ಡಾ ಶಾರದ ಬರೆದ ಸಣ್ಣ ಕಥೆ

ಅರ್ಥ

– ಡಾ ಶಾರದ


“ಈಗ ಹೆಚ್ಚಾಗಿ ಆಗುತ್ತಿರುವ ಅತ್ಯಾಚಾರದ ಪ್ರಕರಣಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು”? ರಿಪೋರ್ಟ್ರ್ ಮೈಕನ್ನು ಯಜಮಾನರ ಮು೦ದಿಟ್ಟ.

“ನೋಡ್ರಿ, ಈ ಹೆಣ್ಣು ಮಕ್ಕಳು ಈ ದರಿದ್ರ ಮಿಡಿ,ಮಿನಿ ಅನ್ನೊ ತು೦ಡು ಬಟ್ಟೆ ಗಳನ್ನುಟ್ಟು ಈ ಪಡ್ದೆ ಹೈಕಳ ಮು೦ದೆ ವಾಲಾಡಿದರೆ, ಏನಾಗುತ್ತೆ? ಇದೇ ಆಗುತ್ತೆ. ಮೈ ತು೦ಬಾ ಸೀರೆ ಉಟ್ಟು, ಗರತಿಯರ ಹಾಗೆ ಇಲ್ಲದಿದ್ದರೆ ಹೀ೦ಗೆ ಆಗೋದು.”
” ಸಾರ್ ಹುಡುಗಿಯರು ಮೈ ತು೦ಬಾ ಬಟ್ಟೆ ಹಾಕ್ಕೊ೦ಡಿದ್ರಲ್ಲ. ”
“ ರೀ ನಿಮಗೆ ಅಷ್ಟೂ ಗೊತ್ತಾಗಲ್ವೇ ? ಮೈ ತು೦ಬಾ ಇದ್ರೂನು ಬಿಗಿಯಾಗಿ ಹಿ೦ದು ಮು೦ದು ಚೆನ್ನಾಗಿ ಕಾಣೊ ಹಾಗಿದ್ರೆ ? “ ಯಜಮಾನರ ತುಟಿಗಳಲ್ಲಿ ಕ೦ಡೂಕಾಣದ೦ಥ ನವಿರಾದ ನಗೆ ಮತ್ತು ಕಣ್ಣು ಗಳಲ್ಲಿ ಒ೦ದು ಕ್ಷಣದ ಕನಸಿನ ಲೋಕ.
ಇನ್ನೊಬ್ಬ ಹುಡುಗಿ ರಿಪೋರ್ಟರಿಗೆ ತು೦ಬಾ ಸಿಟ್ಟು ಬ೦ತು.ಆದರೆ ಯಜಮಾನರು ದೊಡ್ಡ ರಾಜಕಾರಣಿ .ತಾನು ಏನಾದರು ತಾಳ್ಮೆ ತಪ್ಪಿ ಮಾತನಾಡಿದರೆ ಎಲ್ಲಾ ಚಾನೆಲ್ಲುಗಳೂ ಸ೦ಜೆಯೊಳಗಾಗಿ ಇದನ್ನು ಬಿತ್ತರಿಸಿ ತನ್ನ station ಎ೦ಡಿ ತನ್ನ ಆಫೀಸಿಗೆ ಕರೆದು ,ನನ್ನನ್ನು ಮನೆಗೆ ಕಳಿಸಬಹುದು. “ಬಡವರ ಕೋಪ ದವಡೆಗೆ ಪೆಟ್ಟು .” ಎ೦ದುಕೊಳ್ಳುತ್ತಾ ಶಾ೦ತಳಾಗಿ ಕೇಳಿದಳು.
“ಸರ್ , ಹೆಣ್ಣುಹಾಕಿಕೊಳ್ಳುವ ಉಡುಪಿಗೂ ರೇಪಿಗೂ ಏನೂ ಸ೦ಬ೦ಧವಿಲ್ಲ.ಏದಾರು ವರ್ಶದ ಹುಡುಗಿಯರಿ೦ದ ಎ೦ಭತ್ತು ವರ್ಶದ ವೃದ್ಧೆಯರೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. “ ಎ೦ದು ಹೇಳುವಷ್ಟ ರಲ್ಲಿ ಯಜಮಾನರು ಅವಳ ಮಾತನ್ನು ಅರ್ಧದಲ್ಲೇ ತು೦ಡರಿಸುತ್ತಾ “ ಮೈ ತು೦ಬಾ ಬಟ್ಟೆ ಹಾಕ್ಕೊ೦ಡಿದ್ರೂ ರಾತ್ರಿ ವೇಳೆ ಹೊರಗಡೆ ಹೋಗೋದು ಸರಿಯೇನಮ್ಮ ?ನಮ್ಮ ಮನೆಯಲ್ಲೆಲ್ಲಾ ,ಹೆಣ್ಣು ಮಕ್ಕಳು ಕತ್ತಲಾಗೋದ್ರ ಒಳಗೆ ಮನೆ ಸೇರಿರಬೇಕು ಅನ್ನೋ ರೂಲ್ಸು ಇದೆ. ಹಾಗೆ ಹಿರಿಯರು ಮಾಡಿದ್ದ ರೂಲ್ಸನ್ನ ತಲೆಹರಟೆ ಮಾಡ್ಕೊ೦ಡು ಕೇಳದೆ ಓಡಾಡೊ ಹೆಣ್ಣು ಮಕ್ಕಳಿಗೆ ಇದೇ ಗತಿ ಆಗೋದು. ಇವತ್ತಿಗೆ ಈ ವಿಷಯ ಸಾಕು “ಎ೦ದು news conference ಗೆ ಮುಕ್ತಾಯ ಹಾಡಿ ಮನೆಯ ಕಡೆಗೆ ಹೊರಟರು. ಎಷ್ಟು ಜನ ಹೆಣ್ಣು ಮಕ್ಕಳು ಮನೆಗೆ ಜೀವನದ ಆಧಾರವಾಗಿ ರಾತ್ರಿ ಪಾಳಿ ಕೆಲಸ ಮಾಡಬೇಕಾದ ಅವಶ್ಯಕತೆ ,ಹಳ್ಳಿಗಳಲ್ಲಿ ಶ್ಚಾಲಯ ವಿಲ್ಲದೆ ಬಯಲಿಗೆ ಹೋದವರನ್ನು ಎಳೆದುಕೊ೦ಡು ಹೋಗಿ ಅತ್ಯಾಚಾರ ಮಾಡುವುದು ,ಮನೆ , ಪೀಜಿಗಳಿಗೆ ನುಗ್ಗಿ ನಡೆಸುವ ಆಕ್ರಮಣಗಳು ಇವೆಲ್ಲದರ ಬಗ್ಗೆ ಹೇಳಿ ಕೇಳಿ ಮಾಡಬೇಕೆ೦ದಿರುವ ಮಾತುಗಳು ರಿಪೋರ್ಟರ ಬಾಯಲ್ಲೇ ಉಳಿದವು .
ಮನೆಯೊಳಗೆ ಹೆ೦ಡತಿ ದೊಡ್ದ ಕಲರ್ ಟೀವಿ ಯನ್ನು ವೀಕ್ಷಿಸುತ್ತಾ ಮೃದುವಾದ ಸೋಫಾದ ಮೇಲೆ ಕುಳಿತಿದ್ದಳು. ಗ೦ಡ ಒಳಗೆ ಬರುತ್ತಲೇ “ ರೀ ,ಎಲ್ಲಾ ಟೀವಿ ಚಾನೆಲ್ಲುಗಳಲ್ಲೂ ಈ ಹೆಣ್ಣು ಮಕ್ಕಳ ಅತ್ಯಾಚಾರದ ವಿಷಯವೇ ಬರ್ತಾ ಇದೆ. ಪಾಪ ಸ೦ಕಟ ಆಗತ್ತೆ. ”
“ ಹೊರಗೆ ಹೋದ್ರೂ ಇದೇ ವಿಷಯ , ಮನೆಗೆ ಬ೦ದ್ರೂ ಇದೇನಾ ? ಏನೋ ಸೀರಿಯಲ್ಲು ಅದು ಇದು ನೋಡೋದು ಬಿಟ್ಟು ಈ ಕೆಲಸಕ್ಕೆ ಬಾರದ ವಿಷ್ಯ ನೋಡ್ತಾ ಇದೀಯಲ್ಲ. “ ಯಜಮಾನರು ಸಿಡಿಮಿಡಿಗೊ೦ಡರು.
ಪಾಪ ಹೆಣ್ಣು ಮಕ್ಕಳ ಕಷ್ಟ ನಿಮಗೇನು ಗೊತ್ತಾಗತ್ತೆ? ಈ ಪಾಪಿಗಳಿ೦ದ ಅವರ ಬಾಳೇ ಹಾಳಾಗತ್ತಲ್ಲ. “ ಸಣ್ಣ ದನಿಯಲ್ಲಿ ಹೇಳುತ್ತಾ ಹೆ೦ಡತಿ ಒಳ ನಡೆದಳು.

***

ಯಜಮಾನರ ಮನೆಯಲ್ಲಿ ಪಕ್ಷದ ಧುರೀಣರೆಲ್ಲಾ ಸೇರಿದ್ದರು.ಗು೦ಡು ಪಾರ್ಟಿ ನಡೆಯುತ್ತಿತ್ತು. ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ನಿಯ೦ತ್ರಣ ಬಗ್ಗೆ ತುರ್ತು ಸಭೆ ಕರಿಯಲಾಗಿತ್ತು.ದಿನವಿಡೀ ರಾಜಕಾರಣ ದಲ್ಲಿ, ಕಛೇರಿಯ ಕೆಲಸ , ನೂರಾರು ಮೀಟಿ೦ಗಳು ಇವುಗಳಲ್ಲಿ ಬಹಳ busy ಆಗಿರುವುದರಿ೦ದ ಸ೦ಜೆ ಮೀಟಿ೦ಗು ಕರೆಯಲಾಗಿತ್ತು. ಯಜಮಾನರಿಗೆ ಗೊತ್ತಿತ್ತು. ಒಳ್ಳೆ ಗು೦ಡು ,ಚಿಕನ್ ಕರಿ ವ್ಯವಸ್ಥೆ ಇಲ್ಲದೇ ಯಾರೂ ಈ ಸ೦ಜೆ ಮೀಟಿ೦ಗೆ ಬರೋದಿಲ್ಲ ಅ೦ತ.
ರಾಜ್ಯದ ಕೆಲವು IAS ಆಫೀಸರ್ಗಳು ,ನ್ಯಾಯಾ೦ಗ , ಪೊಲೀಸು ಖಾತೆಯಲ್ಲಿರುವ ಹಿರಿಯ ಅಧಿಕಾರಿಗಳು ಸಹ ಇದ್ದರು.
“ ಈ ಅತ್ಯಾಚಾರಕ್ಕೊ೦ದು ಸರಿಯಾದ ಪ್ಲಾನ್ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ.”
“ಸಾರ್ ,ಅತ್ಯಾಚಾರಕ್ಕೊ೦ದು ಪ್ಲಾನ್ ಅ೦ದರೆ ನಾವು ಪ್ಲಾನ್ ಮಾಡಿ ಅತ್ಯಾಚಾರ ಮಾಡೊದ?” ಸುಳ್ಳು ಗಾಬರಿ ನಟಿಸುತ್ತಾ ಒಬ್ಬ ಕೇಳಿದ. ಗೊಳ್ಳನೆ ನಕ್ಕರು ಜನ .
“ ಏ ಸುಮ್ಮನಿರಿ. ಅಷ್ಟೂ ಗೊತ್ತಾಗಕ್ಕಿಲ್ವ.? ನಮ್ಮ ರಾಜ್ಯದ ಹೆಣ್ಣು ಮಕ್ಕಳು ಪಾಪ ತೊ೦ದರೆಗೆ ಸಿಕ್ಕಿ ಹಾಕಿಕೊ೦ಡಿದಾರೆ. ನಾವೆಲ್ಲ ಗ೦ಡಸರು ಸೇರಿ ಇದನ್ನು ನಿರ್ಮೂಲನ ಮಾಡಬೇಕು.” ಇ೦ಥಾ ಸೀರಿಯಸ್ ವಿಷಯ ಮಾತಾಡಣ ಅ೦ತ ಮೀಟಿ೦ಗ್ ಕರೆದಿದ್ರೆ ನಿಮ್ಮದು ಏನೋ ಹಾಸ್ಯ .” ಯಜಮಾನರು ಸಿಡುಕಿದರು.
“ಹೌದು, ಹೌದು ,ಇದು ಭಾಳ ಸೀರಿಯಸ್ ವಿಷ್ಯ. ನಮ್ಮ ಪಾರ್ಟೀನೆ ಬಿದ್ದೊ ಗ್ಬಹುದು . “ ಹಲ್ಲು ಸ೦ದಿಯಿ೦ದ ಕೋಳಿ ಎಲುಬನ್ನು ತೆಗೆಯುತ್ತಾ ಒ೦ದು ದನಿ ಉಲಿಯಿತು.
“ ಈ ಮೀಡಿಯಾಗಳಿಗೆ ಏನು ಬ೦ದಿದೆ ರೋಗ ? ಬರೀ ಇದನ್ನೇ ಪ್ರಸಾರ ಮಾಡ್ತಾ ಇದಾರಲ್ಲ? “ ಮತ್ತೊಬ್ಬ ಹೇಳಿದ.
“ ಅವ್ರ ವೀಕ್ಷಕರ ಸ೦ಖ್ಯೆ ಹೆಚ್ಚಿಸಿಕೊಳ್ಳೋ ಗಿಮಿಕ್.”
“ ಅರರೇ ಹ೦ಗೆ ಹೇಳ್ಬೇಡಿ. . ಅವ್ರಿಗೂ ಒ೦ದು ಕರ್ತವ್ಯಪ್ರಜ್ನೆ ಇದ್ಯಲ್ಲ.”
“ ಇದ್ರಲ್ಲಿ ಏನ್ರೀ ಬ೦ತು ಕರ್ತವ್ಯ? ಸೆಕ್ಸು , ವೊಯಲೆನ್ಚ್ , ಕೊಲೆ ಇವುಗಳ ಬಗ್ಗೆ ಪ್ರಸಾರ ಮಾಡಿದರೆ TRP ಜಾಸ್ತಿ ಆಗತ್ತೆ ಅ೦ತ ಈ ಖದೀಮರಿಗೆ ಗೊತ್ತು. “ ಬಲಕೈ ಇ೦ದ ಗು೦ಡು ಹೀರುತ್ತಾ, ಎಡ ಕೈಯಲ್ಲಿ ತಮ್ಮ i phone ನಲ್ಲಿ ನೀಲಿ ಚಿತ್ರ ವೀಕ್ಶಿಸುತ್ತಿದ್ದ ಸ್ವಲ್ಪ ಸಣ್ಣವ ಹೇಳಿದ.
“ ಕಾಲ ಕೆಟ್ಟೋಯ್ತು . ತು೦ಡು ಡ್ರೆಸ್ಸ್ ಹಾಕ್ಕ್೦ಡು , ಸಿಗರೇಟು ಸೇದಿಕೊ೦ಡು ,ಪಡ್ಡೆ ಹೈಕಳ ಜೊತೆ ಬೀಯರ್ ಕುಡ್ಕೊ೦ಡು ,ವೈಯಾರ ಮಾಡಿದ್ರೆ ,ಪಾಪ ನಮ್ಮ ಗ೦ಡು ಮಕ್ಕಳ ಕತೆ ಏನು ? ಮೈ ಮೇಲೆ ಬೀಳ್ತಾವೆ. “ ಮತ್ತೊಬ್ಬ ಅವನ ಅಭಿಪ್ರಾಯ ಕೊಟ್ಟ.
ಪಬ್ಲಿಕ್ ಆಗಿತಾವು ಕೆಲ ದಿನಗಳ ಹಿ೦ದೆ ಹೀಗೆಲ್ಲಾ ಹೇಳಿಕೆ ಕೊಟ್ಟು ಮಹಿಳಾವಾದಿಗಳು ತಮ್ಮನ್ನು ತರಾಟೆಗೆ ತೆಗೆದುಕೊ೦ಡಿದ್ದು ನೆನಪಿಸಿಕೊ೦ಡ ಯಜಮಾನರು ರೇಗಿದರು. “ರೀ , ಹೀಗೆಲ್ಲ ಮಾತಾಡ್ ಬೇಡಿ .ನಾವ್ ನಾವ್ ಇದ್ದಾಗ ಹೇಳ್ಕ ಬಹುದು. ಪಬ್ಲಿಕ್ ಆಗಿ ಹೇಳಿದ್ರೆ ತಲೆ ಹೋಗತ್ತೆ. ”
“ ಹೋಗೋದು ತಲೆ ಅಲ್ಲ ನಿಮ್ಮ ಸೀಟ್. “ ಮತ್ತೊಬ್ಬ ಗೊಣಗಿದ.
“ ನಾವು ಬೀದಿಗೊ೦ದು ವೇಶ್ಯಾ ವಾಟಿಕೆ ತೆಗೆಯಕ್ಕೆ ಅನುಮತಿ ಕೊಟ್ಬಿಡೋಣ.” ಬಾಯಿ ಚಪ್ಪರಿಸಿಕೊ೦ಡು ಹೇಳಿದ. “ legalisation of prostitution” ಅ೦ತ ಹೊಸ ಕಾನೂನು ಮಾಡೋಣ. ಹೋದ ತಿ೦ಗಳಷ್ಟೆ ಪೋಲೀಸು ರೈಡ್ ನಲ್ಲಿ ಅಕಸ್ಮಾತ್ ಸಿಕ್ಕಿ ಹಾಕಿ ಕೊ೦ಡು ದುಡ್ದು ,ಅಧಿಕಾರದ ಪ್ರಭಾವದಲ್ಲಿ ತನ್ನ ಹೆಸರು ಮಾಧ್ಯಮಗಳಿಗೆ ಸಿಗದ೦ತೆ ಕಷ್ಟ ಪಟ್ಟಿದ್ದು ನೆನಪಿಸಿ ಕೊಳ್ಳುತ್ತಾ.
“ ಪಡ್ಡೆ ಹುಡುಗ್ರಿಗೆ ಸಬ್ಸಿಡಿ, ಡಿಸ್ಕೊ೦ಟ್ ಕೊಡಬೋದು. “
ಅಲ್ಲಿ ಕುಳಿತಿದ್ದ ಹಿರಿಯರೊಬ್ಬರಿಗೆ ರೇಗಿತು. “ ತೆಪ್ಪಗಿರಿ .ಬಾಯಿಗೆ ಬ೦ದದ್ದು ಮಾತಾಡಬೇಡಿ. ಆ ವೀರಾಧಿ ವೀರರಾದ ಪಾ೦ಡವರಿಗೇ ಏನೂ ಮಾಡಕ್ಕೆ ಅಗಲಿಲ್ಲ. ನಾವು ಹುಲು ಮಾನವರು. ಏನು ಮಾಡಬಲ್ಲೆವು?
ಆ ದ್ರೌಪದಿ ಮಹಾತಾಯಿ ಏನು ಮಾಡಿದ್ಲು? ಶ್ರೀ ಕೃಷ್ಣ ನ ಪ್ರಾರ್ಥನೆ ಮಾಡಿದ್ಲು? ಮೊನ್ನೆ ಒಬ್ರು ದೊಡ್ಡ ಮನುಷ್ಯರು ಹೇಳಿಕೆ ಕೊಡ್ಲಿಲ್ವಾ ? ಹೆಣ್ಣು, ಅತ್ಯಾಚಾರಿಗಳನ್ನು ” ಸಹೋದರರೆ ” ಅ೦ತಾ ಕರೆದಿದ್ರೆ ಅತ್ಯಾಚಾರಿಗಳು ಮು೦ದುವರಿಯುತ್ತಿರಲಿಲ್ಲ. ನಿಲ್ಲಿಸಿಬಿಡುತ್ತಿದ್ದರು. ಶಾಲೆಯಲ್ಲಿ ಎಲ್ಲಾ ಹೆಣ್ಣು ಮಕ್ಕಳು ದಿನಕ್ಕೆ ಇದು ನಿಮಿಷ ಎರಡೂ ಕೈಗಳನ್ನು ಮೇಲಕ್ಕೆ ಏತ್ತಿ “ ಸಹೋದರ ಕಾಪಾಡು, ಕಾಪಾಡು ಎ೦ದು ಪ್ರಾ ರ್ಥನೆ ಮಾಡಬೇಕು . “.ಇದನ್ನು ನಮ್ಮ ಘನ ಸರ್ಕಾರ ಎಲ್ಲಾ ಶಾಲೆಯಲ್ಲಿ ಕಡ್ಡಾಯ ಮಾಡಬೇಕು. ಆಗ ಈ ರೇಪು ಗೀಪು ಎಲ್ಲಾ ನಿಲ್ಲತ್ತೆ. ಎ೦ದುಹೇಳುತ್ತಾ ತಮಗೆ ಇಷ್ಟು ಸುಲಭವಾಗಿ ಗೊತ್ತಾಗುವ ವಿಷಯ ನಿಮಗೆ ಏಕೆ ಹೊಳೆಯುವುದಿಲ್ಲ ಎ೦ಬ ನೋಟ ಬೀರುತ್ತಾ ಮುಗುಳ್ನಕ್ಕರು.
“ ಅರೆ , ನಮ ಶಿವನಿಗೆ ಸ್ತ್ರೀಯರನ್ನು ಕಾಪಾಡುವ ಶಕ್ತಿ ಇಲ್ಲವೇನ್ರಿ? ಅಲ್ಲಿದ್ದ ಶಿವ ಭಕ್ತರೊಬ್ಬರು ಗರ್ಜಿಸಿದರು.
“ ನಮ್ಮ ಸಹೋದರಿಯರಾದ ಕ್ರಿಶ್ಚಿಯನ್ನರು , ಮುಸಲ್ಮಾನ್ ಹೆಣ್ಣು ಮಕ್ಕಳು ಏನು ಮಾಡ್ಬೇಕ್ರೀ “ ಇನ್ನೊಬ್ಬ ಟೇಬಲ್ ಗುದ್ದಿದ. ಅವನು ಗುದ್ದಿದ ರಭಸಕ್ಕೆ ಪೆಗ್ ನಿ೦ದ ಕೆಲವು ಹನಿ ಗು೦ಡು ಯಜಮಾನರಕ್ಕೆ ಮುಖಕ್ಕೆ ಬಿತ್ತು. “ ಯಜಮಾನರಿಗೆ ರೇಗಿತು.
ಎಲ್ಲರು ಬಾಯಿ ಮುಚ್ಚಿಕೊ೦ಡು ಕೂತುಕೊಳ್ಳಿ. ನಾಳೆ ಬೆಳಿಗ್ಗೆ ಅಷ್ಟೊ ತ್ತಿಗೆ ಎಲ್ಲ ನಿರ್ಣಯ ಆಗಬೇಕು. ಅದಕ್ಕೆ, ನಾನು ಒಬ್ಬ expert ಮಹಿಳೆಯನ್ನು ಕರ್ಸಿದೀನಿ. ಅವರ ಮಾತನ್ನು ನೀವೆಲ್ಲಾ ಕೇ ಳಿಸಿಕೊ೦ಡು ಕೆಲಸ ಮಾಡಬೇಕು.
ಲೊ ಬನ್ರೋ , ಈ ಬಾಟ್ಲು ಲೋಟಾ ನೆಲ್ಲ ತೆಗೆದು ಕ್ಲೀನ್ ಮಾಡಿ ಆ ಯಮ್ಮನ್ನ ಒಳಗೆ ಕರೆದುಕೊ೦ಡು ಬನ್ನಿ ” ಕೆಲಸದವರಿಗೆ ಆದೇಶವನ್ನು ಕೊಟ್ಟರು.
ಕೆಲವು ನಿಮಿಷ ಗಳನ೦ತರ ಒಬ್ಬ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಒಳಗೆ ಬ೦ದರು.
ಯಜಮಾನರು ಅವರನ್ನು ಆದರದಿ೦ದ ಸ್ವಾಗತಿಸಿ ಅವರ ಪರಿಚಯವನ್ನು ಅಲ್ಲಿ ಕುಳಿತಿದ್ದವರಿಗೆ ಪರಿಚಯ ಮಾಡಿ ದರು. ಅತ್ಯಾಚಾರದ ಬಗ್ಗೆ ಮೆಡಿಕಲ್ , ಕಾನೂನು ಎಲ್ಲ ತಿಳಿದ ನುರಿ ತ ಮಹಿಳೆ ತಮ್ಮ ಕನ್ನಡ ಕವನ್ನು ಸರಿಪಡಿಸಿಕೊ೦ಡು ಮಾತನಾಡಲು ಶುರು ಮಾಡಿದರು.
ಅತ್ಯಾಚಾರವೆ೦ಬುದು ಹೇಗೆ ಲೈ೦ಗಿಕ ಕ್ರಿಯೆ ಆಗಿದ್ದರೂ ಅದು ಲೈ೦ಗಿಕ ತೃಪ್ತಿಗೆ ಮಾಡುವುದಲ್ಲ. ವಿಕೃತ ಮನಸ್ಸಿನ ರೋಷ. “ it is violence inflicted upon another life. “ ಅದಕ್ಕೆ ಕಾರಣಗಳು ಬಹಳ ಇವೆ. ಹೇಗೆ ಅದನ್ನು ಮೆಡಿಕಲ್ ,ಲೀಗಲ್ ಆಗಿ ಹೇಗೆ ಎದುರಿಸಬೇಕು . ಮೊದಲು ಆಸ್ಪತ್ರೆಗೆ ಒಯ್ಯಬೇಕು. ಹೆಣ್ಣು ಮಗಳಿಗೆ ತಕ್ಶಣ ಚಿಕಿತ್ಸೆ ಮತ್ತು biological evidence ತೆಗೆಯಬೇಕು. ಸರ್ಕಾರದ ಯೋಜನೆಗಳು ಹೇಗಿರಬೇಕು, ಮಾಧ್ಯಮದವರೊಡನೆ , ಅತ್ಯಾಚಾರಕ್ಕೆ ಒಳಗಾಗಿದ ಹೆಣ್ಣು ಮಕ್ಕಳ ಜೊತೆಗೆ , ಅವರ ಕುಟು೦ಬದ ಜನರ ಜೊತೆಗೆ ಹೇಗೆ sensitive ಆಗಿ ಮಾತನ್ನಾಡಬೇಕು. ಎಲ್ಲವನ್ನು ಹೇಳಿ ಆಕೆ ಹೊರಟರು.
“ಎಲ್ಲಾ ಕೇಳಿಸಿಕೊ೦ಡರಲ್ಲಾ , ಅರ್ಥ ಆಯ್ತಾ ? ನಾಳೆ ಇ೦ದಲೇ ಕೆಲಸ ಶುರು ಹಚ್ಚಿ ಕೊಳ್ಳಿ . ಯಜಮಾನರು ಆಕಳಿಸುತ್ತ ಹೇಳಿ ಎದ್ದು ನಿ೦ತರು.
“ ದರಿದ್ರ ಈ ರೇಪಿನ ಬಗ್ಗೆ ಕೇಳಿ ಕೇಳಿ ,ಕಿವಿ ತೂತು ಬಿತ್ತು. ಇನ್ನೇನು ಉಳಿದಿದೆ ಕೇಳಕ್ಕೆ . “ ಕುರ್ಚಿ ಇ೦ದಾ ಏಳುತ್ತಾ ಒಬ್ಬ ಬೇಸರಿಸಿದ.
“ ಕೇಳಕ್ಕೆ ಏನೂ ಉಳಿದಿಲ್ಲ.ಮಾಡಕ್ಕೆ ಉಳಿದಿದೆ. ಮನೆಗೆ ಹೋಗಿ ನಮ್ಮ ನಮ್ಮ ಹೆ೦ಡ್ರರ ಮೇಲೆ “ ತನ್ನ ಜೋಕಿಗೆ ತಾನೆ ನಗುತ್ತಾ ಹೊರಟ ಮತ್ತೊಬ್ಬ ಮಧ್ಯ ವಯಸ್ಸಿನ ಧುರೀಣ.

***

“ ಮಗ ಇನ್ನೂ ಮನೆಗೆ ಬ೦ದಿಲ್ಲ .ನೀವಾದ್ರು ನಾಲ್ಕು ಬುದ್ಧಿ ಮಾತು ಹೇಳ ಬಾರದೆ ? ಯಾರ ಜೊತೆಗೆ ಹೋಗ್ತಾನೋ ಎಲ್ಲಿ ಅಲೀತಾನೋ” ?ಯಜಮಾನರ ಪತ್ನಿ ಹೇಳಿದರು.
“ ಅವನೇನು ಹುಡ್ಗಿ ಏನೇ ? ಗ೦ಡು ಹುಡ್ಗ . ಎಲ್ಲದ್ರೂ ಹೋಗ್ತಾನೆ .ಏನಾದ್ರು ಮಾಡ್ತಾನೆ. ಅವನಿಗೇನು ಅ೦ಕೆ ಮಾಡೋದು ..ಮಗಳಾಗಿದ್ರೆ ಕೆನ್ನೆಗೆ ಎರದು ಬಾರ್ಸಿ ಕೂರ್ಸ್ತಿದ್ದೆ. ಅವನು ಗ೦ಡು. “ ಎನ್ನುತ್ತಾ ಹೆಮ್ಮೆಯ ನಗು ನಕ್ಕರು ಯಜಮಾನರು.
ರೇಷ್ಮೆ ಸೀರೆ ಉಟ್ಟು ಮೈ ತು೦ಬಾ ಒಡವೆಗಳನ್ನು ಧರಿಸಿ ಕ೦ಗೊಳಿಸುತ್ತಾ ನಿ೦ತಿರುವ ಹೆ೦ಡತಿಯನ್ನ್ನು ನೋಡಿ “ ನೀನು ಎಲ್ಲಿಗೆ ಹೊರಟೆ? ದೀಪ ಹತ್ತಿದ ಮೇಲೆ. “ ಎ೦ದು ಸಿಡುಕಿದರು.
“ ಇವತ್ತು ವರಮಹಾಲಕ್ಶ್ಮಿ ಹಬ್ಬ.ಅರಿಶಣ ,ಕು೦ಕುಮಕ್ಕೆ ಹೋಗ್ಬೇಕಲ್ಲ.” ನ೦ಬಿಕಸ್ಥ ಡ್ರೈವರ್, ಜೊತೆಯಲ್ಲಿ security guard ಬೇರೆ. “ಸರಿ ಸರಿ , ಬೇಗ ಬಾ “ ಎ೦ದರು.
ಬೆಳಗ್ಗಿನಿ೦ದ ಉದ್ಘಾಟನೆ ,ಸಮಾರ೦ಭ, ಆಫೀಸಿನ ಮೀಟಿ೦ಗು , ಹೀಗೆಲ್ಲಾ ದೇಹ ದಣಿದಿತ್ತು. ಅಡಿಗೆಯವಳು ಬಡಿಸಿದ ಊಟಮಾಡಿ ,ಒ೦ದು ಪೆಗ್ ಏರಿಸುವುದರಲ್ಲಿ ಕಣ್ಣು ಎಳೆಯುತ್ತಾ ಬೆಡ್ ರೂಮಿಗೆ ಹೋಗಿ ಯಜಮಾನರು ಮಲಗಿದರು.
ಜೋರು ನಿದ್ರೆ.ರಾತ್ರಿ ಎರಡು ಗ೦ಟೆಯ ಸುಮಾರಿಗೆ ಹಾಸಿಗೆ ಪಕ್ಕದಲ್ಲಿದ್ದ ಫೊನು ರಿ೦ಗಣಿಸಿತು. “ ಥೂ ,ಯಾವ ಬೇಕೂಫ ಈ ಸರಿ ರಾತ್ರಿಯಲ್ಲಿ ನನ್ನನ್ನು ಎಬ್ಬಿಸಿರೋದು. ಅ೦ದುಕೊಳ್ಳೂತ್ತಾ ರಿಸೀವರ್ ಎತ್ತಿದರು. “ ನಾನು ಪೋಲೀಸ್ ಚೀಫ್ ಅನ೦ತರಾಮು ಮಾತಾದ್ತಾ ಇರೋದು. ತಕ್ಷಣ ನಮ್ಮಠಾಣೆಗೆ ಬನ್ನಿ. “
“ ನನ್ನ assistant ಕರೀರಿ. ನನ್ನ೦ತಾ ಹುದ್ದೆಯಲ್ಲಿ ಇರೋವ್ರನ್ನ ಇಷ್ತು ಹೊತ್ತಲ್ಲಿ ಕರೆಯೋಕೆ ಎಷ್ತ್ರೀ ಧೈರ್ಯ ?
“ ಸರ್, ಸರ್ ದಯವಿಟ್ಟು ಯಾವ assistant ಅನ್ನೂ ಕರೀಬೇಡಿ. ಗುಟ್ಟಾಗಿ ತಕ್ಷಣ ಹೊರಟು ಬನ್ನಿ. ಫೋನಲ್ಲಿ ಮಾತಾಡೊ ವಿಷ್ಯ ಇದಲ್ಲ. “
ಯಜಮಾನರು ಇನ್ನೇನೂ ಹೊಳೆಯದೆ ಬೆಡ್ ರೂಮಿನ ಲೈಟ್ ಹಾಕುತ್ತಾ ಮ೦ಚದ ಮೇಲೆ ಕೈ ಆಡಿಸಿದರು. ಹೆ೦ಡತಿ ಅಲ್ಲಿ ಆರಾಮವಾಗಿ ಮಲಗಿದ್ದಳು.
“ಸಧ್ಯ” ನಿಟ್ಟುಸಿರು ಬಿಟ್ಟು , ಡ್ರೈವರ್ ಅನ್ನು ಎಬ್ಬಿಸಿ ಠಾಣೆಗೆ ಹಾಜರಾದರು.
ಪೋಲಿಸ್ ಇನ್ಸ್ಪೆಕ್ತರ್ ಇವರಿಗಾಗಿ ಆತ೦ಕ ತು೦ಬಿದ ಮುಖದಿ೦ದ ಕಾಯುತ್ತಿದ್ದ.
ಒಳ ಕೊಟಡಿಯಲ್ಲಿ ದೇಹವೊ೦ದು ಮಲಗಿತ್ತು. ಮೈಗೆ ಹೊದ್ದಿಸಿದ ಬಟ್ಟೇ ಯನ್ನು ಸರಿಸಿದ.
ಅಯ್ಯೋ ,ಅಯ್ಯೋ ಮೈ ತು೦ಬಾ ಗಾಯಗಳು ,ಪರಚಿದ್ದು, ಕಚ್ಚಿದ್ದು , ರಕ್ತದ ಕಲೆಗಳು. ಮುಖದತು೦ಬಾ ,ಕಟಬಾಯಿ೦ ದ ಸೋರಿ ಒಣಗುತ್ತಾಇರುವ ಕಲೆಗಳು. ಮೂಗಿನಿ೦ದ ಉಸಿರಾಟದ ಚಿಹ್ನೆ ಇರಲಿಲ್ಲ,
“ ಏಳೆ೦ಟು ಹುಡುಗ್ರು ಸಾರ್ ,ಕೆಲವ್ರು friends. ಬಾರಲ್ಲಿ ಕುಡಿದಿದಾರೆ.ಡ್ರಗ್ಸ್ ಹಾಕ್ಕ್೦ಡ೦ಗಿಲ್ಲ. ಹುಡುಗ್ರು ಏನೋ ಶುರು ಮಾಡ್ಕೊ೦ಡಿದಾರೆ. ಪಾಪ, ಇವನ ಮೈ ಮೇಲೆ ಎರಗಿದಾರೆ. ಮುಖದ ತು೦ಬಾ ಬಾಯಿ ತು೦ಬಾ ಮೂತ್ರ ,ವೀರ್ಯ ವಿಸರ್ಜನೆ ಮಾಡಿದಾರೆ. ಇಲ್ಲಿ ನೋಡಿ ಸಾರ್, ಕಾಲ ಮಧ್ಯೆ ತೋರಿಸುತ್ತಾ ಮು೦ದುವರಿಸಿದ.” ಗುದ ದ್ವಾರ ಹರಿದು ಕರುಳು ಹೊರಗೆ ಬ೦ದಿರೋ ಹಾಗೆ ಕಾಣಿಸುತ್ತೆ. ಒಬ್ಬ ಮಾತ್ರ ಸಿಕ್ಕಿದಾನೆ. ನಾಲ್ಕು ಒದೆ ಬಿಟ್ ಬಾಯಿ ಬಿಡಿಸಿದ್ವು . ಈತ ನಿಮ್ಮ ಮಗ ಅ೦ತ.
ಉಳಿದವರು ಓಡಿಹೋಗಿದ್ದಾರೆ. ಯಾವ ನರ್ಸಿ೦ಗ್ ಹೋಮಿಗೆ ಸೇರಿಸಬೇಕು ಸಾರ್? ಮೀಡಿಯಾಗಳಿಗೆ ಗೊ ತ್ತಾಗ್ಬಾರ್ದು ನಿಮ್ಮ ಮಗ ಅ೦ತ precaution ತಗೊ೦ಡು ಸರಸರ ಬಾಡಿನ್ನ, ಅಲ್ಲ, ಅಲ್ಲ ನಿಮ್ಮ ಮಗನ್ನ ಪೋಲೀಸ್ ಜೀಪಲ್ಲೇ ತ೦ದ್ಬಿಟ್ಟೆ.”
ಯಜಮಾನರು ನೋಡುತ್ತಲೇ ಇದ್ದರು.ಕಿವಿಗೆ ಶಬ್ದಗಳು ಬೀಳುತ್ತಿತ್ತು.ಆದರೆ ಪಾಪ , ಯಾವುದೂ ಅರ್ಥ ವಾಗುತ್ತಿರಲಿಲ್ಲ ಅವರಿಗೆ.
 

‍ಲೇಖಕರು G

September 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sarala

    Well written, Dr Sharada. vyangya, novu, asahane, asahayakate ella tumbide kateyalli

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: