ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇದ್ದದ್ದು ಬಿಸಿಲಿಗೆ ಬೆನ್ನು ಹಾಕಿ ನಿಂತ ದೊಡ್ಡ ಕನ್ನಡಿ ಮಾತ್ರ…' – ಸುಧಾ ಶರ್ಮ

ನಾನು ನಾನೆ

ಸುಧಾ ಶರ್ಮಾ ಚವತ್ತಿ


ಇಳಿಮಧ್ಯಾಹ್ನದ

ಹಳದಿ ಬಿಸಿಲು
ಅವಳ ಕೆನ್ನೆಯಿಂದ
ಇಳಿಯುತ್ತಿತ್ತು.
ಕೆತ್ತಿಟ್ಟ ಶಿಲ್ಪದ ಹಾಗೆ.
ಕಣ್ಣು ಮೂಗು ಗಲ್ಲದ ಕೆಳಗೆ
ಸಪೂರ ಕುತ್ತಿಗೆ.
ಹೀಗೆ ನೋಡುತ್ತ ನಿಂತೆ.
ಬಿಸಿಲ ಬೆಳಕಿನ ಬಣ್ಣ
ಮುಖದ ಮೇಲೆ ಚಿತ್ತಾರ ಬಿಡಿಸುತ್ತಿತ್ತು.
ಮತ್ತೆ ಮತ್ತೆ ನೋಡಬೇಕೆನ್ನಿಸುತ್ತಿತ್ತು.

ಸ್ವಲ್ಪ ಹೊರಳಿದಳು ಹೀಗೆ.
ಕಾಲ ಸರಿದ ಹಾಗೆ.
ಇಳಿಸಂಜೆಯ ಹಳದಿಕೆಂಪಿನ ಬಿಸಿಲು
ಮುಖದಲ್ಲಿ ಫಳಫಳಿಸುತ್ತಿತ್ತು.
ಕಣ್ಣ ಕೆಳಗಿನ ನಿರಿಗೆ
ಕಿರಿದಾದ ಕಣ್ಣಂಚು
ಬಾಯಿ ಬಿಟ್ಟರೆ ಇಷ್ಟುದ್ದ ಹಲ್ಲು.
ಜೋತುಗಲ್ಲದ ಕೆಳಗೆ ಗೆರೆಗೆರೆ ಕುತ್ತಿಗೆ
ಅವಳ ಮುಖ ನೋಡಲು ಹೆದರಿದೆ.
ಅತ್ತ ಇತ್ತ ಸುತ್ತ ಮುತ್ತ ಕಣ್ಣಾಡಿಸಿದೆ
ಎಲ್ಲೂ ಯಾರೂ ಇಲ್ಲ.
ಇದ್ದದ್ದು ಬಿಸಿಲಿಗೆ ಬೆನ್ನು ಹಾಕಿ ನಿಂತ
ದೊಡ್ಡ ಕನ್ನಡಿ ಮಾತ್ರ.

‍ಲೇಖಕರು avadhi

30 January, 2014

5 Comments

  1. chalam

    ತುಂಬಾ ಚನ್ನಾಗಿದೆ.

  2. mmshaik

    nice one..

  3. lalithasiddabasavaiah

    fine ,,,fine

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading