ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದೇ ಕಣಪ್ಪ ‘ಪರಪಂಚ’: ಪಟ್ಟಾಪಟ್ಟೀ ಚೆಡ್ಡೀ ಕಳಿ..

ಪರಪಂಚದ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಹಾಡನ್ನು ಈಗಾಗಲೇ ಎಲ್ಲರೂ ಕೇಳಿದ್ದೀರಿ. 

ಇದು ಎರಡು ರೀತಿಯಲ್ಲಿ ಲಭ್ಯ. ಊರು ಬಿಡು ಅಂತ, ಬೇಡ ವಾಪಸ್ ಹೋಗು ಅಂತ.. 

ಈಗ ಕವಿ ರಾಜಶೇಖರ ಬಂಡೆ ತಮ್ಮದೇ ಅನುಭವವನ್ನು ಸೇರಿಸಿ ಮೂರನೇ ವರ್ಶನ್ ಬರೆದಿದ್ದಾರೆ. ಓದಿ- 

 

 

 

 

 

 

ರಾಜಶೇಖರ ಬಂಡೆ 

ಹೆತ್ತೋರೆ ಕುಂಡಿಮೇಲೆ ಒದ್ದು ಓಡಿಸುವಾಗ
ಇನ್ಯಾರ ಕೇಳುವುದು ಬಾಕಿಯಿದೆ
ಹಗ್ಲು ರಾತ್ರಿ ಅಂದೆ ಮೈ ಮೂಳೆ ಮುರ್ದಾ ಮೇಲೂ
ಮಾಡಿದ್ದೇನನ್ನೋವಾಗ ಇನ್ನೇನಿದೆ
ಬೆಂಗಳೂರಿನ ಬಸ್ಸು ನಿಂತಿದೆ ಓಡು ಸೇರದರೊಡಲನು
ಊರಿಗಿಂತಲು ಹಾಳುಕೊಂಪೆಯೆ ಬದುಕ ಕೊಡುವುದು ನಿಂಗಿನ್ನೂ..
ಯಾತಕ್ಕೆ ಯೋಚಿಸ್ತಿ ಮಗ್ನೇ
ಊರ್ಬುಟ್ಟು ಹೊಂಟೋಗು ಶಿವ್ನೇ …
ಪಟ್ಟಾಪಟ್ಟೀ ಚೆಡ್ಡೀ ಕಳಿ, ಪ್ಯಾಂಟೇರಿಸಿ ಬದ್ಕೋದ್ ಕಲಿ

ಇದ್ದಲ್ಲೆ ಇದ್ದರೆ ತುಕ್ಕಾಗಿ ಹೋಗ್ತಿಯ ನೀನುತ್ತ ನೇಗಿಲು ಮಣ್ಣಾದಂಗೆ
ಊರ್ಬಿಟ್ಟು ಹೋದರೆ ಉದ್ದಾರ ಆಗೋದು ಅಂತಾ ಬರ್ದವ್ನೆ ಬ್ರಹ್ಮ ನಿಂಗೆ
ತಂಗಾಳು ಕೂಳಿಗೆ ಹರ್ದೋದ ರೊಟ್ಟಿಗೆ ಮೀಸಲು ಆದೆ ನೀನು ತ್ಯಾಗಿ ಹಂಗೆ
ಪೀಜ್ಜಾ ಬರ್ಗರ್ರನು ತಿನ್ನದೆ ಇರೋ ಜನ್ಮ ಎಷ್ಟೊರುಷಾ ಇದ್ರು ಸತ್ತಂಗೆ..!

ಎಮ್ ಜೀ ರೋಡಿನ ಹುಡ್ಗೀರ್ ಚಂದಾನೋ, ಬ್ರಿಗೇಡ್ನಲ್ಲೀ ಎಣ್ಣೆ ಸಸ್ತಾನೋ
ಬೆಂಗ್ಳೂರು ಬಾರಿ ಮಜ್ವಂತೆ, ಏಸೀಲಿ ಕೂತರು ಕಾಸಂತೆ
ನಿನ್ ಗೆಳ್ಯ ಕೆಲಸ ನೋಡವ್ನೆ, ರೂಮಲ್ಲುಳ್ಯೋದಕ್ಕೆ ಬಿಡ್ತಾನೆ
ವಾರಕ್ಕೆರ್ಡ್ ವಿಕೆಂಡು ಅಂತಾರೋ, ಕೈ ತುಂಬ ಸಂಬಳ ಕೊಡ್ತಾರೋ
ನಿಂಗೂ ಡಿಮ್ಯಾಂಡಿದೆ ಮಗ್ನೇ, ಊರ್ಬಿಟ್ಟು ಹೊಂಟೋಗು ಶಿವ್ನೇ..
ಪಟ್ಟಾಪಟ್ಟೀ ಚೆಡ್ಡೀ ಕಳಿ, ಪ್ಯಾಂಟೇರಿಸಿ ಬದ್ಕೋದ್ ಕಲಿ..!

ಊರಲ್ಲೇನೈತಂತ ಬಾವಿ ಕಟ್ಟೆ ಮೇಲೆ ಬುರುಡೆ ಚಚ್ಚಿ ಕೊಳ್ಳೋದ್ಯಾಕೆ..?
ಅಪ್ಪ ಬೈತಾನಂತ ಅವ್ವಂಗೆ ಹೇಳಿ ನೀನು ಮೆಟ್ಟಿನೇಟು ತಿನ್ನೋದ್ಯಾಕೆ
ಹುಟ್ಟಿಗು ಸಾವಿಗು ಯಾವ ಕೊಂಡೀನೋ, ಗೋರಿ ಮ್ಯಾಗಳ ಹೂವು ನೀನೂ
ಇದ್ದಲ್ಲಿಂದಾ ಎದ್ದು ನಿಲ್ದಂಗೆ ಓಡು, ಊರಲ್ಲೆ ಉಳ್ದೋಗ್ಬಾರ್ದು ನಿನ್ನಂತೋನು

ಮನೆ ಜನ್ವೆಲ್ಲ ನಿನ್ನ ತಡಿತಾರೋ, ಮೊಸ್ಳೆ ಕಣ್ಣೀರಾಕಿ ಬ್ಯಾಡಂತಾರೋ
ಮದ್ವೆ ಮಾಡ್ತೀನಂತ ಅಂತಾರೋ ಯಾವ್ದಾದ್ರು ಗೂಬೇನ ಕಟ್ತಾರೋ
ಬೆಂಗ್ಳೂರಿಗ್ ನೀನೊಬ್ಬ ಜಾಸ್ತಿ ಅಲ್ಲ, ಯಾರ್ಬಂದ್ರು ಬ್ಯಾಡ ಅಂತನ್ನೋದಿಲ್ಲ,
ಅಣ್ಣಾ ಭಾಗ ಕೇಳ್ತಾ ಅವ್ನೆ, ಈಗಿರೊ ಮನೆನೂ ಅವ್ನ್ದೇನೆ
ಕಂಡೀಷನ್ ಹಿಂಗಿದೆ ಮಗ್ನೆ, ಊರ್ಬಿಟ್ಟು ಹೊಂಟೋಗು ಶಿವ್ನೇ
ಪಟ್ಟಾ ಪಟ್ಟೀ ಚೆಡ್ಡೀ ಕಳಿ, ಪ್ಯಾಂಟೇರಿಸಿ ಬದ್ಕೋದ್ ಕಲಿ…!

‍ಲೇಖಕರು Admin

19 January, 2016

2 Comments

  1. Chaithra

    wonderful Sir !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading