ಇಂದಿಗೂ ಇಂತಹ ಕನಸುಗಳು ನೂರಾರು ಮನದಲಿ..

ಸಿದ್ದೇಶ ಕಾತ್ರಿಕೆಹಟ್ಟಿ

 

ನಾನು ನನ್ನ ಹಟ್ಟಿ
ಹಟ್ಟಿ ನನ್ನನ್ನು ಮೌನಿಯನ್ನಾಗಿಸಿತು
ಯಾಕೋ ಏನೋ ಇಂದಿಗೂ ಗೊತ್ತಾಗುತ್ತಿಲ್ಲ.
ಅಡವಿ ಹಟ್ಟಿಯಲ್ಲಿ ಬದುಕುತ
ಅರಕು ಮುರುಕು ಬಟ್ಟೆಯನ್ನು ಸುತ್ತಿಕೊಂಡು
ಕೊರಗದೆ, ಸಿಕ್ಕ ತುತ್ತು ಅಂಬಲಿಯನ್ನು ತಿಂದು
ಗುಕ್ಕು ನೀರನ್ನು ಕುಡಿದು ಜೀವಿಸುತ್ತಿರುವವನು
 
ಅಂದೊಂದು ದಿನ
ನನ್ನಯ್ಯ ಗುಬ್ಬಚ್ಚಿಯ ಗೂಡಿನಂತೆ
ಪುಟ್ಟ ಗುಡಿಸಲನ್ನು ಕಟ್ಟಿದ್ದ
ಕೆಂಪು ಮಣ್ಣು, ಕಾಡುಕಲ್ಲು, ಅಡವಿ ಕಟ್ಟಿಗೆ
ಈಚಲು ಗರಿ, ಹಳ್ಳದ ಹುಲ್ಲು,
ತೆಂಗಿನ ಗರಿಯನ್ನು ಹೊದಿಸಿ ಇತರ ಸರೀಕರಂತೆ ಬಾಳಲು ಎಣಗುವವನು
 
ಮುಂಜಾನೆಯಲ್ಲಿ ನನ್ನ ಅಕ್ಕ ಅಂಗಳ ಸಾರಿಸಿ
ಗುರ್ರಾಳು ಚಟ್ನಿ, ಜೋಳದ ರೊಟ್ಟಿ ಸುಟ್ಟು
ಹೊಸ್ತಿಲು ಬಳಿದು, ಕುಂಕುಮ ಇಟ್ಟವಳು
 
ಗಡಗಢನೆ ನಡುಗಿಸುವ ಚಳಿಯನು ಲೆಕ್ಕಿಸದೇ
ನಮ್ಮ ಹೊಟ್ಟೆ ತುಂಬಿಸಲು ಅವ್ವ ಮಾಡುವ ಕೂಲಿ ಇಂದಿಗೂ ತಪ್ಪಿಲ್ಲ
 
ಮುಂದೊಂದು ದಿನ ನಮ್ಮಂಗಳದಾಗ
ನಮ್ಮ ಗುಂಡ ಕುರಿದೊಡ್ಡಿ ಕಟ್ಟಿಕೊಂಡಿದ್ದ
ಅಕ್ಕಯ್ಯ ಜೊತೆಗಾತಿ, ಪಾಲ,ಬೋರ, ಬಸ್ಯ,ಟರ್ರಿ, ಟಕ್ಕಿ
ಎಂದು ಕುಣಿಯುವ
ಕುರಿಗೆ ತಿಂದುಳಿದ
ರೊಟ್ಟಿಯ ಚೂರನ್ನು ತಿನ್ನಿಸಿದ್ದೇ……ತಿನಿಸಿದ್ದು…..
 
ಮಳೇ ಬಂತು……. ಹಳ್ಳ ಹರಿಯಿತು………
ಮಳೇ ಬಂತು……. ಹಳ್ಳ ಹರಿಯಿತು…..ಎಂದು
ಅಂಗಿಯ ಗುಂಡಿ ಬಿಚ್ಚಿ ಕುಣಿತಿದ್ದೆ.
 
ಇಂದಿಗೂ ಇಂತಹ ಕನಸುಗಳು
ನೂರಾರು ಮನದಲಿ.
 

‍ಲೇಖಕರು G

September 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. naveen pawar

    ಚೆನ್ನಾಗಿದೆ.ಅನುಭವ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: