ನಿಂತರು? ನನ್ನಂತವರು
ಎದುರಿಗೆ ಕೆಲವರನ್ನು ಬಿಟ್ಟರೆ.
ಪ್ಲಥ್ವಿ ಬಾಯಿ ಬಿಡಲಿಲ್ಲ
ಬಿಟ್ಟಿದ್ದರೆ ಮಡಿಸಿಟ್ಟ ಬೆಳಕನು ಬಿಡಿಸುವ ದರ್ದು
ನನ್ನದಾಗುತ್ತಿರಲಿಲ್ಲ
ಘೋರ ಅಕೃತ್ಯಗಳನ್ನು ನೋಡಿದ ಪಾಪವ
ಕಣ್ಣುಗಳು ತುಂಬಿಕೊಲ್ಳುವ ಹರೀಕತ್ತು ನಾಟುತ್ತಿರಲಿಲ್ಲ
ಅಯ್ಯೋ ನಾನಂಬವ ದೈವ ಶಕ್ತಿಯೇ
ಇನ್ನೆಂದೂ ಬಚ್ಚಿಡುವ ಗೋಜಿಗೆ ಹೋಗಲಾರೆ
ಇಷ್ಟ ಬಂದಂತೆ ಆಡುವ ಬೆಳಕನು.
 

‍ಲೇಖಕರು G

28 November, 2014

2 Comments

  1. vasudeva nadig

    hosa paribhasheyalli padyavannu hidididuva ranganath avaraddu appata hosadhvani..hosa nota

  2. mmshaik

    very nice..sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading