ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು 1973-74 ರ ಚಿತ್ರ.

ಇದು 1973-74 ರ ಚಿತ್ರ.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಕಾವೇರಿಗಾಗಿ ಬೀದಿಗಿಳಿದು ಉಗ್ರರೂಪ ತಾಳುವ ಮಂಡ್ಯದ ರೈತರು ಮತ್ತೊಬ್ಬರ ಕಷ್ಟಕ್ಕೆ ಕರಗುವ, ಮರುಗುವ ಹೃದಯವಂತರು ಎನ್ನುವುದನ್ನು ಸಾಬೀತುಪಡಿಸಿದ ಕ್ಷಣವದು.

ಮಂಡ್ಯದ ರೈತರು ಅಂದಿನ ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಮತ್ತು ಮುಖ್ಯಮಂತ್ರಿ ದೇವರಾಜ ಅರಸರ ಸಮ್ಮುಖದಲ್ಲಿ ಆ ಭಾಗದ ಜಾನುವಾರುಗಳಿಗೆ ಸುಮಾರು ಲಾರಿ ಲೋಡು ನೆಲ್ಲುಲ್ಲು ಅನ್ನು ಉದಾರವಾಗಿ ನೀಡಿ ಸಹಕರಿಸಿದ್ದರು. ಅವರೂ ರೈತರೇ ಅಲ್ಲವೇ?

ಇದು ಈ ಕ್ಷಣದಲ್ಲಿ ನೆನಪಿಗೆ ಬಂದದ್ದೇಕೆಂದರೆ, ರಾಜ್ಯದಲ್ಲಿ ಈಗಲೂ 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದೆ, ಜನರಿರಲಿ ಜಾನುವಾರುಗಳಿಗೆ ನೀರು ನಿಡಿ ಸಿಗದಂತಾಗಿದೆ, ಮಾರುವಂತಹ ಸಂದರ್ಭ ಸೃಷ್ಟಿಯಾಗಿದೆ. ಅಂದಿನ ಈ ಚಿತ್ರ, ಇಂದು ಸಂಕಷ್ಟಕ್ಕೀಡಾದವರ ನೆರವಿಗೆ ದಾರಿ ಮಾಡಿಕೊಡಬಹುದೆ ಎಂಬ ಸಣ್ಣ ಆಸೆಯಷ್ಟೆ….

-ಬಸೂ ರಾಜು 

‍ಲೇಖಕರು Admin

31 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading