ಇಂಕು ಮೆತ್ತಿಕೊಂಡ ಶರ್ಟನ್ನು ಹಾಕಿಕೊಂಡೇ ಊರೆಲ್ಲಾ ಸುತ್ತಿದರು..

ನೆನ್ನೆಯಿಡೀ ಪೂರ ತುಮಕೂರಿನಲ್ಲಿ ಶೈನಾ ನುಡಿಹಬ್ಬದಲ್ಲಿದ್ದೆ.

BC Shyla Nagaraj Rangamma Hodekal ಈ ಕಾರ್ಯಕ್ರಮದ ಮುಖ್ಯ ರೂವಾರಿಗಳು..

ತುಂಬಾ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಒಂದು ಕುಟುಂಬದ ಮೆರಗಿತ್ತು ಎಂಬುದು ತುಂಬಾ ಖುಷಿಯ ವಿಚಾರ..
ಬರಗೂರರು ನುಡಿಯ ಬಗ್ಗೆ ಅದ್ಬುತವಾಗಿ ಮಾತನಾಡಿದರು..
ಇಂಕು ಮೆತ್ತಿಕೊಂಡ ಶರ್ಟನ್ನು ಹಾಕಿಕೊಂಡೇ ಊರೆಲ್ಲಾ ಸುತ್ತಿದ್ದನ್ನು ಹೇಳುತ್ತಾ ನುಡಿಯ ಮಹತ್ವವನ್ನು ವಿವರಿಸಿ ರೋಮಾಂಚನಗೊಳಿಸಿದರು…

ವಿನಯಾ ವಕ್ಕುಂದ ಅವರಿಗೆ ಕಾವ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು..
ಗೋಷ್ಠಿಯಲ್ಲಿ ಒಂಚೂರು ರೆಸ್ಟ್..
ಕವಿಗೋಷ್ಟಿ ಆಪ್ತವಾಗಿತ್ತು…
ಅಪ್ಪಟ ಪ್ರೀತಿಯಿಂದ ಮಾತ್ರ ಇಂತಹಾ ಕಾರ್ಯಕ್ರಮಗಳು ನಡೆಯುತ್ತವೆ..
ನಾನೂ ಅದರ ಒಂದು ಭಾಗವೆಂಬ ಹೆಮ್ಮೆ..

-ಚಲಂ ಹಾಡ್ಳಹಳ್ಳಿ 

shaina7

 

 

ಕಾವ್ಯಕ್ಕೆ ಕರುಳಿರಬೇಕು ಎಂದು ನಂಬಿದವರು ಬರಗೂರ ಸರ್. ಬರಹ ಮತ್ತು ಬದುಕು ಒಂದೇ ಎಂದು ಬಲವಾಗಿ ನಂಬಿದವರು. ಯಾವುದೇ ಸಿದ್ಧಾಂತ ಕಾಲನ ಕುಲುಮೆಯಲ್ಲಿ ಕಾದಾಗ ಮಾತ್ರ ಅದು ಪ್ರಸ್ತುತವಾಗುತ್ತದೆ. ಹಾಗೆ ಪುಟಗೊಂಡ ಚಿನ್ನದಂತ ಸಿದ್ಧಾಂತಗಳು ಮಾತ್ರ ಪ್ರಸ್ತುತವಾಗುತ್ತವೆ.

ಹತ್ತನೇ ಶತಮಾನದ ಪಂಪನಾದಿಯಾಗಿ ಹನ್ನೆರಡನೆಯ ಶತಮಾನದ ಶರಣ ಚಳುವಳಿಗಳು ಕೂಡಾ ಸಿದ್ಧಾಂತಕ್ಕೆ ಬದ್ದವಾಗಿದ್ದವು. ಸಧ್ಯದ ಪರಿಸ್ಥಿತಿಯಲ್ಲಿ ಸಂಸ್ಕೃತಿಯು ಕೂಡ ಮಾರಾಟವಾಗುವಂತಹ ಮಾರುಕಟ್ಟೆ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಹೇಳುತ್ತ ಸುಮಾರು ಒಂದು ಗಂಟೆ ನಮ್ಮನ್ನೆಲ್ಲ ತಮ್ಮ ಅಪೂರ್ವ ಮಾತುಗಳಿಂದ ಬೆರಗುಗೊಳಿಸಿದರು.

‘ಶೈನಾ’ ಎಂಬ ಕೈ ಬರಹ ಮಾಸಿಕ ಹದಿನಾರನೆಯ ವರ್ಷಕ್ಕೆ ಕಾಲಿಟ್ಟು ಸಾಹಿತ್ಯದ ವಲಯದಲ್ಲಿ ಅಪಾರ ಪ್ರೀತಿಯನ್ನು ಗಳಿಸಿಕೊಂಡಿದ್ದು ಸುಳ್ಳಲ್ಲ.
ಶೈನಾ ಕೊಡಮಾಡುವ ಪ್ರಶಸ್ತಿ ಯನ್ನು ಈ ಸಲ ಡಾ.ವಿನಯ ಒಕ್ಕುಂದ ರವರ “ಹಸಬಿ” ಕವನ ಸಂಕಲನದ ಪಾಲಾಗಿದೆ.
ವಿಶೇಷವೆಂದರೆ ಶೈನಾ ವ್ಯಾಟ್ಸ ಆಪ್ ಬಳಗ ಕೇವಲ ಒಂದು ಗುಂಪಾಗಿರದೆ ಒಂದು ಕೌಟುಂಬಿಕ ವಾತಾವರಣದ ಸೌಹಾರ್ದತೆ ಮೆರೆಯುತ್ತಿದೆ.ಸಮಾಜಮುಖಿಯಾಗಿ ಮುನ್ನೆಡೆಯುತ್ತಿದೆ.ಇದಕ್ಕೆ ಹೆಗಲು ಕೊಟ್ಟವರು BC Shyla Nagaraj ಮತ್ತು Rangamma Hodekal ಎಂಬ ದಣಿವರಿಯದ ಜೀವಗಳು.
ಕವಿಗೋಷ್ಟಿಯ ಅತಿಥಿಗಳನ್ನಾಗಿ ನನ್ನನ್ನು ಕರೆಸಿ ನನ್ನ ಜವಾಬ್ದಾರಿಯನ್ನುಕೂಡ ಎಚ್ಚರಿಸಿದ್ದಾರೆ.
ನಾಡಿನ ಮೂಲೆ ಮೂಲೆಗಳಿಂದ ಬಂದು ಯುವ ಕವಿ/ಕವಿಯತ್ರಿ ಯರು ಕವನ ವಾಚನ ಮಾಡಿದರು

-ವಿ ಎ ಲಕ್ಷ್ಮಣ್ 

shaina1

shaina9

shaina6

shaina5

 

shaina8

 

‍ಲೇಖಕರು admin

April 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: