ಇದು ಸರಳ ಮದುವೆಯ ತಾಣ

ನಾಗೇಂದ್ರ ಶಾ 

ದೃಶ್ಯ – 1
ಜೆ.ಪಿ.ನಗರದಲ್ಲಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನವಿದೆ. ಕುವೆಂಪುರವರ ಮಂತ್ರ ಮಾಂಗಲ್ಯದಂತೆ… ಸರಳ ಮದುವೆಗೆ ಹೆಸರಾಗಿದೆ. ನೀವು ಲಗ್ನ ಇಟ್ಟುಕೊಂಡು ಯಾವುದೇ ದಿನ ಬನ್ನಿ. ಎಷ್ಟೇ ಜೊತೆ ಮದುವೆ ಇರಲಿ… ದೇವಸ್ಥಾನದವರೆ ಜವಾಬ್ದಾರಿ ವಹಿಸಿಕೊಂಡು ಮಾಡಿಸುತ್ತಾರೆ. ಒಂಥರ ಸಾಮೂಹಿಕ ಮದುವೆ ಇಷ್ಟವಿಲ್ಲದವರು. ಸರಳ ಮದುವೆಗೆ ಇಷ್ಟ ಪಡುವವರು ಇಲ್ಲಿ ಮದುವೆ ಮಾಡಿಕೊಳ್ತರೆ. ಒಳ್ಳೇ ಸಂಪ್ರದಾಯ. ಮೊನ್ನೆ ನಮ್ಮ ಸ್ನೆಹಿತರ ಮದುವೆ ಇಲ್ಲಾಯ್ತು. ಅಂದು ಐದು ಮದುವೆ ಇತ್ತು. ಅಷ್ಟೂ ಮದುವೆಯನ್ನು ಸರದಿಯ ಪ್ರಕಾರ, ಸರಳ ಸುಂದರವಾಗಿ, ಶಾಸ್ತ್ರೋಕ್ತವಾಗಿ. ಎಲ್ಲವನ್ನೂ ಅವರೇ ವ್ಯವಸ್ಥೆ ಮಾಡಿ ಮುಗಿಸಿಕೊಟ್ಟರು. ಇದು ಸಂತೊಷದ ವಿಚಾರ.

Tirumalagiri Lakshmi VenkateshwaraSwamy temple Inside View

ದೃಶ್ಯ – 2
ಮದುವೆ ಮುಗಿದ ನಂತರ ಮಧ್ಯಾಹ್ನದ ಮದುವೆ ಊಟವಿಲ್ಲದಿದ್ದರೆ ಹೇಗೆ…?! ಊಟದ ವ್ಯವಸ್ಥೆಯನ್ನು ಅವರೇ ಮಾಡಿರುತ್ತಾರೆ. ಮುಂದಿನ ಭಾಗವೇ ಸ್ವಲ್ಪ ಕಸಿವಿಸಿ. ಒಳಗಡೆ ಊಟದ ಹಾಲ್‍ನಲ್ಲಿ ಹತ್ತು ಸಾಲುಗಳಿದೆ. ಅಂದು ಎಷ್ಟು ಮದುವೆಗಳಾಗತ್ತೋ ಅಷ್ಟು ಮದುವೆಗೆ ಸಾಲುಗಳನ್ನ ವಿಂಗಡಿಸಿ ಮೀಸಲಿಡುತ್ತಾರೆ. ಅಂದ್ರೆ ಅವತ್ತು ಐದು ಮದುವೆಗಳಾಗಿತ್ತು.

ಅಲ್ಲಿಗೆ ಒಂದು ಮದುವೆಯ ಕಡೆಯವರಿಗೆ ಎರಡು ಸಾಲಿನಂತೆ ಮೀಸಲು. ಪ್ರತಿ ಸಾಲಿನ ಮುಂದೆ ಒಂದು ಮದುವೆಯ ಕಡೆಯವರು ನಿಂತಿರಬೇಕು. ಅವರು ನಿಮ್ಮವರಾರು, ಬೇರೆ ಮದುವೆಗೆ ಬಂದಿರುವವರಾರು ಅಂತ ಗೂಡಚಾರಿಕೆ ಮಾಡುತ್ತಿರಬೇಕು. ತಮ್ಮ ಕಡೆಯವರಿಗೆ ಮೀಸಲಿರುವ ಸಾಲಿನಲ್ಲಿ ತಮ್ಮವರನ್ನು ಕೂಡಿಸಬೇಕು. ಇದೆಲ್ಲವನ್ನೂ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ.

ಎಷ್ಟೆಂದ್ರೆ… ಊಟ ಬಡಿಸುವ ಮುನ್ನ ಸಾಲಿಗೆ ಬಂದು ಮದುವೆ ಕಡೆಯವರು ಇವರು ನಮ್ಮವರು ಅಂತ ಹೇಳ್ಬೇಕು. ಬೇರೆ ಕಡೆಯವರು ನಿಮ್ಮ ಸಾಲಿನಲ್ಲಿ ಕೂತಿದ್ದರೆ ಮುಲಾಜಿಲ್ಲದೆ ನೀವು ಯಾರ ಕಡೆಯವರು ಅಂತ ಕೇಳಿ ತಮ್ಮರಲ್ಲದಿದ್ದರೆ ಎಬ್ಬಿಸಿ ನಿಮ್ಮ ಮದುವೆಯವರ ಕಡೆ ಸಾಲಿಗೆ ಹೋಗೀಂತ ಕಳಸ್ತರೆ.

ವಾಟ್ಟೂ…ಡೂ…?!

‍ಲೇಖಕರು admin

March 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸಿದ್ದ

    ಸರಳ ಏನಓ ಸರಿ
    ಆದರೆ ಊಟಕ್ಕೆ ಗೂಢಚಾರಿಕೆ ಹೆಚ್ಚು ಸರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: