ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಖಾಲಿತನದ ಸಮಯ..

ಸುಮಿತ್ ಮೇತ್ರಿ

ಇದು
ಖಾಲಿತನಕ್ಕೆ ತಗುಲಿದ
ಖಾಲಿತನದ ಸಮಯ

ಅವರು ಇವರು
ನಾವು ನೀವು
ಇದ್ದಾಗ ಅಷ್ಟಾಗಿ
ಗಮನಿಸಿರುವುದಿಲ್ಲ
ಇಲ್ಲವಾದಾಗ ಮಾತ್ರ
ಎಲ್ಲರನ್ನೂ ಸೆಳೆಯುತ್ತದೆ ಗಮನ.

ಇಲ್ಲವಾದವರು ನಾವೇ,
ಮನುಷ್ಯರು!
ಪೋಟೋ ಅಪ್ಲೋಡ್ ಮಾಡಿ
ಒಂದು ಹಾಡು ಕೇಳಿ
ಸಾವಿಲ್ಲದಂತೆ
ಮೌನಾಚರಣೆ ಮಾಡಿ
ಕಣ್ಣೀರಾಗಿ ವಿದಾಯಿಸಿಬಿಡುತ್ತೇವೆ.

ಕನ್ನಡಿಯಲ್ಲಿ
ನೋಡ್ಬೇಕಾದವರು ನಾವೇ
ಇಲ್ಲವಾದವರನ್ನು
ಕನ್ನಡಿಯಲ್ಲಿ ಹಿಡಿದು ಹಾಕುತ್ತೇವೆ.

ಇದು
ಖಾಲಿತನಕ್ಕೆ ತಗುಲಿದ
ಖಾಲಿತನದ ಸಮಯ.

‍ಲೇಖಕರು avadhi

30 April, 2020

2 Comments

  1. Channappa Katti

    ಮನುಷ್ಯ ಸಂಬಂಧಗಳ ಹುಡುಕಾಟದ ನಿಷ್ಪ್ರಯೋಜಕತೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ ಸುಮಿತ್ ಮೇತ್ರಿ ಅವರು.
    ಅಭಿನಂದನೆಗಳು ಕವಿಗಳಿಗೆ ಹಾಗೂ ಅವಧಿ ಬಳಗಕ್ಕೆ.

  2. ರಾಘವೇಂದ್ರ ಜೋಶಿ (ಬಂಡು)

    ಮಾನವ ಕಣ್ಣೆದುರಿಗಿದ್ದಾಗ ಎಂದೂ ನೋಡದ, ಎದುರಿಗೆ ಬಂದಾಗ ಮಾತನಾಡಿಸುವ ವ್ಯವಧಾನವೂ ಇಲ್ಲದಿರುವಾಗ.. ದಿಢೀರನೆ ಆತನೊಮ್ಮೆ ಇಲ್ಲವಾದಾಗ ಆತನ ಛಾಯಾಬಿಂಬವನ್ನು ಚೌಕಟ್ಟಿನಲ್ಲಿ ಬಂಧಿಸಿ ನೆನೆಯುವಾಗ ನಮ್ಮವನಾಗಿರುತ್ತಾನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading