ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಸಂಧ್ಯಾರಾಣಿಯ 'ನಾತಿಚರಾಮಿ'

ಮಂಸೋರೆ ನಿರ್ದೇಶನದ ಶ್ರುತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಚಿತ್ರದ ಕಥೆ ಬರೆದವರು ಎನ್ ಸಂಧ್ಯಾರಾಣಿ.
ಅಷ್ಟೇ ಅಲ್ಲದೆ ಸಂಭಾಷಣೆಯನ್ನೂ ಸಂಧ್ಯಾರಾಣಿ ಹಾಗೂ ಅಭಯಸಿಂಹ ಬರೆದಿದ್ದಾರೆ.
ದೇಶದ ಅತ್ಯುನ್ನತ ಚಿತ್ರೋತ್ಸವ ‘ಮಾಮಿ’ಯಲ್ಲಿ ಪ್ರದರ್ಶನವಾಗಲು ಈ ಚಿತ್ರ ಆಯ್ಕೆಯಾಗಿ ಈ ಚಿತ್ರದ ಯಶಸ್ಸನ್ನು ಪ್ರದರ್ಶನಕ್ಕೆ ಮುಂಚೆಯೇ ಸಾರಿಬಿಟ್ಟಿತ್ತು
ಈ ಚಿತ್ರದ ಕಥೆ ಹೆಣೆದ ಗೆಳತಿಯ ಬಗ್ಗೆ ಬಿ ವಿ ಭಾರತಿ ಆತ್ಮೀಯ ಬರಹ ಇಲ್ಲಿದೆ-

ಬಿ ವಿ ಭಾರತಿ
ನೆಂಟರ ಮದುವೆಗೆಂದು ಹೋಗುತ್ತಿರುವಾಗ ಕಪಾಲಿ ಥಿಯೇಟರ್ ಸಿಕ್ಕುಬಿಟ್ಟರೆ ಅದು ಇವಳ ಮತ್ತು ಇವಳ ಅಪ್ಪನ ತಪ್ಪೇ ಪಾಪ! ಹಾಗಾಗಿ ಮದುವೆ ಮುಂದೂಡಿ ಸಿನೆಮಾ ನೋಡುತ್ತಾರೆ…
ಏಳನೆಯ ಕ್ಲಾಸಿನ ಪರೀಕ್ಷೆಗೆ ಓದಿ ದಣಿದ ಮಗುವಿಗೆ ಪಾಪ ಸಿನೆಮಾ ನೋಡಿದರೆ ದಣಿವಾರುತ್ತದೆ ಎಂದು ಥಿಯೇಟರ್ ಗೆ ಕರೆದೊಯ್ದು ಅಲ್ಲಿ ಮೇಷ್ಟರು ಎದುರಾದರೆ ಇವರದ್ದೇನು ತಪ್ಪು?! ಮೇಷ್ಟರಿಗೆ ಇದ್ದದ್ದು ಇದ್ದಂತೆ ಹೇಳಿ, ಅವರಿಗೆ ಶಾಕ್ ಹೊಡೆಸುತ್ತಾರೆ ಅಪ್ಪ…
ಬೆಂಗಳೂರಿಗೆ ಬಂದು ದಿನಕ್ಕೆ ಮೂರು ಆಟ ನೋಡಿ ಹಿಂತಿರುವ ಮಹಾನ್ ಜೋಡಿ ಈ ಅಪ್ಪ-ಮಗಳು…

ರಾಜಾಸ್ಥಾನದಲ್ಲಿ ಇಡೀ ದಿನ ನಾಯಿ ಥರ ಸುತ್ತಾಡಿದ ಆ ಸಮಯದಲ್ಲೇ ದೀವಾನಿ ಮಸ್ತಾನಿ ಸಿನೆಮಾ ರಿಲೀಸ್ ಆಗಿದ್ದು ಅವಳ ತಪ್ಪಾ?! ಸೆಕೆಂಡ್ ಶೋಗೆ ಸಿನೆಮಾ ನೋಡಲೇಬೇಕೆಂದರು ಇವಳು ಮತ್ತು ಇವಳ ತಂಗಿ! ಇವಳ ಹಿಂದೆ ಬಾಲದಂತೆ ನಾನು, ಸಂಯು ಕೂಡಾ ಇದ್ದೆವು…
ಫಿಲ್ಮ್ ಫೆಸ್ಟಿವಲ್’ನ ಒಂದು ವಾರ 27-28 ಸಿನೆಮಾ ನೋಡಿ ಅವತ್ತು ರಾತ್ರಿ ಆಯಾಸ ಕಳೆಯಲು ಮತ್ತೊಂದು ಸಿನೆಮಾ ನೋಡುತ್ತಾಳೆ!
ಇಂತಿಪ್ಪ ಇವಳನ್ನು ನಾನು ಯಾವಾಗಲೂ ರೇಗಿಸ್ತಿರ್ತೀನಿ ‘ಭಾರತೀಯ ಚಿತ್ರರಂಗ ಉಳಿದಿರೋದೇ ನಿನ್ನಿಂದ ಮಹಾಮಾತೆ’ ಅಂತ
ಇಂಥ ಈ ಮಹಾನ್ ಸಿನೆಮಾ ಪ್ರೇಮಿ ಈಗ ಸ್ವತಃ ಸಿನೆಮಾಗೆ ಕಥೆ ಬರೆದಿದ್ದಾಳೆ ಅನ್ನುವುದು ನನ್ನ ಮಟ್ಟಿಗಂತೂ ರೋಮಾಂಚನಗೊಳಿಸುವ ಸುದ್ದಿ!
ಅದೀಗ ಮುಂಬಯಿ ಫಿಲ್ಮ್ ಫೆಸ್ಟಿವಲ್’ನಲ್ಲಿ ಪ್ರದರ್ಶಿತವಾಗಿ ಎಲ್ಲರ ಮೆಚ್ಚಿಗೆಗೆ ಪಾತ್ರವಾಗುತ್ತಿದೆ ಅಂದರೆ ನನಗದು ಸಂಭ್ರಮದ ಘಳಿಗೆ…
ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುವುದೊಂದು ಸಣ್ಣ ದುಃಖದಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರದರ್ಶಿತವಾದಾಗ ಮೊದಲ ಶೋ, ಮೊದಲ ರೋನಲ್ಲಿ ನಾನಿರುತ್ತೇನೆ ಎನ್ನುವ ಆಶಾವಾದದಲ್ಲಿದ್ದೇನೆ ಸ್ಯಾಂಡ್ಸ್.
“ನಾತಿಚರಾಮಿ” ಗೆ, ಸಂಧ್ಯಾಗೆ, ಮಂಸೋರೆಗೆ, ಮತ್ತು ಇಡೀ ತಂಡಕ್ಕೆ ಗುಡ್ ಲಕ್

‍ಲೇಖಕರು avadhi

27 October, 2018

5 Comments

  1. Sandhyarani

    Thanks a lot!….

  2. Kira Bhat.

    ಮನದುಂಬಿದ ಹಾರೈಕೆಗಳು.

  3. ಭಾರತಿ ಬಿ ವಿ

    ಥ್ಯಾಂಕ್ಸ್ ಅವಧಿ

  4. Uma Vallish

    ಪ್ರಿಯ ಸಂಧ್ಯಾ ಶುಭ ಹಾರೈಕೆಗಳು ಪ್ರಿಯ ಭಾರತಿ ನಿನ್ನ ಅಭಿಮಾನಿ ನಾನು ನಿನ್ನ ಬರವಣಿಗೆಯ ಬಗ್ಗೆ ಸದಾ ನನಗೆ ಮೆಚ್ಚಗೆ ಅಭಿಮಾನ

  5. Shyamala Madhav

    ಮುಂಬೈಯಲ್ಲಿ ಕಾಯುತ್ತಿದ್ದೇವೆ, ಸಂಧ್ಯಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading